For Quick Alerts
  ALLOW NOTIFICATIONS  
  For Daily Alerts

  'ಕವಚ' ಚಿತ್ರದ ಆಗಮನಕ್ಕೆ ದಿನಾಂಕ ನಿಗದಿ.!

  |

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಶಿವರಾಜ್ ಕುಮಾರ್ ಅಭಿನಯದ ಕವಚ ಸಿನಿಮಾ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ರಿಲೀಸ್ ದಿನಾಂಕವನ್ನ ಮುಂದಕ್ಕೆ ಹಾಕಿಕೊಂಡಿತ್ತು.

  ಜನವರಿ ಮೊದಲ ವಾರದಲ್ಲೇ ಕವಚ ಸಿನಿಮಾ ಬರುತ್ತೆ ಎನ್ನಲಾಗಿತ್ತಾದರೂ, ಇನ್ನೆರಡು ವಾರ ಮುಂದಕ್ಕೆ ಹೋಗಿದೆ. ಹೌದು, ಜನವರಿ 18 ರಂದು ಕವಚ ಸಿನಿಮಾ ಜಗತ್ತಿನಾದ್ಯಂತೆ ತೆರೆಗೆ ಬರುವ ನಿರ್ಧರಿಸಿದೆ.

  ಮಲಯಾಳಂ ಭಾಷೆಯ ಒಪ್ಪಂ ಚಿತ್ರದ ರೀಮೇಕ್ ಆಗಿರುವ ಕವಚ, ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ. ಕುರುಡನ ಪಾತ್ರದಲ್ಲಿ ಶಿವಣ್ಣನ ಅಭಿನಯ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

  ದಾಖಲೆ ಬೆಲೆಗೆ ಮಾರಾಟವಾದ ಶಿವಣ್ಣನ 'ಕವಚ' ಪ್ರಸಾರ ಹಕ್ಕುಗಳು.!

  ಜಿ.ವಿ.ಆರ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಇಶಾ ಕೊಪ್ಪಿಕಾರ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆ ಕೃತಿಕಾ ಜಯರಾಂ, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.

  ಇನ್ನೂ 'ಕವಚ' ಚಿತ್ರದ ಆಡಿಯೋ ಹಕ್ಕುಗಳು ಜೀ ಮ್ಯೂಸಿಕ್ ಪಾಲಾಗಿದೆ. 43 ಲಕ್ಷಗಳನ್ನು ಕೊಟ್ಟು 'ಕವಚ' ಆಡಿಯೋ ರೈಟ್ಸ್ ಪಡೆದುಕೊಂಡಿದೆ ಜೀ ಮ್ಯೂಸಿಕ್. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸತ್ಯನಾರಾಯಣ ಮತ್ತು ಸಂಪತ್ ಬಂಡವಾಳ ಹಾಕಿದ್ದಾರೆ.

  English summary
  Century star Dr. Shivarajkumar starrer 'Kavacha’, wherein he plays the role of a visually challenged person, is set to hit the screens worldwide on January 18.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X