ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.?

Recommended Video

Bigg Boss Kannada Season 6: ಮಹಿಳಾ ಆಯೋಗಕ್ಕೆ ಕವಿತಾ ದೂರು: ಆಂಡ್ರ್ಯೂ ಹೇಳಿದ್ದೇನು.? | FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಕವಿತಾ ಮತ್ತು ಆಂಡ್ರ್ಯೂ ನಡುವೆ ಆದ ವಾದ-ವಿವಾದ-ಜಗಳಗಳೆಲ್ಲವನ್ನೂ ನೀವು ಕಣ್ತುಂಬಿಕೊಂಡಿದ್ದೀರಾ. 'ಬಿಗ್ ಬಾಸ್' ಮುಗಿದ್ಮೇಲೂ ಇಬ್ಬರ ನಡುವಿನ ಮನಸ್ತಾಪ, ಭಿನ್ನಾಭಿಪ್ರಾಯಕ್ಕೆ ಫುಲ್ ಸ್ಟಾಪ್ ಬಿದ್ದ ಹಾಗೆ ಕಾಣುತ್ತಿಲ್ಲ.

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿರುವಾಗ, ತಮ್ಮ ಬಗ್ಗೆ ಆಂಡ್ರ್ಯೂ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ... 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೂ ಆಂಡ್ರ್ಯೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ಕವಿತಾ ದೂರು ಕೊಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಆಂಡ್ರ್ಯೂ, ''ನನಗೆ ಶಾಕ್ ಆಗಿದೆ. ನನ್ನನ್ನ ನನ್ನ ಪಾಡಿಗೆ ಇರಲು ಬಿಡುತ್ತಿಲ್ಲ. ಸಾಯಿಸಿಬಿಡುತ್ತಾರೆ ನನ್ನನ್ನ. ನನ್ನನ್ನ ಬೆಳೆಯಲು ಬಿಡಬಾರದು ಅಂತ ಹೀಗೆಲ್ಲ ಮಾಡುತ್ತಿದ್ದಾರೆ'' ಎಂದಿದ್ದಾರೆ. ಮುಂದೆ ಓದಿರಿ...

ಶಾಕ್ ಆಗಿದೆ.!

ಶಾಕ್ ಆಗಿದೆ.!

''ನನಗೆ ಫುಲ್ ಶಾಕ್ ಆಗಿದೆ. 'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ನಾನು ಕವಿತಾ ರನ್ನ ಭೇಟಿ ಮಾಡಿಲ್ಲ. ಅವರ ಬಳಿ ಮಾತನಾಡಿಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ಒಂದು ಮೆಸೇಜ್ ಮಾಡಿಲ್ಲ. ಸಂಪರ್ಕ ಅನ್ನೋದು ಇಲ್ಲವೇ ಇಲ್ಲ. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಿದ್ದೆ. ನನ್ನ ಮೇಲೆ ಯಾಕೆ ಕಂಪ್ಲೇಂಟ್ ಕೊಟ್ಟಿದ್ದಾರೆ ಅನ್ನೋದೇ ನನಗೆ ಗೊತ್ತಿಲ್ಲ'' ಅಂತಾರೆ ಆಂಡ್ರ್ಯೂ.

ತಂಗಿ ತರಹ ಎಂದಿದ್ದೆ.!

ತಂಗಿ ತರಹ ಎಂದಿದ್ದೆ.!

''ಬಿಗ್ ಬಾಸ್' ಮನೆಯಲ್ಲಿ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಟಾಸ್ಕ್ ನಲ್ಲಿ ಅವರೇ ನನಗೆ ಹತ್ತು ನಿಮಿಷ ಕೊಡ್ತೀನಿ ಅಂತ ಹೇಳಿದ್ರು. ಆಮೇಲೆ ಕೊಡಲ್ಲ ಎಂದರು. 'ಬಿಗ್ ಬಾಸ್' ಮನೆಯಿಂದ ಹೊರಗೆ ಬರುವಾಗ 'ಫೋನ್ ಮಾಡ್ತೀನಿ' ಅಂತ ಅವರೇ ನನಗೆ ಹೇಳಿದರು. ಪ್ರಥಮ್ ಬಂದಾಗ, ತಂಗಿ ತರಹ ಅಂತ ಒಪ್ಪಿಕೊಂಡಿದ್ದೇನೆ'' - ಆಂಡ್ರ್ಯೂ

ಸಾಯಿಸಿಬಿಡ್ತಾರೆ ನನ್ನನ್ನ.?

ಸಾಯಿಸಿಬಿಡ್ತಾರೆ ನನ್ನನ್ನ.?

