ಕೀರ್ತಿ ಬಗ್ಗೆ ಸ್ಫೋಟಕ ದಾಖಲೆಯಿದೆ ಎಂದು ಪ್ರೆಸ್ ಮೀಟ್ ಮಾಡಿದ ನಾಗರತ್ನ ಹೇಳಿದ್ದೇನು.?
Recommended Video

ದುನಿಯಾ ವಿಜಯ್ ಸಂಸಾರ ತಾಪತ್ರಯ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೀರ್ತಿ ಗೌಡ ಹಾಗೂ ದುನಿಯಾ ವಿಜಯ್ ಬಗ್ಗೆ ನಾಗರತ್ನ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ.
ದುನಿಯಾ ವಿಜಯ್ ಬಾಳಲ್ಲಿ ಕೀರ್ತಿ ಗೌಡ ಐದನೇಯವಳು ಅಂತ ನಿನ್ನೆಯಷ್ಟೇ ಬಾಯ್ಬಿಟ್ಟ ನಾಗರತ್ನ ಇಂದು ಬೆಳಗ್ಗೆ ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೂ ಫೋನ್ ಮಾಡಿ ಸಂಜೆ ಆರು ಗಂಟೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದರು.
ಕೀರ್ತಿ ಗೌಡ ಬಗ್ಗೆ ಸ್ಫೋಟಕ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡುವೆ ಅಂತ ಇಂದು ಬೆಳಗ್ಗೆಯಷ್ಟೇ ನಾಗರತ್ನ ಹೇಳಿದ್ದರು. ಆದ್ರೆ, ಪ್ರೆಸ್ ಮೀಟ್ ನಲ್ಲಿ ಮಾತ್ರ ಯಾವುದೇ ದಾಖಲೆ ರಿಲೀಸ್ ಮಾಡಲಿಲ್ಲ. ''ಕೋರ್ಟ್ ಗೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ನೀಡುವೆ'' ಅಂತ ನಾಗರತ್ನ ಹೇಳಿದ್ದಾರೆ. ಮುಂದೆ ಓದಿರಿ...

ಅನ್ಯಾಯ ಆಗುತ್ತಿದೆ
''ನನಗೆ ಅನ್ಯಾಯ ಆಗುತ್ತಿದೆ. ಕೀರ್ತಿ ಗೌಡ ಬಗ್ಗೆ ಎಲ್ಲಾ ದಾಖಲೆ ನನ್ನ ಬಳಿ ಇದೆ. ನಾಯಂಡಹಳ್ಳಿ ಸ್ಲಂನಿಂದ ಬಂದಾಕೆ ಕೀರ್ತಿ ಗೌಡ. ಸಹಾಯ ಕೇಳಿಕೊಂಡು ಬಂದು ಈಗ ದುನಿಯಾ ವಿಜಯ್ ನ ಗಂಡ ಅಂತ ಹೇಳುತ್ತಿದ್ದಾಳೆ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ನಾನು ಹೇಗೆ ಸಹಿಸಿಕೊಂಡು ಇರಲಿ.?
''ನಾನು ದುನಿಯಾ ವಿಜಿಗೆ ಡೈವೋರ್ಸ್ ಕೊಟ್ಟಿಲ್ಲ. ಆಕೆ (ಕೀರ್ತಿ ಗೌಡ) ಹೇಗೆ ನನ್ನ ಗಂಡನನ್ನ ಮದುವೆ ಆಗಿದ್ದಾಳೆ.? ಹೀಗೆ ವರ್ಷಕ್ಕೆ ಒಬ್ಬರು ಹೆಂಡತಿ ಅಂತ ಹೇಳಿಕೊಂಡು ಬರ್ತಿದ್ರೆ, ನಾನು ಹೇಗೆ ಸಹಿಸಿಕೊಂಡು ಇರಲಿ.?'' ಎಂದು ಪ್ರಶ್ನಿಸುತ್ತಾರೆ ನಾಗರತ್ನ.

ಯಾವ ಆಸ್ತಿಯೂ ಇಲ್ಲ
''ನಿಜ ಹೇಳ್ತಿದ್ದೀನಿ.. ಮಕ್ಕಳ ಹೆಸರಿನಲ್ಲಿ ಯಾವ ಆಸ್ತಿಯೂ ಇಲ್ಲ. ಈ ಮನೆ (ದುನಿಯಾ ಋಣ) ಬಿಟ್ಟರೆ ಬೇರೆ ಯಾವ ಆಸ್ತಿಯೂ ನನ್ನ ಹಾಗೂ ನನ್ನ ಮಕ್ಕಳ ಹೆಸರಿನಲ್ಲಿ ಇಲ್ಲ'' ಅಂತಾರೆ ನಾಗರತ್ನ.

ಕೀರ್ತಿಗೆ ಬಾಯ್ ಫ್ರೆಂಡ್ಸ್ ಇದ್ದಾರೆ
''ಕೀರ್ತಿಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ... ಎಷ್ಟು ಜನ ನಿರ್ಮಾಪಕರ ಜೊತೆಗೆ ಇದ್ದಳು ಅಂತ ನನಗೆಲ್ಲಾ ಗೊತ್ತಿದೆ. ಕೀರ್ತಿಗೆ ನನ್ನ ಗಂಡ ಒಬ್ಬನೇ ಅಲ್ಲ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಸಾಕ್ಷಿ ಏನಿದೆ.?
''ಕೀರ್ತಿ ಹಾಗೂ ದುನಿಯಾ ವಿಜಯ್ ಎಲ್ಲಿ, ಯಾವಾಗ ಮದುವೆ ಆಗಿದ್ದಾರೆ.? ಅದಕ್ಕೆ ಸಾಕ್ಷಿ ಏನಿದೆ.? ಕೀರ್ತಿಯನ್ನ ಕರೆಯಿಸಿ, ನನಗೆ ಕೆಲವು ಉತ್ತರಗಳು ಬೇಕು. ಕೋರ್ಟ್ ಗೆ ದಾಖಲೆಗಳು ಸಲ್ಲಿಸಿದ ಬಳಿಕ ನಾನು ದಾಖಲೆಗಳನ್ನು ಬಿಡುಗಡೆ ಮಾಡುವೆ'' ಎಂದಿದ್ದಾರೆ ನಾಗರತ್ನ


Click it and Unblock the Notifications











