ಕಬ್ಜದಲ್ಲಿ ಶಿವಣ್ಣ ನಟಿಸಿದ್ದಾರೆ ಎನ್ನುವುದು ನಿಜಾನಾ, ಸುಳ್ಳಾ? ಚಂದ್ರು ಕೊಟ್ರು ಕುತೂಹಲಕಾರಿ ಉತ್ತರ!

ಕೆಜಿಎಫ್ ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾಗಿ ಬೃಹತ್ ಯಶಸ್ಸು ಸಾಧಿಸಿದ ಬಳಿಕ ಕನ್ನಡ ಚಿತ್ರರಂಗದಿಂದ ಮತ್ತಷ್ಟು ಹೆಚ್ಚಿನ ಪ್ಯಾನ್ ಇಂಡಿಯಾ ಚಿತ್ರಗಳು ತೆರೆಕಂಡು ಗೆದ್ದಿವೆ. ಹೀಗಾಗಿ ನಿರ್ದೇಶಕರಲ್ಲಿ ಹಾಗೂ ನಿರ್ಮಾಪಕರಲ್ಲಿ ನಾವೂ ಸಹ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಸಿನಿಮಾ ಮಾಡಬೇಕು ಎಂಬ ಆಸಕ್ತಿ ಹಾಗೂ ತುಡಿತ ಹೆಚ್ಚಾಗಿದೆ.

ಈ ಮಹಾದಾಸೆಯನ್ನು ಹೊತ್ತು ಚಿತ್ರವನ್ನು ಘೋಷಿಸಿದ ಹಲವು ನಿರ್ದೇಶಕರ ಪೈಕಿ ಕಬ್ಜ ಚಿತ್ರದ ನಿರ್ದೇಶಕ ಆರ್ ಚಂದ್ರು ಸಹ ಓರ್ವರು. ಈಗಾಗಲೇ ಹಲವಾರು ಬಾರಿ ತಾನು ಕಬ್ಜ ಚಿತ್ರವನ್ನು ಕೈಗೆತ್ತಿಕೊಳ್ಳಲು ಕಾರಣವೇ ಕೆಜಿಎಫ್ ಸಿನಿಮಾ ಎಂದು ಹೇಳಿರುವ ಚಂದ್ರು ಕೆಜಿಎಫ್ ಫ್ಲೇವರ್‌ನಲ್ಲಿಯೇ ಚಿತ್ರವನ್ನು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಚಿತ್ರದ ಪೋಸ್ಟರ್, ಟೀಸರ್ ಹಾಗೂ ಹಾಡಿನಲ್ಲಿಯೇ ಕಾಣಬಹುದಾಗಿದೆ.

ಇನ್ನು ಕಬ್ಜ ಚಿತ್ರದಲ್ಲಿ ನಾಯಕನಾಗಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಾಯಕಿಯಾಗಿ ಶ್ರೇಯಾ ಶರಣ್ ನಟಿಸಿದ್ದು, ಸ್ಟಾರ್ ನಟ ಕಿಚ್ಚ ಸುದೀಪ್ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸದ್ಯ ಈ ಚಿತ್ರದ ಕುರಿತು ಹಲವು ಕುತೂಹಲ ಹಾಗೂ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಜತೆಗೆ ನಟ ಶಿವ ರಾಜ್‌ಕುಮಾರ್ ಸಹ ಇರಲಿದ್ದಾರಾ ಎಂಬ ಅನುಮಾನ ಮೂಡಿದೆ. ಹೌದು, ನಟ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ನೀಡಿದ್ದ ಹೇಳಿಕೆ ಹಾಗೂ ಟೀಸರ್‌ನಲ್ಲಿನ ದೃಶ್ಯವೊಂದು ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಸಹನ ನಟಿಸಿದ್ದಾರೆ ಎಂಬ ಅನುಮಾನವನ್ನು ಹುಟ್ಟುಹಾಕಿತ್ತು. ಇನ್ನು ಈ ಕುರಿತಾದ ಪ್ರಶ್ನೆ ನಿರ್ದೇಶಕ ಆರ್ ಚಂದ್ರು ಅವರಿಗೂ ಸಹ ಎದುರಾಗಿದ್ದು, ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

