twitter
    For Quick Alerts
    ALLOW NOTIFICATIONS  
    For Daily Alerts

    'ಕೊತ್ಮೀರಿ ಸೊಪ್ಪು' ಟ್ರೋಲ್: ಗಮನಿಸಬೇಕಾದ ಕವಿರಾಜ್ ಅಭಿಪ್ರಾಯ

    |

    ಸಾಮಾಜಿಕ ಮಾಧ್ಯಮಗಳ ತುಂಬೆಲ್ಲಾ 'ಕೊತ್ಮೀರಿ ಸೊಪ್ಪು'ನದ್ದೇ ಮಾತು. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಬಂಧಿತ ಆರೋಪಿಯೊಬ್ಬನ ಸಹೋದರಿ 'ನನ್ನ ಅಣ್ಣ ರಾತ್ರಿ ಒಂದು ಗಂಟೆಯಲ್ಲಿ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದ' ಎಂದು ಮಾಧ್ಯಮವೊಂದಕ್ಕೆ ಹೇಳಿರುವುದೇ ಈ ಟ್ರೋಲ್‌ಗೆ ಕಾರಣ.

    Recommended Video

    ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

    ರಾತ್ರಿ ಒಂದು ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಯಾರು ಹೋಗುತ್ತಾರೆ? ಗಲಭೆ ಕೋರರನ್ನು ವಹಿಸಿಕೊಳ್ಳಲು ಹೀಗೆ ಸುಳ್ಳು ಹೇಳುತ್ತಿದ್ದಾರೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಹಲವರ ವಾದ. ಹಾಗಾಗಿಯೇ 'ಕೊತ್ಮೀರಿ ಸೊಪ್ಪು' ಭಾರಿ ಟ್ರೋಲ್ ಆಗುತ್ತಿದೆ. ಸಚಿವ ಆರ್.ಅಶೋಕ್ ಸಹ, 'ಕೊತ್ಮೀರಿ, ಕರಿಬೇವು ತರಲು ಹೋಗಿದ್ದವರ ಪಟ್ಟಿ ನಮ್ಮ ಬಳಿ ಇದೆ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

    ಆದರೆ ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್, 'ಕೊತ್ಮೀರಿ ಸೊಪ್ಪು' ಟ್ರೋಲ್‌ ಅನ್ನು ಬೇರೆಯದ್ದೇ ಆಯಾಮದಿಂದ ನೋಡಿದ್ದಾರೆ. ಆ ಮುಸ್ಲಿಂ ಹೆಣ್ಣುಮಗಳು ಹೇಳಲು ಹೊರಟಿರುವುದೇನು? ಆಕೆ ಹೇಳಿರುವುದು ಸತ್ಯ ಇರಬಹುದು ಎಂದು ತಮ್ಮ ಅಭಿಪ್ರಾಯವನ್ನು ಅವರು ಫೇಸ್‌ಬುಕ್‌ನಲ್ಲಿ ದಾಖಲಿಸಿದ್ದಾರೆ.

    'ರಾತ್ರಿ ಒಂದು ಗಂಟೆಯಲ್ಲಿ ಕೊತ್ಮೀರಿ ಸೊಪ್ಪು ತರಲು ಹೋಗಿದ್ದ'

    'ರಾತ್ರಿ ಒಂದು ಗಂಟೆಯಲ್ಲಿ ಕೊತ್ಮೀರಿ ಸೊಪ್ಪು ತರಲು ಹೋಗಿದ್ದ'

    ಟ್ರಾಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಆ ಮುಸ್ಲಿಂ ಹೆಂಗಲು ಅರೆ-ಬರೆ ಕನ್ನಡದಲ್ಲಿ 'ನಮ್ಮ ಅಣ್ಣ ರಾತ್ರಿ ಒಂದು ಗಂಟೆಯಲ್ಲಿ ಕೊತ್ಮೀರಿ ಸೊಪ್ಪು ತರಲು ಬಂದಿದ್ದು, ಅಂಗಡಿಯಲ್ಲಿ ಹಾಕೋಕೆ ಇರೋದು ನಮ್ಮ ಅಣ್ಣ' ಎನ್ನುತ್ತಾಳೆ. ಆ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ. ರಾತ್ರಿ ಒಂದು ಗಂಟೆಗೆ ಯಾರು ಕೊತ್ಮೀರಿ ಸೊಪ್ಪು ತರಲು ಹೋಗುತ್ತಾರೆ ಎಂಬುದು ಹಲವರ ವಾದ. ಆದರೆ ಕವಿರಾಜ್ ಹೇಳುತ್ತಿರುವುದು ಬೇರೆ.

