ರಮ್ಯಾ ಭಾರೀ ಗಲಭೆ ಜತೆ 'ಕ್ರೇಜಿಲೋಕ' ಬಿಡುಗಡೆ

ನಾಳೆ (ಜೂನ್ 8, 2012) ರಂದು 'ಕ್ರೇಜಿಲೋಕ' ಬಿಡುಗಡೆಯಾಗಲಿದೆ. ಇತ್ತೀಚಿಗೆ (ಮೇ 30, 2012) ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿರುವ ನಟ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಚಿತ್ರ ಈ ಕ್ರೇಜಿಲೋಕ ಎಂಬುದು ಎಲ್ಲರಿಗೂ ಗೊತ್ತು.

ಹಾಗೇ, ಇದು ಬಹಳ ವರ್ಷಗಳ ನಂತರ ಕವಿತಾ ಲಂಕೇಶ್ ನಿರ್ದೇಶನದಲ್ಲಿ ತೆರೆಗೆ ಬರುತ್ತಿರುವ ಚಿತ್ರವೂ ಹೌದು. ಕ್ರೇಜಿಲೋಕ, ರವಿಚಂದ್ರನ್ ಹುಟ್ಟುಹಬ್ಬದ ದಿನವಾದ ಮೇ 30, 2012 ರಂದು ತೆರೆಗೆ ಬರಬಹುದೆಂದು ಈ ಮೊದಲು ಹೇಳಲಾಗಿತ್ತು.

ಸಾಕಷ್ಟು ಮೊದಲೇ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಚಿತ್ರಮಂದಿರಗಳ ಸಮಸ್ಯೆಯಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಿದೆ ಸಾಕಷ್ಟು ಬಾರಿ ಹೇಳಿದ್ದಾರೆ ಕವಿತಾ ಲಂಕೇಶ್. ಈಗ ಚಿತ್ರಮಂದಿರಗಳ ಸಮಸ್ಯೆ ಪರಿಹಾರವಾಗಿದೆಯೋ ಇಲ್ಲವೋ, ಚಿತ್ರದ ಬಿಡುಗಡೆಯಂತೂ ಪಕ್ಕಾ ಆಗಿದೆ.

ಸತತ ಸೋಲಿನ ಸರದಾರ ಎನ್ನಬಹುದಾದ ರವಿಚಂದ್ರನ್ ಅವರಿಗೆ ಈ ಚಿತ್ರ ಬ್ರೇಕ್ ನೀಡಬಹುದು ಎಂಬುದು ಎಲ್ಲರ ಲೆಕ್ಕಾಚಾರ. ರವಿಚಂದ್ರನ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಇರುವ ಮಸಾಲೆಗಳು ಈ ಚಿತ್ರದಲ್ಲೂ ಎಂಬುದನ್ನು ಕವಿತಾ ಹೇಳಿದ್ದಾರೆ.

ಇನ್ನು ಸಿನಿಮಾ ಹೆಸರೇ ಹೇಳುವಂತೆ, ಇದು ಕ್ರೇಜಿಲೋಕ. 'ಅಂದು ಪ್ರೇಮ ಲೋಕ, ಇಂದು...ಎಂಬುದು 'ಕ್ರೇಜಿ ಲೋಕ' ಚಿತ್ರಕ್ಕಿರುವ ಮೇಲ್ಬರಹ. ಈ ಎಲ್ಲಾ ಸಂಗತಿಗಳೂ ಸಂಫೂರ್ಣ ಚಿತ್ರವೇ 'ರವಿಚಂದ್ರನ್ ಮಯ' ಎಂಬುದನ್ನು ಸಾರಿ ಹೇಳುತ್ತಿವೆ.

ಚಿತ್ರದ ಕಥೆ ಏನು ಎಂಬ ಗುಟ್ಟನ್ನು ನಿರ್ದೇಶಕಿ ಕವಿತಾ ಲಂಕೇಶ್ ಬಿಟ್ಟುಕೊಟ್ಟಿಲ್ಲವಾದರೂ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಅತಿಮುಖ್ಯ ಪಾತ್ರವಿರುವುದಂತೂ ಸತ್ಯ. ಯುವ ಪ್ರೇಮಿಗಳ ಪಾತ್ರದಲ್ಲಿ ನವನಟ ಸೂರ್ಯ ಹಾಗೂ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ.

