ಅಣ್ಣಾವ್ರ ನೆನಪಿನಲ್ಲಿ ಅಪ್ಪು ನಿರ್ಮಾಣದ ಮೊದಲ ಸಿನಿಮಾ ಬಿಡುಗಡೆ

ಪಿ.ಆರ್.ಕೆ ಬ್ಯಾನರ್ ಹುಟ್ಟಿಕೊಂಡಿದ್ದೇ ಡಾ ರಾಜ್ ಕುಮಾರ್ ಅವರ ನೆನಪಿನಲ್ಲಿ ಮತ್ತು ಅವರ ಆಶೀರ್ವಾದಲ್ಲಿ ಎಂದು ಪುನೀತ್ ರಾಜ್ ಕುಮಾರ್ ಹೇಳಿದ್ದರು. ಈಗ ಪಿ.ಆರ್.ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಅಣ್ಣಾವ್ರ ನೆನಪಿನಾರ್ಥ ಬಿಡುಗಡೆಯಾಗುತ್ತಿದೆ.

ಹೌದು, ಏಪ್ರಿಲ್ 12 ರಂದು ಡಾ ರಾಜ್ ಕುಮಾರ್ ಪುಣ್ಯ ಸ್ಮರಣೆ. ಅದೇ ದಿನ ಪುನೀತ್ ನಿರ್ಮಾಣದ ಚೊಚ್ಚಲ ಸಿನಿಮಾ ಕವಲುದಾರಿ ರಿಲೀಸ್ ಆಗುತ್ತಿದೆ. ಈ ಮೂಲಕ ಅಪ್ಪಾಜಿಯ ಆಶೀರ್ವಾದಿಂದ ಅವರ ನೆನಪಿನಲ್ಲಿ ಸ್ಥಾಪಿಸಿದ ಸಂಸ್ಥೆಗೆ ಉತ್ತಮ ಆರಂಭ ಸಿಗುತ್ತಿದೆ.

'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ನಾಯಕನಾಗಿ ನಟಿಸಿದ್ದು, ಹಿರಿಯ ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಮನ್ ರಂಗನಾಥ್ ಹಾಗೂ ರೋಷನಿ ಪ್ರಕಾಶ್ ಕೂಡ ಕಾಣಿಸಿಕೊಂಡಿದ್ದಾರೆ.

kavaludaari releasing on dr rajkumar death anniversary

ಇನ್ನುಳಿದಂತೆ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ನಿರ್ದೇಶಿಸಿದ್ದ ಹೇಮಂತ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.

ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಮೂಲಕ ಕವಲು ದಾರಿ ಸಿನಿಮಾ ಹೊಸ ಭರವಸೆ ಮೂಡಿಸಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಕಥೆ ಹೊಂದಿರುವ ಈ ಚಿತ್ರ ಸಿನಿಪ್ರೇಕ್ಷಕರನ್ನ ರಂಜಿಸುವಲ್ಲಿ ನಿಜಕ್ಕೂ ಯಶಸ್ಸು ಕಾಣುತ್ತೆ ಎಂದು ಸ್ವತಃ ಪುನೀತ್ ಕೂಡ ಅಭಿಪ್ರಾಯಪಟ್ಟಿದ್ದಾರೆ.

More from Filmibeat

English summary
Puneeth rajkumar produced movie kavaludaari will releasing on dr rajkumar death anniversary. the movie directed by hemanth kumar starring Ananth Nag and Rishi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X