    ಆ ಮಹಿಳೆ ಹೇಳುತ್ತಿರುವುದು ನಿಜವೇ ಇರಬಹುದು: ಕವಿರಾಜ್

    ಆ ಮಹಿಳೆ ಹೇಳುತ್ತಿರುವುದು ನಿಜವೇ ಇರಬಹುದು: ಕವಿರಾಜ್

    ಕವಿರಾಜ್ ಅವರ ಅಭಿಪ್ರಾಯದಂತೆ, ಆ ಮಹಿಳೆ ಹೇಳುತ್ತಿರುವುದು ನಿಜವೇ ಇರಬಹುದು. ಆಕೆ ವಿಡಿಯೋದಲ್ಲಿ ಹೇಳಿರುವಂತೆ ಆಕೆಯ ಅಣ್ಣ ಕೊತ್ಮೀರಿ ಸೊಪ್ಪು ತೆಗೆದುಕೊಂಡು ಅಂಗಡಿಗಳಿಗೆ ಹಾಕುವ ಕೆಲಸ ಮಾಡುತ್ತಾನೆ. ಆದರೆ ಆಕೆಯ ಅರೆ-ಬರೆ ಕನ್ನಡದಲ್ಲಿ ವಾಕ್ಯ ಪೂರ್ಣವಾಗಿಲ್ಲ ಅಥವಾ ಪೂರ್ಣಾರ್ಥದಲ್ಲಿಲ್ಲ.

    ತರಕಾರಿ ಲೋಡ್‌ಗಳು ಬರುವುದೇ ಮಧ್ಯರಾತ್ರಿ ಮೇಲೆ

    ತರಕಾರಿ ಲೋಡ್‌ಗಳು ಬರುವುದೇ ಮಧ್ಯರಾತ್ರಿ ಮೇಲೆ

    ತರಕಾರಿ ಲೋಡ್‌ಗಳು ಬೆಂಗಳೂರಿಗೆ ಬರುವುದೇ ಮಧ್ಯರಾತ್ರಿ ಮೇಲೆ ಆ ಸಮಯದಲ್ಲಿ ಅವುಗಳನ್ನು ತೆಗೆದುಕೊಂಡು ಎಲ್ಲಾ ಅಂಗಡಿಗಳಿಗೆ ಇಳಿಸಿದರೆ ಬೆಳಿಗ್ಗೆ ಸಾರ್ವಜನಿಕರಿಗೆ ಫ್ರೆಶ್ ಆದ ತರಕಾರಿ, ಸೊಪ್ಪು ಲಭ್ಯವಾಗುತ್ತದೆ. ಹಾಗೆಯೇ ಆ ಮುಸ್ಲಿಂ ಮಹಿಳೆಯ ಅಣ್ಣನೂ ಕೊತ್ಮೀರಿ ಸೊಪ್ಪನ್ನು ಅಂಗಡಿಗಳಿಗೆ ತಲುಪಿಸುವ ಕಾರ್ಯ ಮಾಡುವವನೇ ಇರಬೇಕು ಎಂದಿದ್ದಾರೆ ಕವಿರಾಜ್.

    ಗಲಭೆಕೋರರನ್ನು ಸಮರ್ಥಿಸಿಕೊಂಡಿಲ್ಲ ಕವಿರಾಜ್

    ಗಲಭೆಕೋರರನ್ನು ಸಮರ್ಥಿಸಿಕೊಂಡಿಲ್ಲ ಕವಿರಾಜ್

    ಹಾಗೆಂದ ಮಾತ್ರಕ್ಕೆ ಕವಿರಾಜ್, ಗಲಭೆಕೋರರ ಪರ ವಾದ ಮಾಡುತ್ತಿದ್ದಾರೆ, ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದುಕೊಳ್ಳುವಂತಿಲ್ಲ. ಅವರೇ ತಮ್ಮ ಪೋಸ್ಟ್‌ನಲ್ಲಿ ಹೇಳಿರುವಂತೆ. ಆಕೆಯ ಸಹೋದರ ಕೊತ್ಮೀರಿ ಸೊಪ್ಪು ತರಲು ಹೋಗಿದ್ದರೂ ಸಹ ಆ ಸಮಯದಲ್ಲಿ ಅಲ್ಲಿ ಏಕೆ ಇರಬೇಕಿತ್ತು. ಗಲಭೆ ಆತನ ಉದ್ದೇಶವಾಗಿಲ್ಲವಾಗಿದ್ದರೆ ಘಟನೆ ನಡೆವ ಸ್ಥಳದಿಂದ ಹೊರಟುಹೋಗಲಿಲ್ಲವೇಕೆ. ಪೊಲೀಸರು ಸೂಕ್ತ ಕುರುಹು ಇಲ್ಲದೆ ಆತನನ್ನು ಬಂಧಿಸಲು ಸಾಧ್ಯವಿರಲಿಕ್ಕಿಲ್ಲ ಎಂದಿದ್ದಾರೆ ಕವಿರಾಜ್.

    ಕವಿರಾಜ್ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ

    ಕವಿರಾಜ್ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ

    ಕವಿರಾಜ್ ಅವರ ಈ ಪೋಸ್ಟ್‌ ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕವಿರಾಜ್ ಅವರು ಗಲಭೆಕೋರರನ್ನು ಸಮರ್ಥಿಸುವ ದಾಟಿಯಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ಕವಿರಾಜ್ ಅವರ ಪೋಸ್ಟ್ ಗೆ ಮೆಚ್ಚುಗೆ ಸೂಚಿಸಿದ್ದಾರೆ.

    English summary
    Lyricist, director Kavi Raj post his opinion about troll happening about coriander leaf statement of a Muslim woman.
    Tuesday, August 18, 2020, 9:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X