'ಆ' ಮಗು ನಮ್ಮದಲ್ಲ: ಮಾಧ್ಯಮಗಳ ಮುಂದೆ ಸ್ಪಷ್ಟ ಪಡಿಸಿದ ದುನಿಯಾ ವಿಜಯ್.!

Recommended Video

ಕೊನೆಗೂ ಮಗು ಬಗ್ಗೆ ಸತ್ಯ ಒಪ್ಪಿಕೊಂಡ ವಿಜಿ..! | Filmibeat Kannada

ಕನ್ನಡ ಚಿತ್ರರಂಗದ 'ಕರಿಚಿರತೆ', ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮತ್ತೊಂದು ಮದುವೆ ಆಗಿದ್ದಾರೆ ಎಂಬ ಸುದ್ದಿ 2016 ರಲ್ಲಿ ಬ್ರೇಕ್ ಆದ ಕೂಡಲೆ ಎರಡ್ಮೂರು ಫೋಟೋಗಳು ಕೂಡ ಲೀಕ್ ಆದವು.

ಲೀಕ್ ಆಗಿದ್ದ ಫೋಟೋಗಳಲ್ಲಿ ದುನಿಯಾ ವಿಜಯ್ ಹಾಗೂ ಕೀರ್ತಿ ಗೌಡ ಜೊತೆಯಲ್ಲಿ ಒಂದು ಮಗು ಕೂಡ ಇತ್ತು. ''ಅದು ಗಂಡು ಮಗು, ಆ ಮಗು ನಮ್ಮದೇ'' ಎಂದು ಮಾಧ್ಯಮಗಳಿಗೆ ದುನಿಯಾ ವಿಜಯ್ ಹೇಳಿಕೆ ಕೊಟ್ಟಿದ್ದರು.

ಇಷ್ಟೆಲ್ಲಾ ಆಗಿ ಎರಡು ವರ್ಷಗಳು ಉರುಳಿದ ಮೇಲೆ ಕೀರ್ತಿ ಗೌಡ ವಿರುದ್ಧ ದುನಿಯಾ ವಿಜಯ್ ಧರ್ಮಪತ್ನಿ ನಾಗರತ್ನ ತಿರುಗಿ ಬಿದ್ದರು. ''ಅವರಿಗೆ ಮಗು ಎಲ್ಲಿದೆ.? ಮೀಡಿಯಾ ಮುಂದೆ ಸುಳ್ಳು ಹೇಳಿದ್ದಾರೆ. ಕರ್ಕೊಂಡು ಬಂದು ಮಗು ತೋರಿಸಲಿ, ಡಿ.ಎನ್.ಎ ಟೆಸ್ಟ್ ಮಾಡಿಸೋಣ'' ಅಂತ ಮಾಧ್ಯಮಗಳ ಮುಂದೆ ಕುಳಿತು ನಾಗರತ್ನ ಸವಾಲು ಹಾಕಿದ್ದರು.

ಇದೀಗ ಇದೇ ಮಗುವಿನ ವಿಚಾರದ ಬಗ್ಗೆ ದುನಿಯಾ ವಿಜಯ್ ಸ್ಪಷ್ಟನೆ ಕೊಟ್ಟಿದ್ದಾರೆ. ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ದುನಿಯಾ ವಿಜಯ್ ಗೆ ತೂರಿಬಂದ ಪ್ರಶ್ನೆ

ದುನಿಯಾ ವಿಜಯ್ ಗೆ ತೂರಿಬಂದ ಪ್ರಶ್ನೆ

ಜೈಲಿನಿಂದ ಹೊರಗೆ ಬರುತ್ತಿದ್ದಂತೆಯೇ, ನಟ ದುನಿಯಾ ವಿಜಯ್ ಹಾಗೂ ಕೀರ್ತಿ ಗೌಡ ಪ್ರೆಸ್ ಮೀಟ್ ನಡೆಸಿದರು. ಈ ನಡುವೆ ದುನಿಯಾ ವಿಜಯ್ ಗೆ ಮಾಧ್ಯಮ ಪ್ರತಿನಿಧಿಗಳಿಂದ 'ಮಗು' ಕುರಿತು ಪ್ರಶ್ನೆ ತೂರಿಬಂತು.

ಮಗು ಬಗ್ಗೆ ದುನಿಯಾ ವಿಜಯ್ ಕೊಟ್ಟ ಸ್ಪಷ್ಟನೆ ಏನು.?

ಮಗು ಬಗ್ಗೆ ದುನಿಯಾ ವಿಜಯ್ ಕೊಟ್ಟ ಸ್ಪಷ್ಟನೆ ಏನು.?

''ಮಗು ನಮ್ಮದಲ್ಲ. ನಮಗೆ ಅಲ್ಲಿ ಮಗು ಸಿಕ್ಕಿತ್ತು. ಆಟ ಆಡಿಸುತ್ತಿದ್ವಿ. ಆ ಫೋಟೋ ನಮಗೆ ಗೊತ್ತಿಲ್ಲದ ಹಾಗೆ ಅಕ್ಕ-ಪಕ್ಕ ಇದ್ದವರು ಕಳುಹಿಸಿಬಿಟ್ಟರು. ಫೋಟೋ ಲೀಕ್ ಆಗ್ಹೋತ್ತಲ್ಲಾ ಅಂತ 'ಹೌದು' ಅಂತ ನಾವು ಒಪ್ಪಿಕೊಂಡ್ವಿ ಅಷ್ಟೇ. ಯಾಕಂದ್ರೆ, ಅವತ್ತಿನ ಪರಿಸ್ಥಿತಿ ಹಾಗಿತ್ತು. ಇಲ್ಲಾಂದ್ರೆ ಮಗು ಎಲ್ಲಿ ಅಂತ ಕೇಳ್ತಾ ಇದ್ದರು'' ಎಂದಿದ್ದಾರೆ ದುನಿಯಾ ವಿಜಯ್.

