twitter
    For Quick Alerts
    ALLOW NOTIFICATIONS  
    For Daily Alerts

    'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!

    By Harshitha
    |

    ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಸಿಸಿ (ಕನ್ನಡ ಚಲನಚಿತ್ರ ಕಪ್) ನ ಮೊದಲನೇ ಪಂದ್ಯ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ಗೂ ಕಮ್ಮಿ ಆಗಿರಲಿಲ್ಲ.

    ಸಿಕ್ಸರ್, ಬೌಂಡರಿಗಳ ಅಬ್ಬರದ ನಡುವೆ ಕದಂಬ ಲಯನ್ಸ್ v/s ಒಡೆಯರ್ ಚಾರ್ಜರ್ಸ್ ಪಂದ್ಯ ಸಿಕ್ಕಾಪಟ್ಟೆ ರೋಚಕವಾಗಿತ್ತು. ಕಡೆ ಕ್ಷಣದವರೆಗೂ ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಮ್ಯಾಚ್ ಗೆಲ್ಲುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು.

    ಆದ್ರೆ, ಕೊನೆಯ ಎರಡು ಓವರ್ ಗಳಲ್ಲಿ ರಿತೇಶ್ ಭಟ್ಕಳ್ ಅಕ್ಷರಶಃ ಚಮತ್ಕಾರ ಮಾಡಿದರು. ಕಟ್ಟಕಡೆಯ ಎರಡು ಬಾಲ್ ಗಳಲ್ಲಿ ಸಿಕ್ಸರ್ ಗಳನ್ನ ಸಿಡಿಸಿ 'ಒಡೆಯರ್ ಚಾರ್ಜರ್ಸ್' ಗೆಲುವಿಗೆ ರಿತೇಶ್ ಭಟ್ಕಳ್ ಕಾರಣಕರ್ತರಾದರು.

    'ಒಡೆಯರ್ ಚಾರ್ಜರ್ಸ್' ತಂಡವನ್ನ ಗೆಲುವಿನ ದಡಕ್ಕೆ ಕರೆತಂದ ರಿತೇಶ್ ಭಟ್ಕಳ್ 'ಮ್ಯಾನ್ ಆಫ್ ದಿ ಮ್ಯಾಚ್' ಆದರು. ಕದಂಬ ಲಯನ್ಸ್ v/s ಒಡೆಯರ್ ಚಾರ್ಜರ್ಸ್ ಪಂದ್ಯದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿರಿ...

    ಅದ್ಧೂರಿಯಾಗಿ ಆರಂಭಗೊಂಡ ಕೆಸಿಸಿ

    ಅದ್ಧೂರಿಯಾಗಿ ಆರಂಭಗೊಂಡ ಕೆಸಿಸಿ

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ಅದ್ಧೂರಿಯಾಗಿ ಆರಂಭಗೊಂಡಿತು. ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಕೆಸಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ರೆಬೆಲ್ ಸ್ಟಾರ್ ಅಂಬರೀಶ್, ಸೃಜನ್ ಲೋಕೇಶ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಕೆಸಿಸಿ ಮೊದಲ ಪಂದ್ಯಕ್ಕೆ ಸಾಕ್ಷಿ ಆದರು.

    ರೋಚಕ ಪಂದ್ಯದ ಕೊನೆಯ ಬಾಲ್ ನಲ್ಲಿ ಗೆದ್ದ ಗಣೇಶ್ ತಂಡರೋಚಕ ಪಂದ್ಯದ ಕೊನೆಯ ಬಾಲ್ ನಲ್ಲಿ ಗೆದ್ದ ಗಣೇಶ್ ತಂಡ

    ಡಿ.ಕೆ.ಶಿವಕುಮಾರ್ ಹಾಜರ್

    ಡಿ.ಕೆ.ಶಿವಕುಮಾರ್ ಹಾಜರ್

    ಕನ್ನಡ ಚಲನಚಿತ್ರ ಕಪ್ ನ ಮೊದಲ ಪಂದ್ಯಕ್ಕೆ (ಕದಂಬ ಲಯನ್ಸ್ ಮತ್ತು ಒಡೆಯರ್ ಚಾರ್ಜರ್ಸ್) ಟಾಸ್ ಹಾಕುವಾಗ ಸಚಿವ ಡಿ.ಕೆ.ಶಿವಕುಮಾರ್ ಹಾಜರಿದ್ದರು.

