ಕೆಸಿಸಿ ಟೂರ್ನಮೆಂಟ್ ಟಿಕೆಟ್ ಬುಕಿಂಗ್ ಶುರು: ದರವೆಷ್ಟು? ಬುಕ್ ಮಾಡುವುದು ಎಲ್ಲಿ, ಹೇಗೆ?

ಕನ್ನಡ ಸಿನಿ ರಸಿಕರು ಹಾಗೂ ಕ್ರೀಡಾ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಟೂರ್ನಿ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 2018 ಹಾಗೂ 2019ರಲ್ಲಿ ನಡೆದಿದ್ದ ಕನ್ನಡ ಚಲನಚಿತ್ರ ಕಪ್‌ನ ಮೂರನೇ ಆವೃತ್ತಿ ಈ ಬಾರಿ ನಡೆಯುತ್ತಿದ್ದು, ಬಹಳ ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟರು ಕ್ರಿಕೆಟ್ ಆಡುವುದನ್ನು ಸಿನಿ ರಸಿಕರು ಕಾಣಬಹುದಾಗಿದೆ.

ಇನ್ನು ಈಗಾಗಲೇ ಟೂರ್ನಿಯ ದಿನಾಂಕಗಳು, ತಂಡಗಳು ಹಾಗೂ ಪಂದ್ಯಗಳ ಮಾಹಿತಿ ಹೊರಬಿದ್ದಿದ್ದು, ಟೂರ್ನಿಯಲ್ಲಿ ಕಣಕ್ಕಿಳಿಯುವ ಕಲಾವಿದರು ಮೈದಾನಕ್ಕಿಳಿದು ಅಭ್ಯಾಸವನ್ನೂ ಸಹ ಆರಂಭಿಸಿದ್ದಾರೆ. ಇನ್ನು ಈ ಬಾರಿಯ ಕೆಸಿಸಿ ಟೂರ್ನಮೆಂಟ್ ಆಯೋಜನೆಯ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ವಹಿಸಿಕೊಂಡಿದ್ದು, ಇತ್ತೀಚೆಗೆ ನಡೆದ ಪ್ರೆಸ್‌ಮೀಟ್‌ನಲ್ಲಿ ಸಿನಿ ರಸಿಕರನ್ನು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ಪಂದ್ಯಾವಳಿ ವೀಕ್ಷಿಸಲು ಆಹ್ವಾನಿಸಿದ್ದಾರೆ.

ಈ ಬಾರಿಯ ಕೆಸಿಸಿ ಟೂರ್ನಮೆಂಟ್ ಫೆಬ್ರವರಿ 24 ಹಾಗೂ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಇನ್ನು ಈ ಟೂರ್ನಿಯನ್ನು ನೋಡಲು ಇಚ್ಛಿಸುವವರಲ್ಲಿ ಟಿಕೆಟ್ ಹೇಗೆ ಖರೀದಿಸಬೇಕು, ಟಿಕೆಟ್ ದರ ಎಷ್ಟಿರಲಿದೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ಪ್ರಶ್ನೆಗೆ ಪ್ರೆಸ್‌ಮೀಟ್‌ನಲ್ಲಿ ಉತ್ತರ ಸಿಕ್ಕಿದ್ದು ಮಾಹಿತಿ ಈ ಕೆಳಕಂಡಂತಿದೆ.

ಟಿಕೆಟ್ ಎಲ್ಲಿ ಲಭ್ಯ, ದರವೆಷ್ಟು?

ಟಿಕೆಟ್ ಎಲ್ಲಿ ಲಭ್ಯ, ದರವೆಷ್ಟು?

