twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಚಿತ್ರೋತ್ಸವದ ಬಗ್ಗೆ ಬೇಸರ ಹೊರಹಾಕಿದ ಕವಿರಾಜ್

    |

    ಬೆಂಗಳೂರು ಚಿತ್ರೋತ್ಸವದಲ್ಲಿ ಆಯ್ಕೆ ಮಾಡಿರುವ ಸಿನಿಮಾಗಳ ಬಗ್ಗೆ ಕೆಲವು ನಿರ್ದೇಶಕರು ತಮ್ಮ ಬೇಸರ ಹೊರಹಾಕುತ್ತಿದ್ದಾರೆ. ಕನ್ನಡದ ಖ್ಯಾತ ಗೀತರಚನೆಕಾರ, ನಿರ್ದೇಶಕ ಕವಿರಾಜ್ ಇದೀಗ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ತಾವು ನಿರ್ದೇಶನ ಮಾಡಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನ ಆಗುತ್ತಿದೆ. ಆದರೆ, ಮನರಂಜನೆಯ ವಿಭಾಗದಲ್ಲಿ ಇದೆ. ಆ ಸಿನಿಮಾವನ್ನು ಪ್ರಶಸ್ತಿ ಗೆಲ್ಲುವ ವಿಭಾಗದಿಂದ ದೂರ ಇಡಲಾಗಿದೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    Review: ನಗಿಸುತ್ತಲೇ ಪ್ರಶ್ನಿಸುವ 'ಕಾಳಿದಾಸ ಕನ್ನಡ ಮೇಷ್ಟ್ರು' Review: ನಗಿಸುತ್ತಲೇ ಪ್ರಶ್ನಿಸುವ 'ಕಾಳಿದಾಸ ಕನ್ನಡ ಮೇಷ್ಟ್ರು'

    ನಿರ್ದೇಶಕ ಮಂಸೋರೆ ಸಹ 'ಗಂಟುಮೂಟೆ' ಹಾಗೂ 'ಅರಿಷಡ್ವರ್ಗ' ಸಿನಿಮಾಗಳನ್ನು ಚಿತ್ರೋತ್ಸವದಿಂದ ಕಡೆಗಣಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈಗ ಕವಿರಾಜ್ ರಿಗೆ ಸಹ ತಮ್ಮ ಸಿನಿಮಾವನ್ನು ಬೆಂಗಳೂರು ಚಿತ್ರೋತ್ಸವದಲ್ಲಿ ಪರಿಗಣಿಸಿರುವ ರೀತಿ ಸರಿ ಎನಿಸಿಲ್ಲ.

    ಉತ್ತಮ ಸಾಮಾಜಿಕ ಸಂದೇಶ

    ಉತ್ತಮ ಸಾಮಾಜಿಕ ಸಂದೇಶ

    ''ನಮ್ಮ 'ಕಾಳಿದಾಸ ಕನ್ನಡ ಮೇಷ್ಟ್ರು' ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಅವಶ್ಯಕತೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿ, ಉತ್ತಮ ಸಾಮಾಜಿಕ ಸಂದೇಶ ಸಾರಿದ ಕಾರಣ ಕಾರಣ ಅವಾರ್ಡ್ ವಿಭಾಗದಲ್ಲಿ ಖಂಡಿತಾ ಸ್ಪರ್ಧೆಗೆ ಸ್ಥಾನ ಪಡೆಯುವುದೆಂದು ಸಿನಿಮಾ ನೋಡಿ ಮಾತಾಡಿದ ಬಹುತೇಕರು ಅಭಿಪ್ರಾಯ ಪಟ್ಟಿದ್ದರು. ಹಾಗಾಗಿ ನಮಗೂ ಈ ನಿರೀಕ್ಷೆ ಇತ್ತು.'' ಎಂದು ಸಿನಿಮಾ ಬಗ್ಗೆ ಫೇಸ್ ಬುಕ್ ನಲ್ಲಿ ಕವಿರಾಜ್ ಬರೆದಿದ್ದಾರೆ.

    'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ಎಲ್ಲೆಲ್ಲೂ ಹೌಸ್ ಫುಲ್ ಬೋರ್ಡ್.!'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ಎಲ್ಲೆಲ್ಲೂ ಹೌಸ್ ಫುಲ್ ಬೋರ್ಡ್.!

