twitter
    For Quick Alerts
    ALLOW NOTIFICATIONS  
    For Daily Alerts

    ದಸರಾ, ದೀಪಾವಳಿ ಅಪಭ್ರಂಶ: ಸಿನಿಸಾಹಿತಿ ಕವಿರಾಜ್ ಆಕ್ರೋಶ

    |

    ಇದೀಗ ದಸರಾ ಸಂಭ್ರಮ, ಕೆಲವೇ ದಿನಗಳಲ್ಲಿ ದೀಪಾವಳಿ ಸಹ ಬರಲಿದೆ. ದಸರಾ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಮಂದಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

    ಹೀಗೆ ಸಾಮಾಜಿಕ ಜಾಲತಾಣದಲ್ಲಿ ದಸರಾ ಶುಭಾಶಯ ಕೋರುವ ಸಂದರ್ಭದಲ್ಲಿ ದಸರಾ ವನ್ನು ದಶೆರಾ ಎಂಥಲೂ ದೀಪಾವಳಿ ಯನ್ನು ದಿವಾಲಿ ಎಂಥಲೂ ಕರೆಯುವುದು ಸಾಮಾನ್ಯವಾಗಿಬಿಟ್ಟಿದೆ.

    'ಹಿಂದಿ ದಿವಸಕ್ಕೆ ನನ್ನ ವಿರೋಧವಿದೆ'- ಚಿತ್ರ ಸಾಹಿತಿ ಕವಿರಾಜ್'ಹಿಂದಿ ದಿವಸಕ್ಕೆ ನನ್ನ ವಿರೋಧವಿದೆ'- ಚಿತ್ರ ಸಾಹಿತಿ ಕವಿರಾಜ್

    ಹೀಗೆ ದಶರಾ, ದಿವಾಲಿ ಎಂದು ಕರೆದು ನಮ್ಮ ಹಬ್ಬದ ಹೆಸರನ್ನು ಅಪಭ್ರಂಶ ಮಾಡುವುದು ದೊಡ್ಡ್ ತಪ್ಪೇನೂ ಅಲ್ಲ ಎಂಬುದು ಬಹುತೇಕರ ಭಾವನೆ. ದಶೆರಾ, ದಿವಾಲಿ ಎಂದು ಕರೆಯುವುದೇ ಸರಿ ಎಂಬ ಭಾವನೆಯೂ ಸಹ ಹಲವರಲ್ಲಿ ಇದ್ದಹಾಗಿದೆ. ಆದರೆ ನಮ್ಮ ಹಬ್ಬಗಳ ಹೆಸರನ್ನು ಉತ್ತರ ಭಾರತದ ಪ್ರಭಾವಕ್ಕೆ ಸಿಲುಕಿ ಅಪಭ್ರಂಶಗೊಳಿಸುವುದನ್ನು ಕೆಲವರು ಖಂಡಿಸುತ್ತಲೇ ಬಂದಿದ್ದಾರೆ. ಅದರಲ್ಲಿ ಸಿನಿಮಾ ಸಾಹಿತಿ ಕವಿರಾಜ್ ಸಹ ಒಬ್ಬರು.

    ಅಭಿಪ್ರಾಯ ನಿರ್ಭಿಡೆಯಿಂದ ದಾಖಲಿಸುವ ಕವಿರಾಜ್

    ಅಭಿಪ್ರಾಯ ನಿರ್ಭಿಡೆಯಿಂದ ದಾಖಲಿಸುವ ಕವಿರಾಜ್

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ, ಪ್ರಸ್ತುತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನಿರ್ಭಿಡೆಯಿಂದ ದಾಖಲಿಸುವ ಕವಿರಾಜ್, ಈಗ ಕನ್ನಡಿಗರೇ ನಮ್ಮ ಹಬ್ಬದ ಹೆಸರುಗಳನ್ನು ತಪ್ಪಾಗಿ ಬರೆಯುವ, ಉಚ್ಛರಿಸುವುದರ ಬಗ್ಗೆ ಆಕ್ರೋಶದ ಪೋಸ್ಟ್ ಒಂದನ್ನು ಹಾಕಿದ್ದಾರೆ.