''ನಾನು ಕಾಮನ್ ಮ್ಯಾನ್. ಸುದೀಪ್ ಸರ್ ಕಡೆಯಿಂದ ನಾನು ಎಷ್ಟೋ ಪಾಠ ಕಲಿತಿದ್ದೇನೆ. ನಾನು ಎಷ್ಟೊಂದು ಚೇಂಜ್ ಆಗಿದ್ದೇನೆ. ಆದರೂ ನನ್ನನ್ನ ನನ್ನ ಪಾಡಿಗೆ ಇರಲು ಬಿಡುತ್ತಿಲ್ಲ. ಸಾಯಿಸಿಬಿಡ್ತಾರೆ ನನ್ನನ್ನ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೆ ನಾನು ಅವರ ಬಳಿ ಮಾತೇ ಆಡಿಲ್ಲ'' - ಆಂಡ್ರ್ಯೂ

ಕೆರಿಯರ್ ಹಾಳಾಗುತ್ತಿದೆ

ಕೆರಿಯರ್ ಹಾಳಾಗುತ್ತಿದೆ

''ನನಗೆ ನಿಜವಾಗಿಯೂ ಗಾಬರಿ ಆಗಿದೆ. ಕಷ್ಟಪಟ್ಟು ಮಜಾ ಭಾರತ ಪ್ರೋಗ್ರಾಂ ಮಾಡುತ್ತಿದ್ದೇನೆ. ನನಗೆ ಕೆರಿಯರ್ ಮುಖ್ಯ. ಇಡೀ ಮೈಂಡ್ ಬ್ಲಾಂಕ್ ಆಯ್ತು. ಹೀಗೆಲ್ಲ ಆದರೆ ನನ್ನ ಕೆರಿಯರ್ ಹಾಳಾಗುತ್ತದೆ'' - ಆಂಡ್ರ್ಯೂ

ಓಪನ್ ವಾರ್ನಿಂಗ್ ಕೊಟ್ಟಿದ್ದ ಕವಿತಾ

ಓಪನ್ ವಾರ್ನಿಂಗ್ ಕೊಟ್ಟಿದ್ದ ಕವಿತಾ

''ಬಿಗ್ ಬಾಸ್' ಮನೆಯ ಪಾರ್ಟಿಯಲ್ಲಿ ''ನೀನು ಮಾಡಿದ್ದೆಲ್ಲಾ ನಾನು ಮರೆಯೋದಿಲ್ಲ. ನಿನಗೆ ಮುಂದಕ್ಕೆ ಇಟ್ಟಿದ್ದೇನೆ'' ಅಂತ ನನಗೆ ಕವಿತಾ ಹೇಳಿದ್ದರು. ಆಮೇಲೆ 'ಆಟೋಗ್ರಾಫ್' ಮಾಡುವಾಗಲೂ ಇದೇ ಮಾತನ್ನ ಎರಡು ಬಾರಿ ಹೇಳಿ ಓಪನ್ ವಾರ್ನಿಂಗ್ ಕೊಟ್ಟಿದ್ದರು. ಇದು ಪಬ್ಲಿಸಿಟಿ ಸ್ಟಂಟಾ.?'' ಅಂತ ಪ್ರಶ್ನಿಸುತ್ತಾರೆ ಆಂಡ್ರ್ಯೂ.

ಆಗಲೇ ಯಾಕೆ ಕಂಪ್ಲೇಂಟ್ ಮಾಡಲಿಲ್ಲ.?

ಆಗಲೇ ಯಾಕೆ ಕಂಪ್ಲೇಂಟ್ ಮಾಡಲಿಲ್ಲ.?

''ನನ್ನಿಂದ ಅಷ್ಟೊಂದು ತೊಂದರೆ ಆಗಿದ್ದರೆ, 'ಬಿಗ್ ಬಾಸ್' ಮನೆಯಲ್ಲಿ ಇರುವಾಗಲೇ ವಾಹಿನಿಯವರಿಗೆ ಕಂಪ್ಲೇಂಟ್ ಮಾಡಬೇಕಿತ್ತು. ಆದರೆ ಯಾಕೆ ಮಾಡಲಿಲ್ಲ.? ನನ್ನಿಂದ ಹೆಡ್ ಮಸಾಜ್ ಕೂಡ ಮಾಡಿಸಿಕೊಂಡಿದ್ದಾರೆ. ಆಗ ಯಾಕೆ ಯಾವುದೇ ಪ್ರಾಬ್ಲಂ ಇರಲಿಲ್ಲ.?'' - ಆಂಡ್ರ್ಯೂ

ಪ್ಲಾನ್ ಮಾಡಿದ್ದಾರಾ ಕವಿತಾ.?

ಪ್ಲಾನ್ ಮಾಡಿದ್ದಾರಾ ಕವಿತಾ.?

''ನಾನು ಕವಿತಾ ವಿರುದ್ಧ ದೂರು ಕೊಡಲ್ಲ. ಜನರ ಮುಂದೆ ಸುದೀಪ್ ಸರ್ ಮುಂದೆ ಕ್ಷಮೆ ಕೇಳಿದ್ದೇನೆ. ಈ ಆರೋಪಗಳೆಲ್ಲಾ ಸುಳ್ಳು. ನನ್ನನ್ನ ಬೆಳೆಯಲು ಬಿಡಬಾರದು, ತುಳಿದು ಸಾಯಿಸಿಬಿಡಬೇಕು ಅಂತ ಪ್ಲಾನ್ ಮಾಡಿದ್ದಾರಾ.? ನನಗೆ ಗೊತ್ತಿಲ್ಲ'' -ಆಂಡ್ರ್ಯೂ

More from Filmibeat

English summary
Bigg Boss Kannada 6 Contestant Kavitha Gowda's complaint in Women's Commission: Andrew reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X