ಕೀರ್ತಿಯನ್ನ ಮದುವೆ ಆಗಿರುವುದಕ್ಕೆ ಸಾಕ್ಷಿ ಏನು.?

ಕೀರ್ತಿಯನ್ನ ಮದುವೆ ಆಗಿರುವುದಕ್ಕೆ ಸಾಕ್ಷಿ ಏನು.?

''ನಾನು ಮಾನಸಿಕವಾಗಿ ಕೀರ್ತಿ ಜೊತೆ ಚೆನ್ನಾಗಿದ್ದೇನೆ. ಪ್ರಪಂಚ ಸಾವಿರ ಹೇಳಬಹುದು. ಎಲ್ಲವೂ ಬರೆಯೋದೇ ಆಗಿದ್ದರೆ, ಮಾತು ಎಲ್ಲಿ ಇರುತ್ತದೆ.? ಪ್ರೀತಿ ಮೊದಲು ಹುಟ್ಟುವುದು ಮನಸ್ಸಿನಲ್ಲಿ. ಲೀಗಲ್ ಇಟ್ಟುಕೊಂಡು ಏನು ಮಾಡಬೇಕು.? ಆಸ್ತಿಗಾಗಿ ಹೊಡೆದಾಡಬೇಕು ಅಷ್ಟೇ.!'' - ದುನಿಯಾ ವಿಜಯ್.

ಅವತ್ತೇ ಕೇಸ್ ಹಾಕಬೇಕಿತ್ತು.!

ಅವತ್ತೇ ಕೇಸ್ ಹಾಕಬೇಕಿತ್ತು.!

''ಕೀರ್ತಿಯನ್ನ ಮದುವೆ ಆಗಿದ್ದೇನೆ ಅಂತ ನಾನೇ ಮಾಧ್ಯಮಗಳಿಗೆ ಹೇಳಿದೆ. ಅವತ್ತು ಯಾಕೆ ನಾಗರತ್ನ ನನ್ನ ಮೇಲೆ ಕೇಸ್ ಹಾಕಲಿಲ್ಲ.? ಅವತ್ತು ಯಾಕೆ ಅವರು ಕೋರ್ಟ್ ಗೆ ಬಂದು ಕೇಳಲಿಲ್ಲ.?'' - ದುನಿಯಾ ವಿಜಯ್

ಮಕಳು ಕೀರ್ತಿಯನ್ನ ಒಪ್ಪಿಕೊಂಡಿದ್ದಾರಾ.?

ಮಕಳು ಕೀರ್ತಿಯನ್ನ ಒಪ್ಪಿಕೊಂಡಿದ್ದಾರಾ.?

''ಯಾರಿಗೆ ಯಾರೂ ಒಪ್ಪಿಕೊಳ್ಳುವ ಅವಶ್ಯಕತೆ ಇಲ್ಲ. ಆ ಮಕ್ಕಳು (ಮೋನಿಕಾ, ಮೊನಿಷಾ, ಸಾಮ್ರಾಟ್) ಕೀರ್ತಿದ್ದಲ್ಲ. ಅವರು ನನಗೆ ಮಕ್ಕಳು. ನನಗೆ ಕೀರ್ತಿ ಹೆಂಡತಿ. ಮಕ್ಕಳು ನಮ್ಮ ಜೊತೆಗೆ ಬದುಕುವ ಹಾಗಿದ್ದರೆ ಬದುಕಲಿ, ಇಲ್ಲಾಂದ್ರೆ ಹೋಗಲಿ. ಎಲ್ಲರೂ ಸ್ವತಂತ್ರವಾಗಿ ಬದುಕುವ ಹಾಗಾಗಿದೆ'' - ದುನಿಯಾ ವಿಜಯ್.

ಈಗ ತೊಂದರೆ ಯಾಕೆ.?

ಈಗ ತೊಂದರೆ ಯಾಕೆ.?

''ದುನಿಯಾ ವಿಜಯ್ ಯಾವಾಗ ನನ್ನನ್ನ ಮದುವೆ ಆಗ್ತೀನಿ ಅಂತ ಬಂದ್ರು, ಅವತ್ತೇ ಅವರು (ನಾಗರತ್ನ) ಹೇಳಿದ್ರೆ ಖಂಡಿತ ನಾನು ಮದುವೆ ಆಗುತ್ತಿರಲಿಲ್ಲ. ಎಲ್ಲವೂ ಪರಸ್ಪರ ಒಪ್ಪಿಗೆ ಮೇರೆಗೆ ಆಗಿದೆ. ವಿಜಿ ಸಿಂಗಲ್ ಆಗಿದ್ದರು, ಹೀಗಾಗಿ ನಾನು ಮದುವೆ ಆದೆ. ಈಗ ಯಾಕೆ ನನಗೆ ತೊಂದರೆ ಕೊಡುತ್ತಿದ್ದಾರೆ.?'' ಎಂದು ಪ್ರಶ್ನಿಸುತ್ತಾರೆ ಕೀರ್ತಿ ಗೌಡ.

More from Filmibeat

English summary
Keerthi Gowda and I do not have a baby clarifies Duniya Vijay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X