ಕನ್ನಡ ಚಲನಚಿತ್ರ ಕಪ್‌ನ ಟಿಕೆಟ್‌ಗಳು ಟಿಕೆಟ್ ಜೀನಿ ಡಾಟ್ ಇನ್ ( ticketgenie.in ) ವೆಬ್ ತಾಣದಲ್ಲಿ ಲಭ್ಯವಿದೆ. ಟಿಕೆಟ್ ದರ 150ರಿಂದ 5000ರವರೆಗೂ ಇದ್ದು, ಟಿಕೆಟ್ ಜೀನಿ ಮಾತ್ರವಲ್ಲದೇ ಬುಕ್ ಮೈ ಶೋ ಹಾಗೂ ಪೇಟಿಎಮ್ ಅಪ್ಲಿಕೇಶನ್‌ಗಳಲ್ಲಿಯೂ ಸಹ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಟಿಕೆಟ್‌ಗಳು 150, 250, 750, 1000, 1500, 3000 ಹಾಗೂ 5000 ರೂಪಾಯಿಗಳಿಗೆ ಲಭ್ಯವಿದೆ.

ಆರು ತಂಡಗಳು

ಆರು ತಂಡಗಳು

ಈ ಬಾರಿಯ ಕೆಸಿಸಿಯಲ್ಲಿ ಆರು ತಂಡಗಳು ಕಣಕ್ಕಿಳಿಯಲಿದ್ದು, ಗಂಗಾ ವಾರಿಯರ್ಸ್ ತಂಡವನ್ನು ಧನಂಜಯ್ ಮುನ್ನಡೆಸಲಿದ್ದರೆ, ಕದಂಬ ಲಯನ್ಸ್ ತಂಡವನ್ನು ಗಣೇಶ್, ಒಡೆಯರ್ ಚಾರ್ಜರ್ಸ್ ತಂಡವನ್ನು ಶಿವ ರಾಜ್‌ಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್, ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಉಪೇಂದ್ರ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಧ್ರುವ ಸರ್ಜಾ ಮುನ್ನಡೆಸಲಿದ್ದಾರೆ.

ಪಂದ್ಯಗಳ ವಿವರ

ಪಂದ್ಯಗಳ ವಿವರ

ಎರಡು ದಿನಗಳ ಕಾಲ ನಡೆಯಲಿರುವ ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಟೂರ್ನಮೆಂಟ್‌ನ ಮೊದಲನೇ ದಿನ ಮೂರು ಪಂದ್ಯಗಳು ನಡೆಯಲಿವೆ. ಗಂಗಾ ವಾರಿಯರ್ಸ್ ಹಾಗೂ ಹೊಯ್ಸಳ ಈಗಲ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಎರಡನೇ ಪಂದ್ಯದಲ್ಲಿ ಹೊಯ್ಸಳ ಈಗಲ್ಸ್ ಹಾಗೂ ಒಡೆಯರ್ ಚಾರ್ಜರ್ಸ್ ತಂಡಗಳು ಮುಖಾಮುಖಿಯಾಗಲಿವೆ ಮತ್ತು ಮೂರನೇ ಪಂದ್ಯದಲ್ಲಿ ಕದಂಬ ಲಯನ್ಸ್ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ಸೆಣಸಾಡಲಿವೆ. ಇನ್ನು ಎರಡನೇ ದಿನದ ಮೊದಲ ಪಂದ್ಯದಲ್ಲಿ ವಿಜಯನಗರ ಪೇಟ್ರಿಯಾಟ್ಸ್ ಹಾಗೂ ಕದಂಬ ಲಯನ್ಸ್ ಮುಖಾಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಹಾಗೂ ಒಡೆಯರ್ ಚಾರ್ಜರ್ಸ್ ಸೆಣಸಾಡಲಿವೆ ಮತ್ತು ಅಂತಿಮ ಪಂದ್ಯದಲ್ಲಿ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಜಯನಗರ ಪೇಟ್ರಿಯಾಟ್ಸ್ ಕಣಕ್ಕಿಳಿಯಲಿವೆ. ಈ ಮೂಲಕ ಒಂದು ತಂಡ ಒಟ್ಟು ಎರಡು ಪಂದ್ಯಗಳನ್ನು ಆಡಲಿದೆ.

More from Filmibeat

English summary
KCC Season 3 ticket rates and booking platform details. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X