ನನ್ನಿಂದ ಏನಾದ್ರೂ ತಪ್ಪಾಗಿದ್ರೆ, ಕ್ಷಮಿಸಿ; ಆದ್ರೆ ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್
ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ 'ಕೆಡಿ' ವಿಚಿತ್ರ ಕಾರಣಕ್ಕೆ ಸುದ್ದಿ ಆಗ್ತಿದೆ. ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಇದೀಗ ಪ್ರೇಮ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದಾರೆ. ನಾನು ಕೆಟ್ಟ ಅರ್ಥದಲ್ಲಿ ಹಾಡು ಬರ್ದಿಲ್ಲ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೂ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಪ್ರೇಮ್ ಕೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡಿ ನಿರ್ದೇಶಕ ಪ್ರೇಮ್ ಮಾತನಾಡಿದ್ದಾರೆ. ಹಿಂದಿಯಲ್ಲಿ ಹಾಡಿಗೆ ಸಾಹಿತ್ಯ ಬರೆದ ರಕೀಬ್ ಅಲಂ ಹಾಗೂ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ನೋರಾ ಫತೇಹಿ ಯಾಕೆ ಆ ರೀತಿ ಮಾತನಾಡಿದ್ರೋ ಗೊತ್ತಿಲ್ಲ. ಮುಂದೆ ನಾನು ಈ ಹಾಡಿಗೆ ಹೊಸದಾಗಿ ಸಾಹಿತ್ಯ ಬರೆದು ಸಾಂಗ್ ರೆಕಾರ್ಡ್ ಮಾಡಿ ರಿಲೀಸ್ ಮಾಡ್ತೀನಿ. ಈ ಬಾರಿ ಯಾರ ಮನಸ್ಸಿಗೂ ನೋವಾಗದಂತೆ ಸಾಹಿತ್ಯ ಬರಿತ್ತೀನಿ ಎಂದು ಪ್ರೇಮ್ ಹೇಳಿದ್ದಾರೆ.

ವೀಡಿಯೋ ಮಾಡಿ ಮಾತನಾಡಿರುವ ಪ್ರೇಮ್ "ತಪ್ಪು ಮಾಡ್ಲೇಬೇಕು ಎಂದು ಯಾರು ಮಾಡಲ್ಲ. ನಾನು ನನ್ನ ಸಿನಿಮಾಗಳಲ್ಲಿ ದೇವರ ಬಗ್ಗೆ, ತಾಯಿ ಬಗ್ಗೆ ಲವ್ ಬಗ್ಗೆ ಕೂಡ ಸಾಂಗ್ ಬರ್ದಿದ್ದೀನಿ. ಎಲ್ಲದ್ದಕ್ಕೂ ನಿಮ್ಮ ಪ್ರೀತಿ ಪ್ರೋತ್ಸಾಹ ಸಿಕ್ಕಿದೆ. ಪ್ರೇಮ್ ಸಿನಿಮಾ ಬರ್ತಿದೆ ಅಂದ್ರೆ ಸಾಂಗ್ಸ್ ಚೆನ್ನಾಗಿರುತ್ತದೆ ಎಂದು ಕಾಯ್ತಿರಾ..ಅದಕ್ಕೆ ಚಿರಋಣಿ. ಈ ಹಾಡನ್ನು ನನ್ನ ದೃಷ್ಟಿಕೋನದಲ್ಲಿ ಬರೆದೆ. ಬಾಟ್ಲು, ಉಪ್ಪಿನಕಾಯಿ ಇಟ್ಕೊಂಡು ಬರ್ದೆ. ಸಾಹಿತ್ಯ ಅತ್ತ ಇತ್ತ ಮಾಡಬಹುದಿತ್ತು. ನಾನು ಅಶ್ಲೀಲವಾಗಿ, ಯಾರ ಮನಸ್ಸಿಗೆ ನೋವು ಕೊಡಬೇಕು ಅಂತ ಮಾಡ್ಲಿಲ್ಲ. ನನಗೆ ಆ ಅವಶ್ಯಕತೆ ಇಲ್ಲ" ಎಂದಿದ್ದಾರೆ.
