ಮತ್ತೆ ಮುಂದಕ್ಕೆ ಹೋದ 'ಕವಚ' : ಬಿಡುಗಡೆ ಆಗೋದು ಯಾವಾಗ?
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ದಶಕದ ನಂತರ ರಿಮೇಕ್ ಸಿನಿಮಾದಲ್ಲಿ ನಟಿಸಿದ್ದಾರೆ. ರಿಮೇಕ್, ಸ್ವಮೇಕ್ ಎನ್ನುವುದಕ್ಕಿಂತ ಹೆಚ್ಚಾಗಿ ಇದೊಂದು ಒಳ್ಳೆಯ ಕಥೆಯ ಸಿನಿಮಾ. ಅದೇ 'ಕವಚ' ಚಿತ್ರ.
ಹಾಗೆ ನೋಡಿದರೆ, 'ಕವಚ' ಸಿನಿಮಾ ಕಳೆದ ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ, ಈ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಲೇ ಇದೆ. ಜನವರಿ 18ಕ್ಕೆ ಬಿಡುಗಡೆಯಾಗಲು ಸಿದ್ದವಾಗಿದ್ದ ಈ ಸಿನಿಮಾ ಮತ್ತೆ ಪೋಸ್ಟ್ ಪೋನ್ ಆಗಿದೆ.
ತಾಂತ್ರಿಕ ತೊಂದರೆಯಿಂದ 'ಕವಚ' ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗಲು ಸಾಧ್ಯ ಆಗುತ್ತಿಲ್ಲವಂತೆ. ಈ ಕಾರಣದಿಂದ ಸಿನಿಮಾದ ಬಿಡುಗಡೆ ಮುಂದಿನ ತಿಂಗಳಿಗೆ ಹೋಗಿದೆ.

'ಕವಚ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಂಧನ ಪಾತ್ರ ಮಾಡಿದ್ದಾರೆ. ಇತಿ ಆಚಾರ್ಯ ಹಾಗೂ ಇಶಾ ಕೊಪ್ಪಿಕರ್ ನಾಯಕಿಯರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಜಿ ಆರ್ ವಿ ವಾಸು ಸಿನಿಮಾದ ನಿರ್ದೇಶನ ಮಾಡಿದ್ದಾರೆ.
English summary
Kannada actor Shivaraj Kumar's 'Kavacha' movie release date postponed to february.


Click it and Unblock the Notifications