 ಚಂದ್ರು ಹೇಳಿದ್ದಿಷ್ಟು

ಚಂದ್ರು ಹೇಳಿದ್ದಿಷ್ಟು

ನಿನ್ನೆ ( ಫೆಬ್ರವರಿ 7 ) ನಿರ್ದೇಶಕ ಆರ್ ಚಂದ್ರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದರು. ಈ ಸಂದರ್ಭದಲ್ಲಿ ತಮ್ಮ ಕಬ್ಜ ಚಿತ್ರದ ಕುರಿತು ವಿಶೇಷವಾಗಿ ಮಾತನಾಡಿದ ಚಂದ್ರು ಅವರಿಗೆ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಸಹ ನಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ, ಟೀಸರ್‌ನಲ್ಲೂ ಒಂದು ದೃಶ್ಯದಲ್ಲಿ ಶಿವ ರಾಜ್‌ಕುಮಾರ್ ಇದ್ದಂತೆ ಭಾಸವಾಗಿದೆ ಇದಕ್ಕೆ ಏನು ಹೇಳುತ್ತೀರ ಎಂಬ ಪ್ರಶ್ನೆಗಳು ಎದುರಾದವು. ಈ ಪ್ರಶ್ನೆಗೆ ಉತ್ತರಿಸಿದ ಚಂದ್ರು ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಚಿತ್ರದಲ್ಲಿ ಸಾಕಷ್ಟು ಕುತೂಹಲಗಳಿದೆ, ಅದನ್ನ ನಾನು ಈಗಲೇ ಬಿಚ್ಚಿಟ್ರೆ ನಿಮಗೆಲ್ಲಾ ಏನೂ ಗೊತ್ತಾಗಲ್ಲ, ಇನ್ನೂ ಯಾರಾರೆಲ್ಲಾ ಇದ್ದಾರೆ ಎಂಬುದನ್ನು ನೋಡಿದ್ರೆ ನೀವೇ ಓಹ್ ಇವರೆಲ್ಲಾ ಇದ್ದಾರಾ ಎಂದುಕೊಳ್ತೀರ, ಯಾರು ಇದ್ದಾರೆ ಎಂಬುದನ್ನು ನಾನು ಈಗಲೇ ಬಿಟ್ಟುಕೊಡಲು ಇಚ್ಛಿಸುವುದಿಲ್ಲ, ಸಿನಿಮಾ ನೋಡಿ, ಸರಿಯಾದ ಸಮಯದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡ್ತೇನೆ ಎಂದು ಹೇಳಿಕೆ ನೀಡಿದರು.

 ಶಿವಣ್ಣ ಇದ್ದಾರೆ ಎಂಬುದನ್ನು ಮೊದಲು ಬಿಚ್ಚಿಟ್ಟಿದ್ದು ಪ್ರಿಯಾಂಕಾ ಉಪೇಂದ್ರ

ಶಿವಣ್ಣ ಇದ್ದಾರೆ ಎಂಬುದನ್ನು ಮೊದಲು ಬಿಚ್ಚಿಟ್ಟಿದ್ದು ಪ್ರಿಯಾಂಕಾ ಉಪೇಂದ್ರ

ಹೌದು, ಕಬ್ಜ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಇದ್ದಾರೆ ಎಂಬುದನ್ನು ಮೊದಲು ತಿಳಿಸಿದ್ದೇ ನಟಿ ಪ್ರಿಯಾಂಕಾ ಉಪೇಂದ್ರ. ಜೀ ಕನ್ನಡ ವಾಹಿನಿ ಜತೆ ಮಾತನಾಡುವಾಗ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ ಉಪೇಂದ್ರ ಕಬ್ಜ ಚಿತ್ರದಲ್ಲಿ ಎಲ್ಲರೂ ವಿಭಿನ್ನವಾಗಿ ಚೆನ್ನಾಗಿ ಕಾಣಿಸುತ್ತಾರೆ ಎನ್ನುತ್ತಾ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್ ಸಹ ಇದ್ದಾರೆ ಎಂಬ ಅಂಶವನ್ನು ತಿಳಿಸಿಬಿಟ್ಟಿದ್ದರು.

 ಟೀಸರ್‌ನಲ್ಲೂ ಇದೆ ದೃಶ್ಯ!

ಟೀಸರ್‌ನಲ್ಲೂ ಇದೆ ದೃಶ್ಯ!

ಇನ್ನು ಕಬ್ಜ ಚಿತ್ರದಲ್ಲಿ ಶಿವಣ್ಣ ಸಹ ಇರಲಿದ್ದಾರೆ ಎಂಬ ವಿಷಯವನ್ನು ನಟಿ ಪ್ರಿಯಾಂಕಾ ಉಪೇಂದ್ರ ತಿಳಿಸಿದ ಬೆನ್ನಲ್ಲೇ ಚಿತ್ರತಂಡ ಬಿಡುಗಡೆ ಮಾಡಿದ್ದ ಟೀಸರ್ ದೃಶ್ಯವೊಂದರಲ್ಲಿ ಉಪೇಂದ್ರ ಅಕ್ಕಪಕ್ಕ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಸಹ ಇರುವಂತಿತ್ತು‌. ಈ ದೃಶ್ಯ ಹಿಂಬದಿಯ ದೃಶ್ಯವಾದ ಕಾರಣ ಈ ರೀತಿಯ ಅನುಮಾನ ಹಾಗೂ ಕುತೂಹಲ ಮೂಡಿದ್ದು, ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

More from Filmibeat

English summary
Keep waiting I won't reveal that who all are acted in Kabzaa movie says R Chandru. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X