    ಟಾಸ್ ಗೆದ್ದ ಗಣೇಶ್

    ಟಾಸ್ ಗೆದ್ದ ಗಣೇಶ್

    ಟಾಸ್ ಗೆದ್ದ ಒಡೆಯರ್ ಚಾರ್ಜರ್ಸ್ ಕ್ಯಾಪ್ಟನ್ ಗಣೇಶ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಕಿಚ್ಚ ಸುದೀಪ್ ನೇತೃತ್ವದ ತಂಡ ಖುಷಿ ಆಗಿತ್ತು.

    ಒಳ್ಳೆ ಓಪನ್ನಿಂಗ್

    ಒಳ್ಳೆ ಓಪನ್ನಿಂಗ್

    ಮೊದಲು ಬ್ಯಾಟ್ ಮಾಡಿದ ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಪರ 'ಸಿಡಿಲ ಮರಿ' ವೀರೇಂದ್ರ ಸೆಹ್ವಾಗ್ ಹಾಗೂ ಪ್ರದೀಪ್ ಆರಂಭಿಕರಾಗಿ ಕಣಕ್ಕಿಳಿದರು.

    ಸಿಕ್ಸರ್-ಬೌಂಡರಿ ಸಿಡಿಸಿದ ಸೆಹ್ವಾಗ್

    ಸಿಕ್ಸರ್-ಬೌಂಡರಿ ಸಿಡಿಸಿದ ಸೆಹ್ವಾಗ್

    ಮೊದಲೆರಡು ಓವರ್ ಗಳಲ್ಲಿಯೇ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಹೆಚ್ಚು ಮೊತ್ತವನ್ನ ಕಲೆಹಾಕುವಲ್ಲಿ ವೀರೇಂದ್ರ ಸೆಹ್ವಾಗ್ ಯಶಸ್ವಿ ಆದರು. 17 ಎಸೆತಗಳಲ್ಲಿ 29 ರನ್ ಸಿಡಿಸಿ ಸೆಹ್ವಾಗ್ ಔಟ್ ಆದರು.

    121 ರನ್ ಕಲೆ ಹಾಕಿದ ಸುದೀಪ್ ತಂಡ

    121 ರನ್ ಕಲೆ ಹಾಕಿದ ಸುದೀಪ್ ತಂಡ

    ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ (ಹತ್ತು ಓವರ್) ಕದಂಬ ಲಯನ್ಸ್ ತಂಡ 121 ರನ್ ಗಳನ್ನ ಗಳಿಸಿತು. ಒಡೆಯರ್ ಚಾರ್ಜರ್ಸ್ ತಂಡಕ್ಕೆ 122 ಟಾರ್ಗೆಟ್ ನೀಡಲಾಯಿತು.

    ಚೇಸ್ ಮಾಡಿದ ಗಣೇಶ್ ಮತ್ತು ತಂಡ

    ಚೇಸ್ ಮಾಡಿದ ಗಣೇಶ್ ಮತ್ತು ತಂಡ

    ಒಡೆಯರ್ ಚಾರ್ಜರ್ಸ್ ತಂಡ ನಿಧಾನಗತಿಯಲ್ಲಿ ಚೇಸಿಂಗ್ ಶುರು ಮಾಡಿದರು. ಕದಂಬ ಲಯನ್ಸ್ ಕ್ಷೇತ್ರ ರಕ್ಷಣೆ ಚೆನ್ನಾಗಿದ್ದ ಕಾರಣ ಲಯ ಕಂಡುಕೊಳ್ಳಲು ಒಡೆಯರ್ ಚಾರ್ಜರ್ಸ್ ಒದ್ದಾಡಿದರು.

