»   » ನನಗೆ ಮದುವೆ ಆಗಿಲ್ಲ, ಮಗುನೂ ಇಲ್ಲ, ಗಾಸಿಪ್ ಮಾಡಬೇಡಿ ಎಂದ ಕನ್ನಡದ ನಟಿ

ನನಗೆ ಮದುವೆ ಆಗಿಲ್ಲ, ಮಗುನೂ ಇಲ್ಲ, ಗಾಸಿಪ್ ಮಾಡಬೇಡಿ ಎಂದ ಕನ್ನಡದ ನಟಿ

Posted By:
Subscribe to Filmibeat Kannada
ನನಗೆ ಮದುವೆ ಆಗಿಲ್ಲ, ಮಗುನೂ ಇಲ್ಲ, ಗಾಸಿಪ್ ಮಾಡಬೇಡಿ ಎಂದ ಕನ್ನಡದ ನಟಿ | Filmibeat Kannada

ಸಿನಿಮಾ ನಂಟಿರುವವರಿಗೂ ಗಾಸಿಪ್ ಗಳಿಗೂ ಒಂಥರಾ ಸಂಬಂಧ. ತೆರೆ ಮೇಲೆ ಬಂದು ಪ್ರೇಕ್ಷಕರನ್ನ ರಂಜಿಸುವವರ ಬಗ್ಗೆ ಅಂತೆ ಕಂತೆಗಳ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಸದ್ಯ ಕನ್ನಡದ ನಟಿ ಬಗ್ಗೆ ಇಲ್ಲ ಸಲ್ಲದ ಸುದ್ದಿ ಹರಿದಾಡುತ್ತಿದೆಯಂತೆ. ಹಾಗಾಗಿ ನಟಿ ತಮ್ಮ ಪೇಸ್ ಬುಕ್ ನಲ್ಲಿ ನನಗೆ ಮದುವೆ ಆಗಿಲ್ಲ. ಮಗನೂ ಇಲ್ಲ ಸುಮ್ಮನ್ನೆ ಗಾಸಿಪ್ ಹರಡಬೇಡಿ ಎಂದಿದ್ದಾರೆ.

ನನಗಿನ್ನೂ ಮದುವೆ ಆಗಿಲ್ಲ ಅಂತ ಹೇಳುತ್ತಿರುವುದು ನಟಿ ಕಾವ್ಯ ಶಾಸ್ತ್ರಿ. ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ಕಾವ್ಯಾ ಶಾಸ್ತ್ರಿ, ದುನಿಯಾ ವಿಜಯ್ ಜೊತೆ ಸಿನಿಮಾದಲ್ಲಿ ಅಭಿನಯಿಸಿದ್ದರು. ನಂತರ ಮತ್ತೆ ಕಿರುತೆರೆಯ ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ಸದ್ಯ ಖಾಸಗಿ ಕಾರ್ಯಕ್ರಮಗಳ ನಿರೂಪಣೆಗಳಲ್ಲಿ ಕಾವ್ಯ ಶಾಸ್ತ್ರಿ ಪ್ರಖ್ಯಾತಿ ಪಡೆದುಕೊಂಡಿದ್ದಾರೆ.

'ವಿಲನ್' ಬಳಗ ಸೇರಿದ ಮೂವರು 'ಸ್ಟಾರ್' ನಟಿಯರು.!

Kavya Shastri has made a statement about the gossip on Facebook

ಕಾವ್ಯ ತಮ್ಮ ಫೇಸ್ ಬುಕ್ ನಲ್ಲಿ "ನಾನು ಮದುವೆ ಆಗಿಲ್ಲ, ಹಾಗಾಗಿ ಮಗು ಕೂಡ ಇಲ್ಲ, ನನಗೆ ಬಾಯ್ ಫ್ರೆಂಡ್ ಇಲ್ಲ ಹಾಗೂ ಯಾರ ಜೊತೆಯೂ ಕಮಿಟ್ ಆಗಿಲ್ಲ, ನಾನು ಸಿಂಗಲ್ ಆಗಿಯೇ ಇದ್ದೇನೆ, ನಾನು ನನ್ನ ತಂದೆ ತಾಯಿಯ ಜೊತೆಯಲ್ಲಿ ಬೆಂಗಳೂರಿನಲ್ಲೇ ಇದ್ದೇನೆ. ಹೈದ್ರಾಬಾದ್ ಅಥವಾ ಚೆನೈ ಗೆ ಶಿಫ್ಟ್ ಕೂಡ ಆಗಿಲ್ಲ. ಅದಷ್ಟೇ ಅಲ್ಲದೆ ನಾನು ಯಾವುದೇ ಕನ್ನಡ ಸಿನಿಮಾ ಆಫರ್ ಗಳನ್ನ ರಿಜೆಕ್ಟ್ ಮಾಡಿಲ್ಲ". ಎಂದು ಬರೆದಿದ್ದಾರೆ.

Kavya Shastri has made a statement about the gossip on Facebook

ಕಾವ್ಯ ಶಾಸ್ತ್ರಿ ಈ ಉತ್ತರಗಳನ್ನ ಯಾರಿಗಾಗಿ ಕೊಟ್ಟಿದ್ದಾರೆ ಎನ್ನುವುದನ್ನ ತಿಳಿಸಿಲ್ಲ ಆದರೆ, ಗಾಸಿಪ್ ಹಬ್ಬಿಸುತ್ತಿರುವವರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ಒಟ್ಟಾರೆ ನನ್ನ ಬಗ್ಗೆ ಸುಮ್ಮನ್ನೆ ಗಾಸಿಪ್ ಹಬ್ಬಿಸಬೇಡಿ ಎಂದು ಹೇಳುತ್ತಿದ್ದಾರೆ.

English summary
Kannada actress Kavya Shastri has made a statement about the gossip on Facebook. Kavya Shastri acted in Kannada cinema and serials.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada