ಮಸಾಲೆ ದೊಸೆ, ಮೈಸೂರ್ ಪಾಕ್ ಪಾರ್ಟಿ ಮಾಡಿದ 'ಕವಲುದಾರಿ' ಟೀಮ್
ನಿನ್ನೆ (ಶುಕ್ರವಾರ) ಬಿಡುಗಡೆಯಾದ 'ಕವಲುದಾರಿ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಪುನೀತ್ ರಾಜ್ ಕುಮಾರ್ ನಿರ್ಮಾಣ ಮೊದಲ ಸಿನಿಮಾವನ್ನು ಪ್ರೇಕ್ಷಕರು ಸ್ವಾಗತ ಮಾಡಿದ್ದಾರೆ. ಇದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸಿನಿಮಾದ ಮೊದಲ ಗೆಲುವಿನ ಸಂಭ್ರಮದಲ್ಲಿ ಚಿತ್ರತಂಡ ಭಾಗಿಯಾಗಿದೆ.
ಮಸಾಲೆ ದೊಸೆ, ಮೈಸೂರ್ ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಚಿತ್ರದ ನಾಯಕ ರಿಷಿ, ಅನಂತ್ ನಾಗ್, ನಿರ್ದೇಶಕ ಹೇಮಂತ್ ರಾವ್ ಹಾಗೂ ಅನಂತ್ ನಾಗ್ ಪತ್ನಿ ಗಾಯತ್ರಿ ಈ ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದಾರೆ.

ನಟ ರಿಷಿ ಟ್ವಿಟ್ಟರ್ ಮೂಲಕ ಫೋಟೋ ಹಂಚಿಕೊಂಡಿದ್ದು, '' ನಮ್ಮ' ಕವಲುದಾ'ರಿ ಸಿನಿಮಾದ ಗೆಲುವು ಎಷ್ಟೋ ಮಹತ್ವಾಕಾಂಕ್ಷೆ ನಿರ್ದೇಶಕರ ಗೆಲುವು.'' ಎಂದು ಬರೆದುಕೊಂಡಿದ್ದಾರೆ.
ಹೇಗಿದೆ 'ಕವಲುದಾರಿ' ?
ಕ್ರೈಮ್ ಥ್ರಿಲ್ಲರ್ ಇಷ್ಟ ಪಡುವವರಿಗೆ 'ಕವಲುದಾರಿ' ಸಿನಿಮಾ ಖುಷಿ ನೀಡಬಹುದು. ರಿಷಿ, ಅನಂತ್ ನಾಗ್, ಸಂಪತ್ ಕುಮಾರ್ ಹಾಗೂ ಅಚ್ಚುತ್ ಕುಮಾರ್ ನಟನೆ ಸೂಪರ್ ಆಗಿದೆ. ನಿರ್ದೇಶಕ ಹೇಮಂತ್ ರಾವ್ ಮೇಕಿಂಗ್ ಸ್ಟೈಲ್ ಇಷ್ಟ ಆಗುತ್ತದೆ. ಚಿತ್ರದ ಅವಧಿ ಕೊಂಚ ಜಾಸ್ತಿ ಆಗಿದೆ ಅನಿಸುತ್ತದೆ. ಕೊಲೆಯ ಜೊತೆಗೆ ರಾಜಕೀಯ ಹಿನ್ನಲೆಯಲ್ಲಿ ಸಿನಿಮಾದ ಕಥೆ ಇದೆ.


Click it and Unblock the Notifications