ಹಾಡು ಕೇಳಿ ಸಾಕಷ್ಟು ಜನ ನನ್ನ ಬೆಂಬಲಕ್ಕೆ ನಿಂತರು. ಆದರೆ ಕೆಲವರು ಪ್ರೇಮ್ ಹೀಗೂ ಬರೀತ್ತಾನಾ ಅಂಥ ಕೇಳಿದ್ರು ಎಂದು ಪ್ರೇಮ್ ಹೇಳಿದ್ದಾರೆ. "ಸಾಹಿತ್ಯ ಬರೆಯುವಾಗ ಎಲ್ಲಾ ತರಹ ಬರೀಬೇಕು. ಹಾಗಂತ ಕೀಳುಮಟ್ಟದ ಸಾಹಿತ್ಯ ಬರೆಯಬಾರದು.. ತಪ್ಪಾಗಿ ಅರ್ಥ ಮಾಡ್ಕೊಂಡು ನನ್ನನ್ನು, ನನ್ನ ಫ್ಯಾಮಿಲಿಯನ್ನು ಕೆಟ್ಟದಾಗಿ ಬೈದ್ರು.. ಲೈಕ್ಸ್ ಕಾಮೆಂಟ್ಸ್‌ಗಾಗಿ ಮಾಡ್ತಿದ್ದೀರಾ.. ಎಲ್ಲದಕ್ಕೂ ಥ್ಯಾಂಕ್ಸ್.. ಅವರಿಗೆಲ್ಲಾ ಒಳ್ಳೆದಾಗ್ಲಿ.. ನಾನು ಯಾರ ಮನಸ್ಸಿಗೆ ನೋವುಂಟು ಮಾಡ್ಬೇಕು ಅಂತ ಈ ಹಾಡು ಬರ್ದಿಲ್ಲ.. ಒಂದು ವೇಳೆ ನಿಮ್ಮ ಮನಸ್ಸಿಗೆ ನೋವಾಗಿದ್ರೆ ಕ್ಷಮಿಸಿ.. ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ.. ಇನ್ನೊಬ್ಬರ ಮನಸ್ಸು ನೋಯಿಸಿ ನಾನು ಜೀವನ ಮಾಡುವುದು ಬೇಕಿಲ್ಲ" ಎಂದು ತಿಳಿಸಿದ್ದಾರೆ.
ಮತ್ತೆ ಆ ಹಾಡಿಗೆ ಹೊಸ ಸಾಹಿತ್ಯ ಬರೆದು ದೇಶಾದ್ಯಂತ ಬಿಡುಗಡೆ ಮಾಡ್ತೀನಿ.. ಕಾರಣ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ ಎಂದಿದ್ದಾರೆ. "ಹಿಂದಿ ಪದಗಳು ನನಗೆ ಅಷ್ಟಾಗಿ ಗೊತ್ತಾಗಲ್ಲ. ರಕೀಬ್ ಅಲಂ ಬರ್ದಿದ್ದು. ಅವ್ರು ಯಾಕೆ ಆ ರೀತಿ ವಿವಾದದ ಬಗ್ಗೆ ಮಾತನಾಡಿದ್ರೋ ಗೊತ್ತಿಲ್ಲ.. ಕನ್ನಡದಲ್ಲಿ ಇರೋದನ್ನೇ ಬರ್ದಿದ್ದೀನಿ ಅಂದ್ರು. ಕನ್ನಡದಲ್ಲಿ ಸಾಹಿತ್ಯ ಬಹಳ ಚೆನ್ನಾಗಿದೆ... ಅವ್ರು ನನ್ನ ಬರಹಗಾರರು.. ಇರಲಿ ಪರವಾಗಿಲ್ಲ" ಎಂದು ಪ್ರೇಮ್ ವಿವರಿಸಿದ್ದಾರೆ.
ನೋರಾ ಫತೇಹಿ ಮಾತನಾಡಿರುವುದು ಬಹಳ ತಪ್ಪು.. ಯಾವುದೇ ನಟ, ನಟಿ ಸಾಂಗ್ ಕೇಳ್ತಾರೆ, ಅರ್ಥ ತಿಳ್ಕೊತ್ತಾರೆ.. ಸಾಹಿತ್ಯ ಗೊತ್ತಿಲ್ಲದೇ ಎಕ್ಸ್‌ಪ್ರೆಷನ್ ಹೇಗೆ ಬರುತ್ತೆ.. ಯಾಕೆ ಆ ರೀತಿ ಮಾತಾಡಿದ್ರೋ ಗೊತ್ತಿಲ್ಲ.. ವಿವಾದ ಆಗ್ತಿದೆ ಅಂತ ತಪ್ಪಿಸಿಕೊಳ್ಳಲು ಆ ರೀತಿ ಹೇಳಿರಬಹುದು.. ಮೊನ್ನೆ ಸಾಂಗ್ ರಿಲೀಸ್ ಆದಾಗಲೂ ಬಹಳ ಖುಷಿ ಆಯ್ತು ಅಂತ ಮಾತನಾಡಿದ್ರು.. ವಿವಾದ ಬೇಡ ಅಂತ ನೊಂದುಕೊಂಡು ಹೀಗೆ ಹೇಳಿರಬಹುದು ಎಂದು ಪ್ರೇಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











