twitter
    For Quick Alerts
    ALLOW NOTIFICATIONS  
    For Daily Alerts

    ಅಂತಿಮ ಹಂತದಲ್ಲಿ ಕವಿರಾಜ್ ಮತ್ತು ಬಳಗದ ಉಚಿತ ಕೋವಿಡ್ ಆಕ್ಸಿಜನ್ ಸೆಂಟರ್

    |

    ಸಿನಿಮಾ ಸೆಲೆಬ್ರಿಟಿಗಳು ಕೋವಿಡ್ ಸಂಕಷ್ಟದಲ್ಲಿ ಸಮಯದಲ್ಲಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಚಾಲ್ತಿಯಲ್ಲಿರುವಾಗಲೇ ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕವಿರಾಜ್ ಅವರು ಕೆಲವು ಸಮಾನ ಮನಸ್ಕರೊಟ್ಟಿಗೆ ಸೇರಿಕೊಂಡು ಬಡವರಿಗೆ ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್ ಆರಂಭಿಸಲು ಮುಂದಾಗಿದ್ದಾರೆ.

    ಆಮ್ಲಜನಕ ಸಿಗದೆ ಕೋವಿಡ್‌ ರೋಗಿಗಳು ಸಂಕಷ್ಟ ಅನುಭವಿಸುತ್ತಿರುವುದನ್ನು ಕಂಡು ಮರುಗಿದ್ದ ಕವಿರಾಜ್ ಮೇ 6 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ''ಪರಿಸ್ಥಿತಿ ಬಹಳ ಕೈ ಮೀರಿದೆ. ಮುಂದೆ ಇನ್ನೂ ಕಠಿಣ ಆಗುವ ಸೂಚನೆಯಿದೆ. ಇಂತಾ ಹೊತ್ತಲ್ಲಿ ವ್ಯವಸ್ಥೆಯನ್ನು ದೂರುತ್ತ ಕೂರುವುದಕ್ಕಿಂತಾ, ಒಂದು ಕಲ್ಯಾಣ ಮಂಟಪ/ ಶೆಡ್ / ಖಾಲಿ ಬಿಲ್ಡಿಂಗ್/ ಶಾಲಾ ಕಾಲೇಜ್ ಬಿಲ್ಡಿಂಗ್ ತರಹದ ಯಾವುದಾದರೂ ಒಂದು ಜಾಗದಲ್ಲಿ ನಾವೇ ಅಂದರೆ ಒಂದಷ್ಟು ಸಮಾನ ಮನಸ್ಕ ಜನರೇ ಸೇರಿ ಒಂದಷ್ಟು ಆಕ್ಸಿಜನ್ ಸಮೇತ ಬೆಡ್ ಗಳನ್ನು ಬಡವರಿಗೆ ಏಕೆ ಒದಗಿಸಬಾರದು ಎಂಬ ಚಿಂತನೆ ಬಂದಿದೆ. ಸಮಾನ ಮನಸ್ಕರು, ಕೈ ಜೋಡಿಸುವ ಆಸಕ್ತಿ ಇರುವವರು ಸಾಧ್ಯಾಸಾಧ್ಯತೆ , ಸವಾಲು, ಪರಿಕರಗಳ ಲಭ್ಯತೆ ( ಕಟ್ಟಡ, ಆಕ್ಸಿಜನ್ etc.. ) ಬಗ್ಗೆ ಸಲಹೆ ಸೂಚನೆ ನೀಡಿ'' ಎಂದು ಮನವಿ ಮಾಡಿ ಕೆಲವು ಸಮಾನ ಮನಸ್ಕರನ್ನು ಟ್ಯಾಗ್ ಮಾಡಿದ್ದರು.

    ಕವಿರಾಜ್ ಅವರ ಫೇಸ್‌ಬುಕ್ ಮನವಿಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂದು, ನಟಿ ನೀತು ಶೆಟ್ಟಿ ಸೇರಿದಂತೆ ಹಲವರು ಸ್ವಯಂ ಪ್ರೇರಿತರಾಗಿ ನೆರವು ನೀಡಲು, ಸತ್ಕಾರ್ಯದಲ್ಲಿ ಜೊತೆ ಸೇರಲು ಮುಂದೆ ಬಂದರು.

    Kavi Raj And Friends Planning To Start Free COVID 19 Oxygen Care Center

    ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇ 07ರಂದು ಫೇಸ್‌ಬುಕ್ ಪೋಸ್ಟ್ ಮಾಡಿರುವ ಕವಿರಾಜ್, 'ನಾವೆಲ್ಲಾ ಸೇರಿ ಬಡವರಿಗೆ 'ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್' ಮಾಡುವ ಚಿಂತನೆಗೆ ಹಲವರು ಕೈ ಜೋಡಿಸುತ್ತಿದ್ದು ಆಶಾದಾಯಕ ಪ್ರಗತಿಯಾಗಿದೆ. ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಮೊದಲ ಹಂತಕ್ಕೆ ಆಗಿದೆ. ಕೋಣನಕುಂಟೆ ಬಳಿ ಒಳ್ಳೆಯ ಸ್ಥಳ ದೊರಕಿದೆ, ಬಿಬಿಎಂಪಿ ಆರೋಗ್ಯ ಅನುಮತಿ ಮತ್ತು ಸಹಕಾರದ ಭರವಸೆ ಸಿಕ್ಕಿದೆ'' ಎಂದಿದ್ದಾರೆ.

    ಆದರೆ 'ಯಾರಾದರೊಬ್ಬರು ಸಹೃದಯಿ ವೈದ್ಯರು ನಮ್ಮ ಜೊತೆ ಕೈ ಜೋಡಿಸಬೇಕು .ದಿನಕ್ಕೆ ಒಂದು ಭೇಟಿ ಕೊಟ್ಟು ಪರಿಶೀಲಿಸುವಂತಾದರು ಸಾಕು. ಅವರಿಗೆ ಗೌರವಧನವನ್ನು ನೀಡಬಹುದು. ಅಂತವರು ಯಾರಾದರು ನಿಮ್ಮ ಬಳಗದಲ್ಲಿದ್ದರೆ ತಿಳಿಸಿ‌. ನಮ್ಮ ಜೊತೆ ಯಾವುದೇ ರೀತಿಯಲ್ಲಿ ಕೈ ಜೋಡಿಸಲು ಆಸಕ್ತಿ ಇರುವವರೆಲ್ಲರಿಗೂ ಸ್ವಾಗತ'' ಎಂದಿದ್ದಾರೆ ಕವಿರಾಜ್.

    Recommended Video

    ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ 25 ಲಕ್ಷ ರೂ.ಗಳ ದೇಣಿಗೆ ಕೊಟ್ಟ ನಟಿ ತಾರಾ | Filmibeat Kannada

    ತಜ್ಞ ವೈದ್ಯರೊಬ್ಬರ ಬೆಂಬಲ ಕವಿರಾಜ್‌ಗೆ ದೊರೆತಲ್ಲಿ ಅತ್ಯಂತ ಶೀಘ್ರವಾಗಿ ಬಡವರಿಗೆ ಉಚಿತ ಕೋವಿಡ್ ಆಕ್ಸಿಜನ್ ಕೇರ್ ಸೆಂಟರ್ ಕಾರ್ಯಾರಂಭ ಮಾಡಲಿದೆ. ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ ಕವಿರಾಜ್ ಮತ್ತು ಬಳಗ.

    English summary
    Lyricist Kavi Raj and his friends planning to start free COVID 19 care center in Bengaluru.
    Saturday, May 8, 2021, 18:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X