For Quick Alerts
  ALLOW NOTIFICATIONS  
  For Daily Alerts

  ಕವಿತಾ ಲಂಕೇಶ್‌ ನಿರ್ದೇಶನದ 'ಗೌರಿ' ಸಾಕ್ಷ್ಯಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯ ಗರಿ

  |

  ಗೌರಿ ಲಂಕೇಶ್‌ ಕನ್ನಡ ಪತ್ರಿಕೋದ್ಯಮ ಕಂಡ ದಿಟ್ಟ ಪತ್ರಕರ್ತೆ. ಲಂಕೇಶ್‌ ಪತ್ರಿಕೆ ಸಂಸ್ಥಾಪಕ ಪಿ.ಲಂಕೇಶ್‌ ಅವರ ಪುತ್ರಿ ಗೌರಿ ಲಂಕೇಶ್ ತಂದೆಯಂತೆ ಪತ್ರಿಕೋದ್ಯಮದಲ್ಲಿ ಉತ್ತಮ ಹೆಸರು ಪಡೆದುಕೊಂಡರು. ತಮಗನಿಸಿದ ವಿಚಾರವನ್ನು ನೇರವಾಗಿ ಬರೆಯುತ್ತಿದ್ದ ಗೌರಿ ಲಂಕೇಶ್‌ ಅವರು ದುರಂತವಾಗಿ ಅಂತ್ಯ ಕಂಡರು.

  ಇದೀಗ ಗೌರಿ ಲಂಕೇಶ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಗೌರಿ ಲಂಕೇಶ್‌ ಜೀವನ ಆಧಾರಿತ ಸಾಕ್ಷ್ಯಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್‌ ಜೀವನ ಕಥೆ ಆಧರಿಸಿದ 'ಗೌರಿ' ಚಿತ್ರ ಅಂತರಾಷ್ಟ್ರೀಯ ಮಟ್ಟದ ಸಿನಿಮಾ ಮೇಳದಲ್ಲಿ ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

  ಗೌರಿ ಲಂಕೇಶ್‌ ನಿಧನದ ಬಳಿಕ ಅವರ ಹೋರಾಟ ಜೀವನವನ್ನು ಜನರಿಗೆ ತಿಳಿಸಬೇಕೆಂದು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಿ

  ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌ 'ಗೌರಿ' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಒಂದಡೆ ಗೌರಿ ಲಂಕೇಶ್‌ ಹತ್ಯೆಯ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಕವಿತಾ ಲಂಕೇಶ್‌ 'ಗೌರಿ' ಚಿತ್ರಕ್ಕಾಗಿ ಕರ್ನಾಟಕದ ಮೂಲೆ ಮೂಲೆ ಸುತ್ತಾಡಿ ಚಿತ್ರೀಕರಿಸಿದ್ದರು.

  ಕವಿತಾ ಲಂಕೇಶ್‌ ನಿರ್ದೇಶನದ 'ಗೌರಿ' ಸಾಕ್ಷ್ಯಚಿತ್ರ, ಟೆರಂಟೊ ವುಮೆನ್ಸ್‌ ಫಿಲ್ಮಂ ಫೆಸ್ಟಿವಲ್ 2022ರ ಅತ್ಯುತ್ತಮ ಮಾನವ ಹಕ್ಕುಗಳ ಪ್ರಶಸ್ತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ. ಕೆನಾಡಾದ ಮಾಂಟ್ರಿಯಲ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ದಕ್ಷಿಣ ಏಷ್ಯಾ ಫಿಲ್ಮ್‌ ಫೆಸ್ಟಿವಲ್‌ಗೆ ಸಹ ಗೌರಿ ಸಾಕ್ಷ್ಯಾಚಿತ್ರ ಆಯ್ಕೆಯಾಗಿದೆ. ಇನ್ನು ಆ್ಯಮ್‌ಸ್ಟರ್‌ಡ್ಯಾಂಮ್‌ನ ಅಂತರಾಷ್ಟ್ರೀಯ ಚಲನ ಚಿತ್ರಗಳ ಹಬ್ಬ ಹಾಗೂ ಸಡನ್ಸ್‌ ಫಿಲ್ಮಂ ಫೆಸ್ಟಿವಲ್‌ಗಳಿಗೂ 'ಗೌರಿ' ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

