ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ಕೌಂಟರ್ ಕೊಟ್ಟ ಕನ್ನಡ ಚಿತ್ರ ನಟಿ ಕವಿತಾ

By Bharath Kumar

Recommended Video

ಎಲ್ಲರ ಮುಂದೆ ಬಟ್ಟೆ ಬಿಚ್ಚಿದ ಕನ್ನಡ ನಟಿ ಕವಿತಾ | Filmibeat Kannada

ತೆಲುಗು ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ವಿವಾದ ಈಗ ಉತ್ತರ ಭಾರತಕ್ಕೂ ಮುಟ್ಟಿದೆ. ಉತ್ತರ ಭಾರತದಿಂದ ಬರುವ ನಟಿಯರಿಗೆ ಅವಕಾಶ ಕೊಡ್ತಾರೆ, ಅವರು ಪಾತ್ರಕ್ಕಾಗಿ ಏನೂ ಬೇಕಾದರೂ ಮಾಡ್ತಾರೆ, ಕೊನೆಗೆ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ಕಾಂಪ್ರುಮೈಸ್ ಕೂಡ ಆಗ್ತಾರೆ ಎಂಬ ಆರೋಪ ಮಾಡಿದ್ದ ಶ್ರೀರೆಡ್ಡಿಗೆ ಈಗ ಕವಿತಾ ರಾಧೇಶ್ಯಾಮ್ ಕೌಂಟರ್ ಕೊಟ್ಟಿದ್ದಾರೆ.

ಸಿನಿಮಾದಲ್ಲಿ ತೆಲುಗು ಹುಡುಗಿಯರಿಗೆ ಅವಕಾಶ ಕೊಡ್ತಿಲ್ಲ ಅಂತಾ ಹೇಳಿ ಟಾಲಿವುಡ್ ಇಂಡಸ್ಟ್ರಿಯ ದೊಡ್ಡ ನಟರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಹುಭಾಷಾ ನಟಿ ಕವಿತಾ ರಾಧೇಶ್ಯಾಮ್ ಆರೋಪಿಸಿದ್ದಾರೆ.

in pics: ಕವಿತಾ ರಾಧೇಶ್ಯಾಮ್ ಹಾಟ್ ಫೋಟೋಗಳು

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕವಿತಾ, ಶ್ರೀರೆಡ್ಡಿ ಏನ್ ಬಟ್ಟೆ ಬಿಚ್ಚೋದು, ನಾನು ಕೂಡ ಬಿಚ್ತೀನಿ. ಆದ್ರೆ, ಆಕೆ ಮಾಡ್ತಿರೋದು ಪಬ್ಲಿಸಿಟಿಗೋಸ್ಕರ ಎಂದು ಕಿಡಿಕಾರಿದ್ದಾರೆ. ಶ್ರೀರೆಡ್ಡಿ ವಿರುದ್ಧ ಕವಿತಾ ಕೋಪಗೊಳ್ಳಲು ಕಾರಣ, ಶ್ರೀರೆಡ್ಡಿ ಮಾಡಿದ್ದ ಆರೋಪ. ಅಷ್ಟಕ್ಕೂ, ಈ ಕವಿತಾ ಯಾರು.? ಮುಂದೆ ಓದಿ.....

ಪ್ರಚಾರಕ್ಕಾಗಿ ಪವನ್ ಕಲ್ಯಾಣ್ ಹೆಸರು ದುರ್ಬಳಕೆ

ಪ್ರಚಾರಕ್ಕಾಗಿ ಪವನ್ ಕಲ್ಯಾಣ್ ಹೆಸರು ದುರ್ಬಳಕೆ

ಶ್ರೀರೆಡ್ಡಿ ಪ್ರಚಾರಕ್ಕಾಗಿ ತೆಲುಗು ನಟ-ನಟಿಯರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪವನ್​ ಕಲ್ಯಾಣ್ ​ಅಂತಹ ದೊಡ್ಡ ಸ್ಟಾರ್ ​​​ಗಳ ಹೆಸರು ಬಳಸಿಕೊಳ್ಳುವುದು ತಪ್ಪು. ಉತ್ತರ ಭಾರತದಿಂದ ಬರುವ ನಟಿಯರಿಂದ ಅವಕಾಶ ಸಿಗುತ್ತಿಲ್ಲ ಎನ್ನುವುದು ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರೆಡ್ಡಿಗೆ ಸ್ಟ್ರಿಪಿಂಗ್ ಪಾಠ ಮಾಡಿದ ಕವಿತಾ

