ಆಪರೇಷನ್ ಅಲಮೇಲಮ್ಮ ಹೀರೊ ರಿಷಿಗೆ ಬಂಪರ್ ಆಫರ್: ಹೊಸ ಕನ್ನಡ, ತಮಿಳೂ ಎರಡರಲ್ಲೂ ನಿರ್ಮಾಣ

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟ ರಿಷಿ. ಈಗಾಗಲೇ 'ಆಪರೇಷನ್ ಅಲಮೇಲಮ್ಮ', 'ಕವಲುದಾರಿ'ಯಂತಹ ಅದ್ಭುತ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ನಟ. ಸದಾ ವಿಭಿನ್ನ ಕಾನ್ಸೆಪ್ಟ್ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವ ನಟನೀತ.

ರಿಷಿ ಇದೂವರೆಗೂ ಮೀಡಿಯಂ ಬಜೆಟ್ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದರು. ಆದ್ರೀಗೆ ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸೋ ಅವಕಾಶ ಒದಗಿ ಬಂದಿದೆ. ಈ ಸಿನಿಮಾ ಕನ್ನಡ ಹಾಗೂ ತಮಿಳು ಎರಡೂ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ರಿಷಿ ಗ್ರೀನ್ ಸಿಗ್ನಲ್ ಕೊಟ್ಟಿರೋ ಬಿಗ್ ಬಜೆಟ್ ಸಿನಿಮಾ ಇದೇ ಜೂನ್ 2ರಂದು ಅಧಿಕೃತವಾಗಿ ಲಾಂಚ್ ಆಗಲಿದೆ. ಸದ್ಯ ಚಿತ್ರತಂಡ ಸಿನಿಮಾದ ಟೈಟಲ್ ಸೇರಿದಂತೆ ಪ್ರಮುಖ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಎಲ್ಲವೂ ಜೂನ್ 2ರಂದೇ ರಿವೀಲ್ ಮಾಡಲು ಮುಂದಾಗಿದೆ.

Kavaludari Operation Alamelamma fame Rishis new movie will be in Kannada and Tamil

ಅಂದ್ಹಾಗೆ ಈ ಸಿನಿಮಾವನ್ನು 'ಡಿಯರ್ ವಿಕ್ರಂ' ಖ್ಯಾತಿಯ ಕೆ ಎಸ್ ನಂದೀಶ್ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಸಿನಿಮಾವೇ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಅಲ್ಲಿ ಈ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ನೀನಾಸಂ ಸತೀಶ್ ಹಾಗೂ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

'ಡಿಯರ್ ವಿಕ್ರಂ' ಸಿನಿಮಾವನ್ನು ಓಟಿಟಿಯಲ್ಲಿ ನೋಡಿದ ಬಳಿಕ ಪ್ರೇಕ್ಷಕರು ಥ್ರಿಯೇಟರ್‌ನಲ್ಲಿ ರಿಲೀಸ್ ಮಾಡಬೇಕಿತ್ತು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ತೆಲುಗಿನಲ್ಲಿ ರಿಮೇಕ್ ಮಾಡುವುದಕ್ಕೆ ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ನೈಜ ಘಟನೆಗಳ ಆಧರಿಸಿದ್ದ 'ಡಿಯರ್ ವಿಕ್ರಂ' ನಕ್ಸಲ್ ಮತ್ತು ರಾಜಕೀಯದ ಮಜಲುಗಳನ್ನು ಒಳಗೊಂಡ ಸಿನಿಮಾವಾಗಿತ್ತು. ಈ ಸಿನಿಮಾ ನೇರವಾಗಿ ಓಟಿಟಿನಲ್ಲಿ ರಿಲೀಸ್ ಆಗಿದ್ದು ನಷ್ಟವೇನು ಆಗಿಲ್ಲ. ಅಲ್ಲಿ ಈ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ನಿರ್ದೇಶಕರಿಗೆ ಈ ಬಗ್ಗೆ ಬೇಸರವಿಲ್ಲ. ಯಾಕೆಂದರೆ, ಪ್ರಸ್ತುತ ಕಾಲದಲ್ಲಿ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಅನಿವಾರ್ಯ ಎನ್ನುತ್ತಾರೆ. ಅಲ್ಲದೆ ಥಿಯೇಟರ್‌ನಷ್ಟೇ ಓಟಿಟಿ ಕೂಡ ಮನರಂಜನೆಯನ್ನು ಜನಕ್ಕೆ ತಲುಪಿಸುವ ಒಂದು ಮಾಧ್ಯಮ ಎಂದೇ ನಂಬಿದ್ದಾರೆ.

ಸದ್ಯಕ್ಕೀಗ ಹೊಸ ಸಿನಿಮಾದ ತಯಾರಿ ನಡೆಯುತ್ತಿದ್ದು, ರಿಷಿ ನಟಿಸುತ್ತಿರುವ ಈ ಸಿನಿಮಾ ಥಿಯೇಟರ್‌ಗಳಲ್ಲಿ ಹಾಗೂ ಓಟಿಟಿ ಎರಡರಲ್ಲೂ ಬಿಡುಗಡೆಯಾಗಲಿದೆ. ವಿಶೇಷ ಅಂದರೆ, ಈ ಸಿನಿಮಾ ತೆಲುಗಿನ ಪ್ರಮುಖ ನಟರು ಕೂಡ ನಟಿಸುತ್ತಿರುವುದು ವಿಶೇ‍ಷ.

More from Filmibeat

English summary
Kavaludari Operation Alamelamma fame Rishi's new movie will be in Kannada and Tamil, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X