  ಈ ಖುಷಿಯ ವಿಚಾರವನ್ನು ನಿರ್ದೇಶಕಿ ಕವಿತಾ ಲಂಕೇಶ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ನಿರ್ದೇಶನದ 'ಗೌರಿ' ಸಾಕ್ಷ್ಯಚಿತ್ರದಲ್ಲಿ ಟೆರಂಟೊ ವುಮೆನ್ಸ್‌ ಫಿಲ್ಮಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಖುಷಿಯ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಗೌರಿ ಧ್ವನಿ ಮತ್ತೆ ಮತ್ತೆ ಮಾರ್ಧನಿಸಲಿ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಪ್ರಸ್ತುತ ದಿನಗಳಲ್ಲಿ ಓರ್ವ ಪತ್ರಕರ್ತ ಈ ಸಮಾಜದಲ್ಲಿ ಅನುಭವಿಸುತ್ತಿರುವ ದೈಹಿಕ ಹಾಗೂ ಮಾನಸಿಕ ಹಿಂಸೆ ಜೊತೆಗೆ ಆತನಿಗೆ ಬರುವ ಬೆದರಿಕೆಗಳ ಬಗ್ಗೆ 'ಗೌರಿ' ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಈ ಮೂಲಕ ಓರ್ವ ಪತ್ರಕರ್ತನ ಬದುಕಿನ ಬವಣೆಗಳನ್ನು ತೋರಿಸುವ ಪ್ರಯತ್ನವನ್ನು ಕವಿತಾ ಲಂಕೇಶ್‌ ಮಾಡಿದ್ದಾರೆ. ಇನ್ನು ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ 200ಕ್ಕೂ ಅಧಿಕ ಪತ್ರಕರ್ತರ ಮೇಲೆ ದಾಳಿ ನಡೆದಿದ್ದು, 30ಪತ್ರಕರ್ತರು ದಾರುಣವಾಗಿ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಸಾಲಿಗೆ ಪತ್ರಕರ್ತೆ ಗೌರಿ ಲಂಕೇಶ್‌ ಕೂಡ ಸೇರಿದಿದ್ದಾರೆ.

  ೨೦೦೦ರಲ್ಲಿ ನಮ್ಮ ಪಿ. ಲಂಕೇಶ್‌ ಪ್ರಕಾಶನ ಲಂಕೇಶ್ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡ ಗೌರಿ ತಮ್ಮ ಲೇಖನಗಳಿಂದ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ಸೂಕ್ಷ್ಮ ವಿಚಾರವನ್ನು ಮುಕ್ತವಾಗಿ ಬರೆಯುತ್ತಿದ್ದ ಗೌರಿ ಅನೇಕರ ವಿರೋಧ ಕೂಡಿ ಕಟ್ಟಿಕೊಂಡರು. ಪರಿಣಾಮ ಸಪ್ಟೆಂಬರ್‌ 5, 2017ರ ಸಂಜೆ ಗೌರಿ ಲಂಕೇಶ್‌ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

  ಈ ಘಟನೆ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ತನಿಖೆಯನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಸ್‌ಐಟಿಗೆ ನೀಡಿತ್ತು. ತನಿಖೆ ನಡೆಸಿದ ವಿಶೇಷ ತನಿಖಾ ತಂಡದ ಸಿಬ್ಬಂದಿ ಗೌರಿ ಹತ್ಯೆಯ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಗೌರಿ ಹತ್ಯೆಯ ಆರೋಪಿಗಳ ವಿರುದ್ಧ ಕೋಕಾ ಪ್ರಕರಣ ಕೂಡ ದಾಖಲಾಗಿದೆ.

  English summary
  Kavitha Lankesh directed documentary on Gauri Lankesh adjudged best human rights film at Toronto Women’s Film Festival 2022.
  Wednesday, September 21, 2022, 11:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X