ವಿಡಿಯೋ : 'ಕವಲುದಾರಿ'ಯ ಥ್ರಿಲ್ಲಿಂಗ್ ಟ್ರೇಲರ್ ರಿಲೀಸ್
ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಕವಲುದಾರಿ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇದೆ. ಈ ವೇಳೆ ಸಿನಿಮಾ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 'ಕವಲುದಾರಿ'ಯ ಮೊದಲ ಟ್ರೇಲರ್ ಇಂದು ಸಂಜೆ 5 ಗಂಟೆಗೆ ರಿಲೀಸ್ ಆಗಿದೆ.
ಟ್ರೇಲರ್ ಸಖತ್ ಥ್ರಿಲ್ಲಿಂಗ್ ಆಗಿದೆ. ಟ್ರೇಲರ್ ನಲ್ಲಿ ಇಷ್ಟ ಆಗುವುದು ಸ್ಪೀಡ್. ವೇಗವಾಗಿ ಬಂದು ಹೋಗುವ ದೃಶ್ಯಗಳು ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಸುತ್ತವೆ. ಟ್ರೇಲರ್ ಒಳ್ಳೆಯ ಕ್ವಾಲಿಟಿ ಸಿನಿಮಾ ಎನ್ನುವ ಭರವಸೆ ನೀಡಿದೆ. ಮುಖ್ಯವಾಗಿ ಚರಣ್ ರಾಜ್ ಸಂಗೀತ ಗಮನ ಸೆಳೆಯುತ್ತದೆ.
ಟ್ರೇಲರ್ ನಲ್ಲಿ ಎಲ್ಲ ಪಾತ್ರಗಳು ಬಂದು ಹೋಗುತ್ತದೆ. ನಾಯಕ ರಿಷಿ, ನಾಯಕಿ ರೋಷನಿ ಪ್ರಕಾಶ್, ಅನಂತ್ ನಾಗ್, ಅಚ್ಚುತ್ ಕುಮಾರ್, ಸುಮನ ರಂಗನಾಥ್, ಸಂಪತ್ ಕುಮಾರ್ ಹೀಗೆ ಸಾಕಷ್ಟು ಪಾತ್ರಗಳು ಚಿತ್ರದಲ್ಲಿವೆ.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರದ ಸೂತ್ರಧಾರನಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಏಪ್ರಿಲ್ 12 ರಂದು 'ಕವಲುದಾರಿ' ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.


Click it and Unblock the Notifications