ಶ್ರೀರೆಡ್ಡಿಗೆ ಸ್ಟ್ರಿಪಿಂಗ್ ಪಾಠ ಮಾಡಿದ ಕವಿತಾ

ಶ್ರೀರೆಡ್ಡಿ ಮಾಡಿದ್ದನ್ನ ಸ್ಟ್ರಿಪ್ಪಿಂಗ್ ಅಂತಾರೆ. ಇದನ್ನ ಮಾಡೋಕು ಬರಲ್ಲ ಶ್ರೀರೆಡ್ಡಿಗೆ, ಇನ್ನು ಸಿನಿಮಾದಲ್ಲಿ ಚಾನ್ಸ್​ ಹೇಗ್​ ತಾನೆ ಸಿಗುತ್ತೆ ಅಂದಿದ್ದಾರೆ. ಎಲ್ಲರ ಮುಂದೆ ಬಂದು ಬಟ್ಟೆ ಬಿಚ್ಚೋಥರ ನಾಟಕ ಮಾಡಿ ಕೈ ಕಟ್ಕೊಂಡು ಅಳುವುದು ಹೇಡಿತನ ಅಂತ ಹೇಳಿ, ಸ್ಟ್ರಿಪಿಂಗ್ ಹೇಗೆ ಮಾಡೋದು ಅಂತ ತಾವು ಕೂಡ ಬಟ್ಟೆ ಬಿಚ್ಚಿ ವಿಡಿಯೋ ಮಾಡಿದ್ದಾರೆ.

ನನಗೆ ಈ ರೀತಿ ಅನುಭವ ಆಗಿಲ್ಲ

ನನಗೆ ಈ ರೀತಿ ಅನುಭವ ಆಗಿಲ್ಲ

ನಾನು ಕೂಡ ಹಲವು ಸಿನಿಮಾ ಮಾಡಿದ್ದೀನಿ. ಕನ್ನಡ, ಹಿಂದಿ ಹೀಗೆ ಎಲ್ಲಾ ಕಡೆಯೂ ತಿರುಗಾಡಿದ್ದೀನಿ. ಆದ್ರೆ, ಎಲ್ಲಿಯೂ ನಿರ್ದೇಶಕರು ನನಗೆ ಕಿರುಕುಳ ನೀಡಿಲ್ಲ. ಯಾರೂ ನನ್ನ ದೈಹಿಕವಾಗಿ ಬಳಸಿಕೊಳ್ಳಲು ಪ್ರಯತ್ನ ಪಟ್ಟಿಲ್ಲ. ನಾವು ಕೆಲಸ ಮಾಡುವ ಜಾಗದ ಬಗ್ಗೆ ಗೌರವವಿರಬೇಕು. ಸುಮ್ಮನೇ ಈ ರೀತಿ ಆರೋಪ ಮಾಡಬಾರದು ಎಂದು ತಿರಗೇಟು ನೀಡಿದ್ದಾರೆ.

ಉತ್ತರ ನಟಿಯರು ಮತ್ತು ದಕ್ಷಿಣ ನಟಿಯರು

ಉತ್ತರ ನಟಿಯರು ಮತ್ತು ದಕ್ಷಿಣ ನಟಿಯರು

ಬಹುಶಃ ಇದು ಆರಂಭ ಅನಿಸುತ್ತಿದೆ. ಉತ್ತರ ಭಾರತದಿಂದ ಬಂದ ಹಲವು ನಟಿಯರು ದಕ್ಷಿಣ ಭಾರತದಲ್ಲಿ ನೆಲೆ ಕಂಡಿದ್ದಾರೆ. ಅದೇ ರೀತಿ ದಕ್ಷಿಣ ಭಾರತದಿಂದ ಹೋಗಿರುವ ಅನೇಕರು ಬಾಲಿವುಡ್ ನಲ್ಲಿ ಯಶಸ್ಸು ಕಂಡಿದ್ದಾರೆ. ಸದ್ಯ, ಈ ನಟಿಯರು ಆರೋಪ ಮತ್ತು ಪ್ರತ್ಯಾರೋಪ ನೋಡಿದ್ರ, ಇದು ಮುಂದಿನ ದಿನಗಳಲ್ಲಿ ಉತ್ತರದ ನಟಿಯರು ಮತ್ತು ದಕ್ಷಿಣದ ನಟಿಯರು ಎಂಬ ಭೇದಭಾವ ಉಂಟು ಮಾಡಿದ್ರು ಅಚ್ಚರಿಯಿಲ್ಲ.

ಕನ್ನಡದಲ್ಲೂ ನಟಿಸಿದ್ದಾರೆ ಕವಿತಾ

ಕನ್ನಡದಲ್ಲೂ ನಟಿಸಿದ್ದಾರೆ ಕವಿತಾ

ಕನ್ನಡದಲ್ಲಿ 'ರಾಗಿಣಿ ಐಪಿಎಸ್' ಚಿತ್ರದಲ್ಲಿ ಪಾತ್ರದ ಜೊತೆಗೆ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿರುವ ಕವಿತಾ. ನಂತರ ಜಾಗ್ವಾರ್, ಖತರ್ನಾಕ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಸದ್ಯ 'ಎಲ್ಲದಕ್ಕೂ ರೆಡಿ' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿಗಳಿಸಿಕೊಂಡಿದ್ದಾರೆ ಕವಿತ ರಾಧೇಶಾಮ್.

More from Filmibeat

English summary
Kannada and Bollywood actress Kavita Radheshyam react to telugu actress sri reddy, Casting Couch and Pawan Kalyan Controversy in tollywood industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X