'ಕವಲುದಾರಿ' ಸಿನಿಮಾದ ಡಿಫರೆಂಟ್ ಪ್ರಮೋಷನ್
ಇಂದಿನ ದಿನಗಳಲ್ಲಿ ಸಿನಿಮಾವನ್ನು ಮಾಡುವುದಕ್ಕಿಂತ ಹೆಚ್ಚಾಗಿ ಸಿನಿಮಾವನ್ನು ಜನರಿಗೆ ತಲುಪಿಸುವುದು ಮುಖ್ಯ. ಸಿನಿಮಾದ ಪ್ರಚಾರದ ವಿಭಾಗದಲ್ಲಿಯೇ ಎಷ್ಟೋ ಚಿತ್ರಗಳು ಫೇಲ್ ಆಗಿ ಬಿಡುತ್ತದೆ.
ತಮ್ಮ ಸಿನಿಮಾವನ್ನು ಜನರಿಗೆ ತಲುಪಿಸಲು ಚಿತ್ರತಂಡಗಳು ಅನೇಕ ದಾರಿಯನ್ನು ಹುಡುಕುತ್ತವೆ. ಅದೇ ರೀತಿ ಈಗ 'ಕವಲುದಾರಿ' ಟೀಂ ಹೊಸ ಪ್ಲಾನ್ ಮಾಡಿದೆ. ತಮ್ಮ ವಿಭಿನ್ನ ಪ್ರಮೋಷನ್ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಟಿಶ್ಯೂ ಪೇಪರ್ ನಲ್ಲಿ 'ಕವಲುದಾರಿ' ಚಿತ್ರದ ವಿವರ, ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಿಂಟ್ ಮಾಡಲಾಗಿದೆ. ಈ ಮೂಲಕ ಸಿನಿಮಾ ಒಂದಷ್ಟು ಜನರಿಗೆ ತಲುಪಿಸಿದೆ. ಈ ಹಿಂದೆ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾಗೆ ಸಹ ಕಾಫಿ ಕಟ್ ನಲ್ಲಿ ಚಿತ್ರದ ಹೆಸರನ್ನು ಬರೆಯುವ ಮೂಲಕ ವಿಭಿನ್ನ ಪ್ರಮೋಷನ್ ಮಾಡಲಾಗಿತ್ತು.

ಪೋಸ್ಟರ್ ಗಳು ಬ್ಯಾನ್ ಆಗಿರುವ ಈ ಕಾಲಕ್ಕೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ಚಿತ್ರವನ್ನು ಜನರಿಗೆ ರೀಚ್ ಮಾಡಿಸಲಾಗುತ್ತಿದೆ. 'ಕವಲುದಾರಿ' ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾವಾಗಿದ್ದು, ಚಿತ್ರ ಏಪ್ರಿಲ್ 12 ರಂದು ಬಿಡುಗಡೆಯಾಗುತ್ತಿದೆ.
ಅನಂತ್ ನಾಗ್, ರಿಷಿ, ಸುಮನಾ ರಂಗನಾಥ್, ಅಚ್ಚುತ್ ಕುಮಾರ್ ಹಾಗೂ ರೋಷನಿ ಪ್ರಕಾಶ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಸಿನಿಮಾಗೆ ಇದೆ.


Click it and Unblock the Notifications