    ಅಬ್ಬರಿಸಿದ ರಿತೇಶ್ ಭಟ್ಕಳ್

    ಅಬ್ಬರಿಸಿದ ರಿತೇಶ್ ಭಟ್ಕಳ್

    ಒಡೆಯರ್ ಚಾರ್ಜರ್ಸ್ ಗೆ ಸೋಲು ಖಚಿತ ಅಂತ ಎಲ್ಲರೂ ಭಾವಿಸಿದ್ದಾಗಲೇ, ಗೇಮ್ ಚೇಂಜ್ ಮಾಡಿದ್ದು ರಿತೇಶ್ ಭಟ್ಕಳ್. ಕಟ್ಟಕಡೆಯ ಎರಡು ಬಾಲ್ ಗಳಲ್ಲಿ ಸಿಕ್ಸರ್ ಸಿಡಿಸಿ ಒಡೆಯರ್ ಚಾರ್ಜರ್ಸ್ ಗೆಲುವಿಗೆ ರಿತೇಶ್ ಕಾರಣರಾದರು. 10 ಎಸೆತಗಳಲ್ಲಿ 34 ರನ್ ಹೊಡೆದ ರಿತೇಶ್ ಭಟ್ಕಳ್ 'ಪಂದ್ಯದ ಪುರುಶೋತ್ತಮ' ಪ್ರಶಸ್ತಿ ಪಡೆದರು.

    ಸುದೀಪ್ ಏನಂದರು.?

    ಸುದೀಪ್ ಏನಂದರು.?

    ''ಎಲ್ಲಾ ಟೀಮು ನಮ್ಮ ಟೀಮೇ.! ಯಾರೇ ಗೆದ್ದರೂ, ಖುಷಿನೇ. ಇಲ್ಲಿಗೆ ಬಂದಿರುವ ಪ್ರತಿಯೊಬ್ಬರು ಖುಷಿ ಪಟ್ಟರೆ ನಮಗೆ ಖುಷಿ'' ಎಂದು ಮ್ಯಾಚ್ ಮುಗಿದ ಮೇಲೆ ಕಿಚ್ಚ ಸುದೀಪ್ ಹೇಳಿದರು.

    ಖುಷಿಯಲ್ಲಿ ಗಣೇಶ್

    ಖುಷಿಯಲ್ಲಿ ಗಣೇಶ್

    ''ಇವತ್ತು ನನ್ನ ತಂಡ ಗೆದ್ದಿರುವುದಕ್ಕೆ ರಿತೇಶ್, ಸೈಯದ್ ಕಾರಣ. ದಿಲ್ಶಾನ್ ನಮಗೆ ಲಕ್. ಅದು ನಮಗೆ ವರ್ಕ್ ಆಯ್ತು'' ಎಂದು ಸಂತಸದಿಂದ ನುಡಿದರು ಒಡೆಯರ್ ಚಾರ್ಜರ್ಸ್ ತಂಡದ ಕ್ಯಾಪ್ಟನ್ ಗೋಲ್ಡನ್ ಸ್ಟಾರ್ ಗಣೇಶ್.

    ಪಂದ್ಯ ವೀಕ್ಷಿಸಿದ ಸುನೀಲ್ ಶೆಟ್ಟಿ, ಸೊಹೈಲ್ ಖಾನ್

    ಪಂದ್ಯ ವೀಕ್ಷಿಸಿದ ಸುನೀಲ್ ಶೆಟ್ಟಿ, ಸೊಹೈಲ್ ಖಾನ್

    ಬಾಲಿವುಡ್ ನಟರಾದ ಸುನೀಲ್ ಶೆಟ್ಟಿ ಹಾಗೂ ಸೊಹೈಲ್ ಖಾನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಕುಳಿತು ಪಂದ್ಯ ವೀಕ್ಷಿಸಿದ್ದು ವಿಶೇಷವಾಗಿತ್ತು.

    English summary
    KCC cricket tournament: Kadamba Lions vs Wodeyar Chargers match report. Wodeyar Chargers won the match.
    Saturday, September 8, 2018, 17:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X