    ಸ್ಪರ್ಧಿಸುವ ಪಟ್ಟಿಯಿಂದ ಹೊರಗಿಟ್ಟಿದ್ದಾರೆ

    ಸ್ಪರ್ಧಿಸುವ ಪಟ್ಟಿಯಿಂದ ಹೊರಗಿಟ್ಟಿದ್ದಾರೆ

    ''ಇತ್ತ ಮನರಂಜನೆಯು ಸಾಕಷ್ಟು ಇದ್ದ ಕಾರಣ ಸಿನಿಮಾ ಸಾಮಾನ್ಯ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದು 75 ದಿನಗಳ ಪ್ರದರ್ಶನ ಕಂಡಿದ್ದನ್ನು ಪರಿಗಣಿಸಿಯೇನೋ ಇದನ್ನು ಪ್ರಶಸ್ತಿಗೆ ಸ್ಪರ್ಧಿಸುವ ಪಟ್ಟಿಯಿಂದ ಹೊರಗಿಟ್ಟು ಅವನೇ ಶ್ರೀಮನ್ನಾರಾಯಣ, ಯಜಮಾನ, ಪೈಲ್ವಾನ್, ಕುರುಕ್ಷೇತ್ರ ಮುಂತಾದ ಸಿನಿಮಾಗಳ ಸಾಲಿನಲ್ಲಿ ಜನಪ್ರಿಯ ಹಿಟ್ ಚಿತ್ರಗಳೆಂದು ಪ್ರದರ್ಶನಗೊಳ್ಳುವ ಪಟ್ಟಿಯಲ್ಲಿ ಸೇರಿಸಲಾಗಿದೆ.'' ಎಂದಿದ್ದಾರೆ.

    ಖುಷಿ ಪಡಬೇಕೋ ,ಬೇಸರ ಪಡಬೇಕೋ

    ಖುಷಿ ಪಡಬೇಕೋ ,ಬೇಸರ ಪಡಬೇಕೋ

    ಕವಿರಾಜ್ ತಮ್ಮ ಪರಿಸ್ಥಿತಿಯನ್ನು ಖುಷಿ ಪಡಬೇಕೋ, ಬೇಸರ ಪಡಬೇಕೋ ಗೊತ್ತಾಗ್ತಿಲ್ಲ ಎಂದು ವಿವರಿಸಿದ್ದಾರೆ. ಬೆಂಗಳೂರು ಚಿತ್ರೋತ್ಸವಕ್ಕೆ ತಮ್ಮ ಸಿನಿಮಾ ಆಯ್ಕೆ ಆಗಿದೆ ಎಂದು ಖುಷಿಪಡುವುದೋ ಅಥವಾ ಸರಿಯಾದ ವಿಭಾಗಕ್ಕೆ ಆಯ್ಕೆ ಆಗಿಲ್ಲ ಎಂದು ದುಃಖಪಡಬೇಕೆ ಎನ್ನುವುದು ಕವಿರಾಜ್ ಗೊಂದಲದಲ್ಲಿ ಇದ್ದಾರೆ. ಅಂದಹಾಗೆ, 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಜಗ್ಗೇಶ್ ಹಾಗೂ ಮೇಘನಾ ಗಾಂವ್ಕರ್ ನಟಿಸಿದ್ದಾರೆ.

    ಜನಪ್ರಿಯ ಚಿತ್ರಗಳ ಆಯ್ಕೆ ಸರಿ ಇದೆಯೇ

    ಜನಪ್ರಿಯ ಚಿತ್ರಗಳ ಆಯ್ಕೆ ಸರಿ ಇದೆಯೇ

    ಈ ಬಾರಿಯ ಚಿತ್ರೋತ್ಸವದ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಒಟ್ಟು 10 ಸಿನಿಮಾಗಳು ಇವೆ. ಈ ಪೈಕಿ ಕೆಲವು ಸಿನಿಮಾಗಳನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ನಮ್ಮ ಸಿನಿಮಾ ನೂರು ದಿನ ಓಡಿದೆ ಎಂದು ತಮಗೆ ತಾವೇ ಬಿಂಬಿಸಿಕೊಂಡ ಸಿನಿಮಾಗಳು, ವಿವಾದ ಮಾಡಿಕೊಂಡ ಸಿನಿಮಾಗಳನ್ನೆಲ್ಲ ಚಿತ್ರೋತ್ಸವಕ್ಕೆ ಆಯ್ಕೆ ಮಾಡುವ ಅಗತ್ಯ ಇತ್ತೆ ಎನ್ನುವ ಪ್ರಶ್ನೆ ಅನೇಕರದ್ದಾಗಿದೆ.

    English summary
    Director Kaviraj unhappy with Bengaluru International Film Festival.
    Sunday, February 23, 2020, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X