'ಕವಚ' ಚಿತ್ರ ಈ ಪುಟ್ಟ ಹುಡುಗಿ ಇಲ್ಲದೆ ಅಪೂರ್ಣ
ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಒಂದಾದ ನಂದಿನಿ ಪಾತ್ರ ಜನರ ಮೆಚ್ಚುಗೆ ಪಡೆದಿದೆ. ಶಿವಣ್ಣ ಹಾಗೂ ಆ ಪುಟ್ಟ ಹುಡುಗಿಯ ಕಾಂಬಿನೇಶನ್ ಅದ್ಭುತವಾಗಿ ಮೂಡಿಬಂದಿದೆ. 'ಕವಚ' ಮಲೆಯಾಳಂ ಸಿನಿಮಾದ ರಿಮೇಕ್ ಆಗಿದ್ದು, ಅಲ್ಲಿ ನಟಿಸಿದ್ದ ಹುಡುಗಿಯೇ ಇಲ್ಲಿ ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮಲೆಯಾಳಂ ನ ಪುಟ್ಟ ನಟಿ ಮೀನಾಕ್ಷಿಗೆ ಕನ್ನಡದಲ್ಲಿ ಡಬ್ ಮಾಡಿರುವುದು ಕೀರ್ತನ. ಕೀರ್ತನ ಧ್ವನಿ ಮೀನಾಕ್ಷಿಗೆ ಬಹಳ ಚೆನ್ನಾಗಿ ಸೂಟ್ ಆಗಿದೆ. ಮೀನಾಕ್ಷಿ ನಟನೆಗೆ ಕೀರ್ತನ ಧ್ವನಿ ಸೇರಿ ದೃಶ್ಯ ಚೆನ್ನಾಗಿ ಮೂಡಿದೆ.

ಅಂದಹಾಗೆ, ಕೀರ್ತನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸರಿಗಮಪ ಕಾರ್ಯಕ್ರಮ ಸೀಸನ್ 14 ಸ್ಪರ್ಧಿಯಾಗಿದ್ದರು. ತನ್ನ ಅದ್ಭುತ ಧ್ವನಿಯ ಮೂಲಕ ರನ್ನರ್ ಅಪ್ ಆಗಿದ್ದರು.

ಗಾಯಕಿಯಾದ ಕೀರ್ತನ ಈಗ ಸಿನಿಮಾಗೆ ಡಬ್ ಕೂಡ ಮಾಡಿದ್ದಾರೆ. ಶಿವಣ್ಣ ಈ ಹುಡುಗಿಯ ಧ್ವನಿಯನ್ನು ಇಷ್ಟಪಟ್ಟಿದ್ದಾರೆ.
English summary
Saregamapa season 14 finalist Keerthana dubbed for 'Kavacha' kannada movie nandini character.


Click it and Unblock the Notifications