ದುನಿಯಾ ವಿಜಯ್ ಗೆ ನಾಗರತ್ನ 2ನೇ ಹೆಂಡ್ತಿ, ಕೀರ್ತಿ ಗೌಡ 5ನೇ ಹೆಂಡ್ತಿ.!

Recommended Video

ದುನಿಯಾ ವಿಜಯ್‌ಗೆ ಒಂದಲ್ಲಾ ಎರಡಲ್ಲಾ ೫ ಜನ ಹೆಂಡತಿಯರು..! | Filmibeat Kannada

ಅದ್ಯಾವಾಗ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದುನಿಯಾ ವಿಜಯ್ ಜೈಲು ಪಾಲಾದರೋ, ಬ್ಲಾಕ್ ಕೋಬ್ರಾ ನಸೀಬು ಕೆಟ್ಟು ಹೋಗಿದೆ.

ಎರಡು ವರ್ಷಗಳಿಂದ ಸೈಲೆಂಟ್ ಆಗಿದ್ದ ದುನಿಯಾ ವಿಜಯ್ ಪತ್ನಿ ನಾಗರತ್ನ ಇದೀಗ ದಿನಕ್ಕೊಂದು ಬಾಂಬ್ ಸಿಡಿಸುತ್ತಿದ್ದಾರೆ. ಕೀರ್ತಿ ಗೌಡ ವಿರುದ್ಧ ದೂರು ನೀಡಿದ ನಾಗರತ್ನ ಮಾಧ್ಯಮಗಳ ಮುಂದೆ ಕುಳಿತು ದುನಿಯಾ ವಿಜಯ್ ಜಾತಕವನ್ನ ಬಟಾ ಬಯಲು ಮಾಡುತ್ತಿದ್ದಾರೆ.

''ಕೋರ್ಟ್ ನಲ್ಲಿ ಒಪ್ಪಂದ ಮಾಡಿಕೊಂಡು ಬೇರೆ ಮದುವೆ ಆಗಿದ್ದೇನೆ. ನಾಗರತ್ನ ಹೆಸರಿಗೆ 'ದುನಿಯಾ ಋಣ' ಮನೆಯನ್ನ ಬರೆದುಕೊಟ್ಟಿದ್ದೇನೆ'' ಎಂದು ಪ್ರೆಸ್ ಮೀಟ್ ನಲ್ಲಿ ದುನಿಯಾ ವಿಜಯ್ ಹೇಳಿದ್ದರು.

ಆದ್ರೆ, ''2009 ರಲ್ಲಿಯೇ 'ದುನಿಯಾ ಋಣ' ಮನೆ ನನ್ನ ಹೆಸರಲ್ಲಿ ನೋಂದಣಿ ಆಗಿತ್ತು. ಆಸ್ತಿಗಾಗಿ ನಾನು ಕೋರ್ಟ್ ನಲ್ಲಿ ರಾಜಿ ಆಗಿಲ್ಲ, ಬೇರೆ ಮದುವೆಗೆ ಒಪ್ಪಿಗೆ ಕೊಟ್ಟಿಲ್ಲ'' ಅಂತ ನಾಗರತ್ನ ಮೀಡಿಯಾ ಮುಂದೆ ಸ್ಪಷ್ಟ ಪಡಿಸಿದ್ದಾರೆ.

ಸಾಲದಕ್ಕೆ, ''ನನ್ನನ್ನ ಮದುವೆ ಅಗುವ ಮುನ್ನವೇ ದುನಿಯಾ ವಿಜಯ್ ಬೇರೆ ಮದುವೆ ಆಗಿ ಡೈವೋರ್ಸ್ ಪಡೆದುಕೊಂಡಿದ್ದರು. ಕೀರ್ತಿ ಗೌಡ ಐದನೇಯವರು'' ಎಂದು ಮಾಧ್ಯಮಗಳ ಮುಂದೆ ನಾಗರತ್ನ ಹೇಳಿದ್ದಾರೆ. ಎಲ್ಲವನ್ನೂ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ರಾಜಿ ಸಂಧಾನ ಆಗಿದ್ದು ಹೇಗೆ.?

ರಾಜಿ ಸಂಧಾನ ಆಗಿದ್ದು ಹೇಗೆ.?

''ಫ್ಯಾಮಿಲಿ ಕೋರ್ಟ್ ನಲ್ಲಿ ಅವರು (ದುನಿಯಾ ವಿಜಯ್) ಡೈವೋರ್ಸ್ ಬೇಕು ಅಂತ ಹೋಗಿದ್ದರು. ನಾನು ಡೈವೋರ್ಸ್ ಕೊಡಲ್ಲ ಅಂತ ಹೇಳಿದೆ. ಒಂದುವರೆ ವರ್ಷ ಆಯ್ತು. ನನಗೆ ಮೇನ್ಟೇನನ್ಸ್ ಆರ್ಡರ್ ಆಯ್ತು. ಮೇನ್ಟೇನನ್ಸ್ ಕೊಡದೆ ಡೈವೋರ್ಸ್ ತೆಗೆದುಕೊಳ್ಳಬೇಕು ಅಂತಿದ್ದರು. ಆದ್ರೆ ಆಗಲಿಲ್ಲ. ಏನೋ ಪ್ರಾಬ್ಲಂ ಆಯ್ತು ಅನ್ನೋದಕ್ಕೋಸ್ಕರ ಕಾಂಪ್ರೊಮೈಸ್ ಮಾಡಿಕೊಳ್ಳಲು ಮುಂದಾದರು. ಮಕ್ಕಳ ಭವಿಷ್ಯಕ್ಕಾಗಿ ನಾವು ಕಾಂಪ್ರೊಮೈಸ್ ಆದ್ವಿ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಮದುವೆ ಅಂತ ಹೇಳಲಿಲ್ಲ