ಇವೆಲ್ಲಕ್ಕಿಂತಲೂ ಹೆಚ್ಚಾಗಿ ಕ್ರೇಜಿಲೋಕ ಚಿತ್ರದ ಆಕರ್ಷಣೆ ಕನ್ನಡದ ಲಕ್ಕಿ ಸ್ಟಾರ್ ರಮ್ಯಾ ಈ ಚಿತ್ರದ ಹಾಟ್ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು. ಇದು ಐಟಂ ಹಾಡಲ್ಲ, ಸಾಂದರ್ಭಿಕ ಹಾಡು ಎಂದು ಸ್ಪಷ್ಟಪಡಿಸಿದ್ದಾರೆ ನಿರ್ದೇಶಕಿ ಕವಿತಾ ಲಂಕೇಶ್.

'ಜಾನಿ ಮೇರಾ ನಾಮ್' ಚಿತ್ರದ 'ಊರುಗೊಬ್ಳೆ ಪದ್ಮಾವತಿ...' ಹಾಡಿನಲ್ಲಿ ಸಖತ್ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದ ರಮ್ಯಾ, ಪಡ್ಡೆಗಳ ನಿದ್ದೆಯನ್ನು ಸಂಪೂರ್ಣವಾಗಿ ಕದ್ದಿದ್ದರು. ಅದಕ್ಕೂ ಮೊದಲು ಅಥವಾ ನಂತರ ಯಾವುದೇ ಹಾಡಿನಲ್ಲಿ ರಮ್ಯಾ ಅಷ್ಟು ಹಾಟ್ ಆಗಿ ಕಾಣಿಸಿಕೊಂಡಿರಲಿಲ್ಲ.

ಈಗ ಕ್ರೇಜಿಲೋಕದಲ್ಲಿ ಮತ್ತೊಮ್ಮೆ ರಮ್ಯಾರನ್ನು ಅಂತಹ ಡಾನ್ಸ್ ನಲ್ಲಿ ನೋಡಬಹುದು. 'ಗಲಭೆ...ಗಲಭೆ, ನಾ ಹೋದಲ್ಲೆಲ್ಲಾ ಗಲಭೆ...' ಎಂಬುದು ಹಾಡಿನ ಸಾಲು. ಅದು ಅಂತಹ ಡಾನ್ಸೋ ಅಥವಾ ಇನ್ನೆಂತಹ ಡಾನ್ಸ್ ಎಂಬುದು ಚಿತ್ರ ಬಿಡುಗಡೆ ನಂತರ ತಿಳಿಯಲಿದೆ. ಹಾಡಿನ ಟ್ರೈಲರ್ ನೋಡಿದರೆ ಸಖತ್ತಾಗಿದೆ ಎನ್ನುವಂತಿದೆ.

ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆಯನ್ನು ಹುಟ್ಟುಹಾಕಿರುವ ನಿರ್ದೇಶಕಿ ಕವಿತಾ, ಕ್ರೇಜಿಲೋಕದಲ್ಲಿ ಹಾಸ್ಯ ಹಾಗೂ ಶೃಂಗಾರ ರಸಗಳು ಇವೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೂ ನಿರಾಸೆ ಆಗದಂತೆ ತಮ್ಮ ಚಿತ್ರ ಮೂಡಿಬಂದಿದೆ ಎಂದಿದ್ದಾರೆ. ಚಿತ್ರದ ಮೇಕಿಂಗ್ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ.

ಒಟ್ಟಿನಲ್ಲಿ, ಚಿತ್ರ ನಾಳೆಯೇ ಬಿಡುಗಡೆಯಾಗುತ್ತಿದೆ. ಚಿತ್ರತಂಡದ ಎಲ್ಲರಲ್ಲೂ ಚಿತ್ರ ಗೆಲ್ಲುವ ಬಗ್ಗೆ ಅಪಾರ ಭರವಸೆಯಿದೆ. ಹಾಗೇ, ಕನ್ನಡ ಸಿನಿಪ್ರೇಕ್ಷಕರಲ್ಲೂ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರಬಿಡುಗಡೆ ಇವೆಲ್ಲಕ್ಕೂ ಉತ್ತರ ನೀಡಲಿದೆ. ನಾಳೆವರೆಗೆ ಕಾದು ನೋಡಲೇಬೇಕು. (ಒನ್ ಇಂಡಿಯಾ ಕನ್ನಡ)

More from Filmibeat

English summary
Kavitha Lankesh movie Crazy Loka releases on tomorrow (June 08, 2012). Crazy Star Ravichandran acted in Lead Role and Sandalwood Queen Ramya is in Special Dance. New comer Surya and Harshika Poonachcha are hero, heroines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X