ರೋಚಕ ಪಂದ್ಯದ ಕೊನೆಯ ಬಾಲ್ ನಲ್ಲಿ ಗೆದ್ದ ಗಣೇಶ್ ತಂಡ
ಕೆಸಿಸಿ (ಕನ್ನಡ ಕ್ರಿಕೆಟ್ ಕಪ್) ಇಂದಿನಿಂದ ಶುರು ಆಗಿದೆ. ಮೊದಲ ಪಂದ್ಯ ಸುದೀಪ್ ಹಾಗೂ ಗಣೇಶ್ ತಂಡಗಳ ನಡುವೆ ನಡೆಯಲಿದೆ. ಸುದೀಪ್ ನೇತೃತ್ವದ ಕದಂಬ ಲಯನ್ಸ್ ಹಾಗೂ v/s ಗಣೇಶ್ ಅವರ ಒಡೆಯರ್ ಚಾರ್ಜರ್ಸ್ ಪಂದ್ಯ ಮಧ್ಯಾಹ್ನ 1.15 ಕ್ಕೆ ಪ್ರಾರಂಭವಾಗಿದ್ದು, ಸುದೀಪ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಶನಿವಾರ ಹಾಗೂ ಭಾನುವಾರ ಈ ಪಂದ್ಯಗಳು ನಡೆಯಲಿದೆ. ಇಂದು ನಾಲ್ಕು ಹಾಗೂ ನಾಳೆ ಎರಡು ಪಂದ್ಯಗಳು ಇವೆ. ನಾಳೆಯೇ ರಾತ್ರಿ 8:15ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

ಲೈವ್ ಅಪ್ಡೇಟ್ಸ್
* ಮೊದಲು ಬ್ಯಾಟ್ ಮಾಡಿದ ಕಿಚ್ಚ ಸುದೀಪ್ ಅವರ ಕದಂಬ ಲಯನ್ಸ್ ಪರ ವೀರೇಂದ್ರ ಸೆಹ್ವಾಗ್ ಹಾಗೂ ಪ್ರದೀಪ್ ಬೋಗಾದಿ ಆರಂಭಿಕರಾಗಿ ಕಣಕ್ಕಿಳಿದರು. ಸೆಹ್ವಾಗ್ 16 ಎಸೆತಗಳಲ್ಲಿ 29ರನ್ ಸಿಡಿಸಿ ಔಟಾದರು. ಕದಂಬ ಲಯನ್ಸ್ 5 ಓವರ್ ನಂತರ 61/1.
* ಮೊದಲ ಇನ್ನಿಂಗ್ ಅಂತ್ಯಕ್ಕೆ ಸುದೀಪ್ ಅವರ 'ಕದಂಬ ಲಯನ್ಸ್' ತಂಡ 121 ರನ್ ಗಳನ್ನು ಗಳಿಸಿದೆ. 10 ಓವರ್ ಗಳಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡಿದೆ. ಕೊನೆಯ ಓವರ್ ನಲ್ಲಿ ಎರಡು ವಿಕೆಟ್ ಹೋಗಿದೆ. ಗಣೇಶ್ ತಂಡಕ್ಕೆ 122 ರನ್ ಟಾರ್ಗೆಟ್ ನೀಡಲಾಗಿದೆ.
* 14 ಎಸೆತಗಳಲ್ಲಿ 20 ರನ್ ಬಾರಿಸಿ ದಿಲ್ಶಾನ್ ಔಟ್ ಆಗಿದ್ದಾರೆ. 5 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡ ಗಣೇಶ್ ಅವರ ಒಡೆಯರ್ ಚಾರ್ಜರ್ಸ್ 54 ರನ್ ಗಳಿಸಿದೆ.
* 7 ಓವರ್ ಅಂತ್ಯಕ್ಕೆ ಒಡೆಯರ್ ಚಾರ್ಜರ್ಸ್ ತಂಡ 82 ರನ್ ಗಳಿಸಿದೆ. ಗೆಲ್ಲವು 18 ಎಸೆತಕ್ಕೆ 40 ರನ್ ಗಳು ಬೇಕಿವೆ.
* ಕೆಸಿಸಿ ಸೀರಿಸ್ ನ ಮೊದಲ ಪಂದ್ಯದಲ್ಲಿ ಸುದೀಪ್ ತಂಡದ ವಿರುದ್ಧ ಗಣೇಶ್ ತಂಡಕ್ಕೆ ಸಿಕ್ಕಿದೆ. ಗಣೇಶ್ ಅವರ ಒಡೆಯರ್ ಚಾರ್ಜರ್ಸ್ 126 ರನ್ ಗಳಿಸಿ ವಿಜಯ ಸಾಧಿಸಿದೆ.


Click it and Unblock the Notifications