    ಇದ್ಯಾವುದ್ರಿ ದುಸೆರಾ, ದಿವಾಲಿ: ಕವಿರಾಜ್

    ಇದ್ಯಾವುದ್ರಿ ದುಸೆರಾ, ದಿವಾಲಿ: ಕವಿರಾಜ್

    'ಹುಟ್ಟಿದಾಗಿನಿಂದಲೂ ಎಷ್ಟು ಸವಿಯಾಗಿ , ಸರಳವಾಗಿ, ಸಹಜವಾಗಿ , ಅರ್ಥಗರ್ಭಿತವಾಗಿ 'ದೀಪಾವಳಿ' 'ದಸರಾ' ಅನ್ಕೊಂಡು, ಆಚರಿಸ್ಕೊಂಡು ಬಂದಿದೀವಿ. ಇದ್ಯಾವುದು ಈಗ ಕರ್ಮಾ, ದುಸೆರಾ, ದಿವಾಲಿ ? ನಮ್ಮದು ಅಂತಾ ಒಂದು ಮೆದುಳಿದೆ ಅಲ್ಲವೇ? ಅದನ್ನ ಉಪಯೋಗಿಸೋದೇ ಇಲ್ವಾ?' ಎಂದು ಪ್ರಶ್ನಿಸಿದ್ದಾರೆ ಕವಿರಾಜ್.

    'ಕೊತ್ಮೀರಿ ಸೊಪ್ಪು' ಟ್ರೋಲ್: ಗಮನಿಸಬೇಕಾದ ಕವಿರಾಜ್ ಅಭಿಪ್ರಾಯ'ಕೊತ್ಮೀರಿ ಸೊಪ್ಪು' ಟ್ರೋಲ್: ಗಮನಿಸಬೇಕಾದ ಕವಿರಾಜ್ ಅಭಿಪ್ರಾಯ

    'ಕಸ ತಂದು ಮೆದುಳಿಗೆ ಬಿಸಾಡಿ ಕೈಗೊಂಬೆ ಮಾಡಿಕೊಳ್ಳಬಹುದೇ?'

    'ಕಸ ತಂದು ಮೆದುಳಿಗೆ ಬಿಸಾಡಿ ಕೈಗೊಂಬೆ ಮಾಡಿಕೊಳ್ಳಬಹುದೇ?'

    'ಯಾರು ಬೇಕಾದರೂ ಏನು ಬೇಕಾದರೂ ಕಸ ತಂದು ನಮ್ಮ ಮೆದುಳಿಗೆ ಬಿಸಾಡಿ ನಮ್ಮನ್ನ ಇಷ್ಟು ಹೀನಾಯವಾಗಿ ಅವರ ಕೈ ಗೊಂಬೆ ಆಗಿಸಿಕೊಳ್ಳಬಹುದಾದಷ್ಟು ಟೊಳ್ಳು ವ್ಯಕ್ತಿತ್ವಗಳ ನಾವು? ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಎಸೆದಿದ್ದಾರೆ ಕವಿರಾಜ್.

    Recommended Video

    Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada
    ಗುಲಾಮಗಿರಿಯನ್ನು ತೆವಲಾಗಿಸಿಕೊಂಡಿದ್ದೇವಾ? ಕವಿರಾಜ್ ಪ್ರಶ್ನೆ

    ಗುಲಾಮಗಿರಿಯನ್ನು ತೆವಲಾಗಿಸಿಕೊಂಡಿದ್ದೇವಾ? ಕವಿರಾಜ್ ಪ್ರಶ್ನೆ

    'ಏನು ಸಾಧಿಸೋಕ್ ಹೋಗ್ತಿದ್ದೀವಿ ಎಲ್ಲದ್ದರಲ್ಲೂ ಇನ್ನ್ಯಾರನೋ ಅನುಕರಿಸುವ ಗುಲಾಮಗಿರಿಯನ್ನೇ ತೆವಲಾಗಿಸಿಕೊಂಡು ? ನಮ್ಮತನಗಳನ್ನೆಲ್ಲಾ ತೊರೆಯುತ್ತಾ ತೊರೆಯುತ್ತಾ ಕೊನೆಗೆ ಏನಾಗ ಹೊರಟಿದ್ದೀವಿ?' ಎಂದಿದ್ದಾರೆ ಸಿನಿಮಾ ಸಾಹಿತಿ ಕವಿರಾಜ್.

    'ಇರುವುದೆಲ್ಲವ ಬಿಟ್ಟು...': ಚಿರು ಸಾವಿನ ಬೆನ್ನಲ್ಲೇ ಹೃದಯ ಕಲಕುವ ಘಟನೆ ಹಂಚಿಕೊಂಡ ಕವಿರಾಜ್'ಇರುವುದೆಲ್ಲವ ಬಿಟ್ಟು...': ಚಿರು ಸಾವಿನ ಬೆನ್ನಲ್ಲೇ ಹೃದಯ ಕಲಕುವ ಘಟನೆ ಹಂಚಿಕೊಂಡ ಕವಿರಾಜ್

    English summary
    Lyric writer Kaviraj upset with people who wrongly writing and pronouncing Kannada festivals names.
    Monday, October 26, 2020, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X