''ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮುರಳಿ.!

'ಬಿಗ್ ಬಾಸ್' ಮುಗಿದ್ಮೇಲೂ ಆಂಡ್ರ್ಯೂ ಕಡೆಯಿಂದ ಕಿರುಕುಳ ತಪ್ಪಿಲ್ಲ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಆಂಡ್ರ್ಯೂ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ 'ಚಿನ್ನು' ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

''ಕವಿತಾಗೆ ಆಂಡ್ರ್ಯೂ ಕಿರುಕುಳ ಕೊಡ್ತಿರೋದು ನಿಜವೇ.? 'ಬಿಗ್ ಬಾಸ್' ಮುಗಿದ್ಮೇಲೂ ಆಂಡ್ರ್ಯೂ ನಡವಳಿಕೆ ಹಾಗೇ ಮುಂದುವರೆದಿದ್ಯಾ.?'' ಎಂದು ಮಾಧ್ಯಮದವರು 'ಒಗ್ಗರಣೆ ಡಬ್ಬಿ' ಮುರಳಿಗೆ ಪ್ರಶ್ನೆ ಮಾಡಿದರು. ಆಗ ಮುರಳಿ, ಆಂಡ್ರ್ಯೂ ಪರವಾಗಿಯೇ ಬ್ಯಾಟಿಂಗ್ ಆರಂಭಿಸಿದರು.

''ಬಿಗ್ ಬಾಸ್' ಮನೆಯಲ್ಲಿ ಇರುವಾಗ, ಆಟಕ್ಕಾಗಿ ಆಂಡ್ರ್ಯೂ ಆ ರೀತಿ ನಡೆದುಕೊಳ್ಳುತ್ತಿದ್ದ ಅಷ್ಟೇ. ನನಗೆ ಗೊತ್ತಿರುವ ಹಾಗೆ ಹೊರಗೆ ಬಂದ ಮೇಲೆ ಆಂಡಿ ಹಾಗೆಲ್ಲ ಮಾಡಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಮುರಳಿ ಹೇಳಿಕೆ ನೀಡಿದ್ದಾರೆ. ಮುಂದೆ ಓದಿರಿ...

ಇದು ಸರಿಯಲ್ಲ.!

ಇದು ಸರಿಯಲ್ಲ.!

''ಕವಿತಾ-ಆಂಡಿ ಕೇಸ್ ನ 'ಬಿಗ್ ಬಾಸ್' ಮನೆಯಲ್ಲಿ ಹ್ಯಾಂಡಲ್ ಮಾಡಿದ್ದು ನಾನೇ. ಆ ಟಾಸ್ಕ್ ನಲ್ಲಿ ನಾನು ಜಡ್ಜ್ ಆಗಿದ್ದೆ. ನೀವು ಸರಿ ಮಾಡಿಕೊಳ್ಳಬಹುದು ಅಂತ ನಾನು ಇಬ್ಬರಿಗೂ ಹೇಳಿದ್ದೆ. ಆದರೆ ಅವರು ಸರಿ ಮಾಡಿಕೊಳ್ಳಲಿಲ್ಲ. ಯಾವತ್ತೋ ನಡೆದಿದ್ದನ್ನ ಇವತ್ತು ಮತ್ತೆ ತೆಗೆಯುವುದು ಸರಿಯಲ್ಲ'' ಎಂದಿದ್ದಾರೆ ಮುರಳಿ.

ಆಂಡಿ ಹಾಗೆಲ್ಲ ಮಾಡಲ್ಲ.!

ಆಂಡಿ ಹಾಗೆಲ್ಲ ಮಾಡಲ್ಲ.!

''ನನಗೆ ಗೊತ್ತಿರುವ ಹಾಗೆ, 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಆಂಡಿ ಹಾಗೆಲ್ಲ ಮಾಡುವವನಲ್ಲ. ಅವನು ತುಂಬಾ ಬುದ್ಧಿವಂತ. ಆಟಕ್ಕಾಗಿ ಅವನು ಹಾಗೆ ಆಡುತ್ತಿದ್ದ ಅಷ್ಟೇ. ಮಜಾ ಟಾಕೀಸ್ ನಲ್ಲಿ ಏನು ನಡೆಯಿತು ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ, ಆಂಡಿ ಹಾಗೆಲ್ಲ ಮಾಡಲ್ಲ ಅನ್ನೋದು ನನ್ನ ಬಲವಾದ ನಂಬಿಕೆ'' ಅಂತಾರೆ ಮುರಳಿ.

ಸಾಯಿಸಿಬಿಡ್ತಾರೆ ನನ್ನನ್ನ.?

ಸಾಯಿಸಿಬಿಡ್ತಾರೆ ನನ್ನನ್ನ.?

''ನಾನು ಕಾಮನ್ ಮ್ಯಾನ್. ಸುದೀಪ್ ಸರ್ ಕಡೆಯಿಂದ ನಾನು ಎಷ್ಟೋ ಪಾಠ ಕಲಿತಿದ್ದೇನೆ. ನಾನು ಎಷ್ಟೊಂದು ಚೇಂಜ್ ಆಗಿದ್ದೇನೆ. ಆದರೂ ನನ್ನನ್ನ ನನ್ನ ಪಾಡಿಗೆ ಇರಲು ಬಿಡುತ್ತಿಲ್ಲ. ಸಾಯಿಸಿಬಿಡ್ತಾರೆ ನನ್ನನ್ನ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೆ ನಾನು ಅವರ ಬಳಿ ಮಾತೇ ಆಡಿಲ್ಲ'' ಎನ್ನುತ್ತಾರೆ ಆಂಡ್ರ್ಯೂ.

ಕವಿತಾ ಕೊಟ್ಟಿರುವ ದೂರು ಏನು.?

ಕವಿತಾ ಕೊಟ್ಟಿರುವ ದೂರು ಏನು.?

''ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಕಿರುಕುಳ ಕೊಟ್ಟಿದ್ದಾರೆ. ಹೊರಗೆ ಬಂದ್ಮೇಲೂ ಅದನ್ನೇ ಮುಂದುವರೆಸಿದ್ದಾರೆ. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ'' ಎಂದು ಆರೋಪಿಸಿ ನಟಿ ಕವಿತಾ ಗೌಡ ಮಹಿಳಾ ಆಯೋಗದ ಮೆಟ್ಟಿಲೇರಿದ್ದರು.

More from Filmibeat

English summary
Bigg Boss Kannada 6 Contestant Kavitha Gowda's complaint in Women's Commission against Andrew: Murali reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X