ಮದುವೆ ಅಂತ ಹೇಳಲಿಲ್ಲ

''ಕೀರ್ತಿ ಗೌಡ ಬಗ್ಗೆ ಗೊತ್ತಾದಾಗ, ನಾನು ಕೇಳಿದ್ದಕ್ಕೆ ಮದುವೆ ಅಂತೇನೂ ಹೇಳಲಿಲ್ಲ. ''ನಾವು ಸಿನಿಮಾದಲ್ಲಿ ಆಕ್ಟ್ ಮಾಡೋರು. ನೂರು ಜನರ ಜೊತೆ ಓಡಾಡುತ್ತೇವೆ. ಕೇಳಲು ನೀನು ಬರಬಾರದು'' ಅಂತ ದುನಿಯಾ ವಿಜಯ್ ಹೇಳಿದರು'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಮುಂಚಿನಿಂದಲೂ ಮನೆ ನನ್ನ ಹೆಸರಿನಲ್ಲಿ ಇದೆ

ಮುಂಚಿನಿಂದಲೂ ಮನೆ ನನ್ನ ಹೆಸರಿನಲ್ಲಿ ಇದೆ

''ರಾಜಿ ಆಗಲು ನಾನು ಮನೆ-ಆಸ್ತಿಯನ್ನ ಕೇಳಲಿಲ್ಲ. ಅದಾಗಲೇ ನನ್ನ ಹೆಸರಿನಲ್ಲಿ ಮನೆ ಇತ್ತು. 2009 ರಲ್ಲಿ ಈ ಮನೆ ಗೃಹಪ್ರವೇಶ ಆಯ್ತು. ಆಗಲೇ ಈ ಮನೆ ನನ್ನ ಹೆಸರಿನಲ್ಲಿ ನೋಂದಣಿ ಆಗಿತ್ತು'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಆಸ್ತಿಯನ್ನ ಕೇಳಿಲ್ಲ

ಆಸ್ತಿಯನ್ನ ಕೇಳಿಲ್ಲ

''ನಾನು ಯಾವ ಆಸ್ತಿಯನ್ನೂ ಕೇಳಿಲ್ಲ. ಮಕ್ಕಳಿಗೆ ಏನು ಬೇಕೋ, ಅದನ್ನ ಮಾಡಿದ್ದಾರೆ. ಆಸ್ತಿಗಾಗಿ ನಾನು ಕಾಂಪ್ರೊಮೈಸ್ ಮಾಡಿಕೊಂಡಿಲ್ಲ. ಬೇರೆ ಮದುವೆ ಆಗಲು ಒಪ್ಪಿಗೆ ಕೊಟ್ಟಿಲ್ಲ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಕೀರ್ತಿ ಐದನೇಯವಳು.!

ಕೀರ್ತಿ ಐದನೇಯವಳು.!

''ಒಂದೇ ಹುಡುಗಿ ಆಗಿದ್ದರೆ ನಾನು ತಲೆ ಕೆಡಿಸಿಕೊಳ್ಳಬೇಕಾಗಿತ್ತು. ಈ ಸಿನಿಮಾ ಫೀಲ್ಡ್ ನಲ್ಲಿ ಇರುವ ಕಾರಣ ಎಷ್ಟೋ ಹುಡುಗಿಯರು ಬಂದು ಹೋದರು. ಕೀರ್ತಿ ಗೌಡ ಐದನೇ ಅವರು'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಆಗಲೇ ಒಂದು ಡೈವೋರ್ಸ್ ಆಗಿತ್ತು

ಆಗಲೇ ಒಂದು ಡೈವೋರ್ಸ್ ಆಗಿತ್ತು

''ನಾನು ಮದುವೆ ಆಗುವ ಮುನ್ನವೇ ದುನಿಯಾ ವಿಜಯ್ ಗೆ ಒಂದು ಡೈವೋರ್ಸ್ ಆಗಿತ್ತು. ನನಗೆ ಆ ವಿಷಯ ಗೊತ್ತಿರಲಿಲ್ಲ. ಮದುವೆ ಆದ್ಮೇಲೆ ಗೊತ್ತಾಯ್ತು. ನಮ್ಮದು ಅರೇಂಜ್ಡ್ ಮ್ಯಾರೇಜ್'' - ನಾಗರತ್ನ, ದುನಿಯಾ ವಿಜಯ್ ಪತ್ನಿ

More from Filmibeat

English summary
Keerthi Gowda is 5th lady in Duniya Vijay's life says Nagaratna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X