For Quick Alerts
  ALLOW NOTIFICATIONS  
  For Daily Alerts

  ಫೈನಲ್ ಹಂತ ತಲುಪಿದ ಮೊದಲ ತಂಡವಾದ ಗಣೇಶ್ ಟೀಂ

  By Naveen
  |

  'ಕನ್ನಡ ಕ್ರಿಕೆಟ್ ಕಪ್' ಸರಣಿಯ ನಾಲ್ಕು ಪಂದ್ಯಗಳು ನಿನ್ನೆ ನಡೆದಿದೆ. ಇವುಗಳಲ್ಲಿ ಗಣೇಶ್ ಸಾರಥ್ಯದ ಒಡೆಯರ್ ಚಾರ್ಜರ್ಸ್ ತಂಡ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದು ಫೈನಲ್ ಹಂತ ತಲುಪಿದೆ. ಸದ್ಯಕ್ಕೆ ಫೈನಲ್ ಹಂತ ತಲುಪಿದ ಮೊದಲ ತಂಡ ಇದಾಗಿದೆ.

  ಆರಂಭದಲ್ಲಿ ಒಡೆಯರ್ ಚಾರ್ಜರ್ಸ್ ಹಾಗೂ ಕದಂಬ ಲಯನ್ಸ್ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಗಣೇಶ್ ತಂಡ 4 ರನ್ ಗಳ ಅಂತರದಲ್ಲಿ ವಿಜಯ ಸಾಧಿಸಿತು. ಈ ಪಂದ್ಯ ಕೊನೆಯ ಬಾಲ್ ವರೆಗೆ ಕುತೂಹಲ ಮೂಡಿಸಿತ್ತು.

  'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.! 'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!

  ಸರಣಿಯ ಮೂರನೇ ಪಂದ್ಯದಲ್ಲಿ ಗಣೇಶ್ ತಂಡ ಹಾಗೂ ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ಸಮರ ಶುರು ಮಾಡಿದರು. ಈ ಪೈಕಿ ಮತ್ತೆ ಗಣೇಶ್ ಟೀಂ ಗೆದ್ದಿತು. ಎರಡಕ್ಕೆ ಎರಡೂ ಪಂದ್ಯಗಳಲ್ಲಿ ವಿಜಯ ಪತಾಕೆ ಹಾರಿಸಿದ ಒಡೆಯರ್ ಚಾರ್ಜರ್ ನೇರವಾಗಿ ಫೈನಲ್ ಗೆ ಹಂತ ತಲುಪಿತು.

  ಅಂದಹಾಗೆ, ನಿನ್ನೆ ನೆಡೆದ ನಾಲ್ಕು ಪಂದ್ಯಗಳ ಪೈಕಿ ಶಿವಣ್ಣ ತಂಡ ಒಂದು, ಯಶ್ ತಂಡ ಒಂದು ಹಾಗೂ ಗಣೇಶ್ ತಂಡ ಎರಡು ಪಂದ್ಯಗಳನ್ನು ಗೆದ್ದಿದೆ. ಫೈನಲ್ ಪಂದ್ಯ ಇಂದು (ಭಾನುವಾರ) ರಾತ್ರಿ 8:15 ಕ್ಕೆ ನಡೆಯಲಿದೆ.

  Kcc cricket tournament : wodeyar chargers enters final

  ಲಾಸ್ಟ್ ಬಾಲ್ ನಲ್ಲಿ ಶಿವಣ್ಣನ ತಂಡವನ್ನು ಸೋಲಿಸಿದ ರಾಜಾಹುಲಿ ಯಶ್ ಲಾಸ್ಟ್ ಬಾಲ್ ನಲ್ಲಿ ಶಿವಣ್ಣನ ತಂಡವನ್ನು ಸೋಲಿಸಿದ ರಾಜಾಹುಲಿ ಯಶ್

  ಇಂದಿನ ಪಂದ್ಯಗಳು

  ಐದನೇ ಪಂದ್ಯ : ಪುನೀತ್ ರಾಜ್ ಕುಮಾರ್ (ಗಂಗಾ ವಾರಿಯರ್ಸ್) v/s ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್)

  ಆರನೇ ಪಂದ್ಯ : ಉಪೇಂದ್ರ (ಹೊಯ್ಸಳ ಈಗಲ್ಸ್) v/s ಸುದೀಪ್ (ಕದಂಬ ಲಯನ್ಸ್)

  English summary
  KCC cricket tournament : Golden Star Ganesh's Wodeyar Chargers enters final.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X