»   » ಪವರ್ ಸ್ಟಾರ್ ಪುನೀತ್ ನಿರ್ಮಾಣದ 'ಕವಲುದಾರಿ'ಯ ಫಸ್ಟ್ ಲುಕ್.!

ಪವರ್ ಸ್ಟಾರ್ ಪುನೀತ್ ನಿರ್ಮಾಣದ 'ಕವಲುದಾರಿ'ಯ ಫಸ್ಟ್ ಲುಕ್.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಸಿನಿಮಾವೊಂದು ಬರುತ್ತಿರುವ ಬಗ್ಗೆ ಹೇಳಿದ್ವಿ. ಈಗ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಅಂದ್ಹಾಗೆ, ಈ ಚಿತ್ರದ ಹೆಸರು 'ಕವಲುದಾರಿ'.

ಪುನೀತ್ ನಿರ್ಮಾಣದ 'ಕವಲು ದಾರಿ' ಕುರಿತ ಲೇಟೆಸ್ಟ್ ಸುದ್ದಿ ಇದು..

'ಆಪರೇಷನ್ ಅಲಮೇಲಮ್ಮ' ಚಿತ್ರದಲ್ಲಿ ಅಭಿನಯಿಸಿರುವ ನಟ ರಿಷಿ 'ಕವಲು ದಾರಿ' ಚಿತ್ರಕ್ಕೆ ನಾಯಕ. ಸದ್ಯ, ರಿಷಿ ಪಾತ್ರದ ಪರಿಚಯವನ್ನು ಮಾಡಿರುವ ಚಿತ್ರತಂಡ ಅವರ ಹುಟ್ಟುಹಬ್ಬದ ವಿಶೇಷವಾಗಿ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿರುವ ರಿಷಿ ಕೆ.ಎಸ್.ಶ್ಯಾಮ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿದ್ದಾರೆ.

'Kavaludari' kannada movie first look out.

ಪುನೀತ್ ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರಕ್ಕೆ 'ಗೋದಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಚಿತ್ರಕ್ಕೆ 'ಅರ್ಧಸತ್ಯ' ಎಂಬ ಟೈಟಲ್ ಫಿಕ್ಸ್ ಆಗಿತ್ತು. ಆದರೆ ನಂತರ ಚಿತ್ರದ ಶೀರ್ಷಿಕೆಯನ್ನು 'ಕವಲುದಾರಿ' ಎಂದು ಬದಲಾಯಿಸಲಾಗಿದೆ.

English summary
'Kavaludari' Kannada Movie First Look Out. The Movie is Producing by Power Star Puneeth Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada