ಅಪ್ಪು ನಿರ್ಮಾಣದ ಮೊದಲ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ

Recommended Video

ಖಾತ್ರಿ ಆಯ್ತು ಅಪ್ಪು ನಿರ್ಮಾಣದ ಮೊದಲ ಸಿನಿಮಾದ ಬಿಡುಗಡೆ ದಿನಾಂಕ..? |FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಪಿ ಆರ್ ಕೆ ಪ್ರೊಡಕ್ಷನ್ ನಿಂದ ಮೂಡಿಬರುತ್ತಿರುವ ಮೊದಲ ಸಿನಿಮಾ 'ಕವಲುದಾರಿ'. ಪಿ ಆರ್ ಕೆ ಪ್ರೊಡಕ್ಷನ್ ನ ಕನಸಿನ ಕೂಸು 'ಕವಲುದಾರಿ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ.

ಚಿತ್ರ ಸೆಟ್ಟೇರಿ ಸುಮಾರು ವರ್ಷದ ಮೇಲಾಗಿದೆ. ಹಾಗಾಗಿ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎನ್ನುವ ಕಾತುರತೆ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಯಾಕಂದ್ರೆ. 'ಕವಲುದಾರಿ' ಬಿಡುಗಡೆ ದಿನಾಂಕವನ್ನು ಖುದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ, ಪವರ್ ಸ್ಟಾರ್ ನಿರ್ಮಾಣದ ಮೊದಲ ಸಿನಿಮಾ 'ಕವಲುದಾರಿ' ಮುಂದಿನ ತಿಂಗಳು ಅಂದರೆ ಏಪ್ರಿಲ್ 12ಕ್ಕೆ ತೆರೆಮೇಲೆ ಬಲಿದೆ.

Kavaludaari kannada movie official release date announced

'ಕವಲುದಾರಿ' ಅಪ್ಪು ನಿರ್ಮಾಣದ ಪಿ ಆರ್ ಕೆ ಬ್ಯಾನರ್ ನಿಂದ ಮೂಡಿಬರುತ್ತಿರುವ ಚಿತ್ರ ಅನ್ನುವ ವಿಶೇಷತೆ. ಆದ್ರೆ ಮತ್ತೊಂದೆಡೆ ಸೂಪರ್ ಹಿಟ್ ಆದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರ ಅನ್ನೋದು ವಿಶೇಷ. ಈಗಾಗಲೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಿನಿಮಾ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿರುವ ಕವಲುದಾರಿ ಏಪ್ರಿಲ್ 12ಕ್ಕೆ ರಿಲೀಸ್ ಆಗುವುದು ಖಾತ್ರಿಯಾಗಿದೆ.

ಸಿನಿಮಾದ ನಾಯಕನಾಗಿ ರಿಷಿ ಕಾಣಿಸಿಕೊಂಡಿದ್ದಾರೆ. 'ಆಪರೇಶನ್ ಅಲಮೇಲಮ್ಮ' ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದಿದ್ದ ರಿಷಿ ಕವಲುದಾರಿ ಸಿನಿಮಾದ ನಾಯಕನಾಗಿ ಮಿಂಚಿದ್ದಾರೆ. ಇನ್ನೂ, ಹಿರಿಯ ನಟ ಅನಂತ್ ನಾಗ್ ಸಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಿಗೆ ಇಲ್ಲಿ ನಾಯಕಿಯಾಗಿ ರೋಷಿನಿ ಪ್ರಕಾಶ್ ಅಭಿನಯಿಸಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ.

More from Filmibeat

English summary
Kavaludaari kannada movie official release date announced. this is Power star Puneeth Raj Kumar PRK production's first movie.this movie is releasing on April 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X