ನಾಗರತ್ನ ಕೊಟ್ಟ ಕಂಪ್ಲೇಂಟ್ ಕಾಪಿ ನೋಡಿ ಶಾಕ್ ಆಯ್ತು ಎಂದ ಕೀರ್ತಿ ಗೌಡ.!
ಅತ್ತ ದುನಿಯಾ ವಿಜಯ್ ವಿರುದ್ಧ ಮಾರಣಾಂತಿಕ ಹಲ್ಲೆ, ಕಿಡ್ನ್ಯಾಪ್ ಕಂಪ್ಲೇಂಟ್ ದಾಖಲಾದರೆ, ಇತ್ತ ದುನಿಯಾ ವಿಜಯ್ ಎರಡನೇ ಪತ್ನಿ ಎನ್ನಲಾಗಿರುವ ಕೀರ್ತಿ ಗೌಡ ವಿರುದ್ಧ ಮೊದಲನೇ ಪತ್ನಿ ನಾಗರತ್ನ ದೂರು ನೀಡಿದರು.
ದುನಿಯಾ ವಿಜಯ್-ಮಾರುತಿ ಗೌಡ ನಡುವಿನ ರಂಪಾಟ ಸಂದರ್ಭದಲ್ಲಿ ಪುತ್ರ ಸಾಮ್ರಾಟ್ ಕೂಡ ಇದ್ದ ಎಂದು ವರದಿ ಆದ್ಮೇಲೆ, ಗಾಬರಿಗೊಂಡ ತಾಯಿ ನಾಗರತ್ನ ಕೀರ್ತಿ ಗೌಡ ಇದ್ದ ಮನೆಗೆ ತೆರಳಿದ್ದಾರೆ.
ಮಕ್ಕಳನ್ನ ನೋಡಲು ನಾಗರತ್ನ ಮುಂದಾದಾಗ ಕೀರ್ತಿ ಗೌಡ ಕೊಲೆ ಬೆದರಿಕೆ ಹಾಕಿದರು ಎಂದು ಆರೋಪಿಸಿ ನಾಗರತ್ನ ಗಿರಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದರು.
ನಡೆದ ಘಟನೆ ಬಗ್ಗೆ ನಾಗರತ್ನ ತಮ್ಮ ಕಂಪ್ಲೇಂಟ್ ಕಾಪಿಯಲ್ಲಿ ಸಂಪೂರ್ಣ ವಿವರ ನೀಡಿದ್ದಾರೆ. ಇದರ ಬಗ್ಗೆ ಇದೀಗ ಕೀರ್ತಿ ಗೌಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮುಂದೆ ಓದಿರಿ....

ಕೀರ್ತಿ ಗೌಡ ಕೊಟ್ಟ ಪ್ರತಿಕ್ರಿಯೆ
''ಕಂಪ್ಲೇಂಟ್ ಕಾಪಿ ಇದೆ. ಮನೆಯಲ್ಲಿ ಸಾಕ್ಷಿಯಾಗಿ ಬೌನ್ಸರ್ ಗಳು ಇದ್ದಾರೆ. ಕೆಲಸದವರು, ಅಡುಗೆಯವರೂ.. ಎಲ್ಲರೂ ಇದ್ದಾರೆ. ತನಿಖೆ ನಡೆಯುತ್ತಿದೆ. ಅದರ ಬಗ್ಗೆ ನಾನೇನೂ ಹೇಳಲ್ಲ. ಪೊಲೀಸರು ಮಾತನಾಡುತ್ತಾರೆ'' ಅಂತಾರೆ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ

ಅಂತಹ ಬುದ್ಧಿ ನನಗೆ ಇಲ್ಲ
''ಒಬ್ಬರ ಮೇಲೆ ಕೈ ಮಾಡುವ ಬುದ್ಧಿ ನನಗೆ ಇಲ್ಲ. ಕಂಪ್ಲೇಂಟ್ ಕಾಪಿ ನೋಡಿ ನನಗೆ ಶಾಕ್ ಆಯ್ತು. ಇಷ್ಟು ವರ್ಷ ಇಲ್ಲದೇ ಇರುವುದು ಈಗ ಬಂತು. ಕೇಸ್ ಮೇಲೆ ಕೇಸ್ ಆಗಿದೆ. ತೊಂದರೆ ಇಲ್ಲ. ಎಲ್ಲವನ್ನೂ ಫೇಸ್ ಮಾಡಲು ರೆಡಿ ಇದ್ದೇವೆ'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಪತಿ ನೋವಿನಲ್ಲಿದ್ದಾರೆ
''ಅಲ್ಲಿ ನೋಡಿದರೆ ಅವರು (ದುನಿಯಾ ವಿಜಯ್) ನೋವಿನಲ್ಲಿ ಇದ್ದಾರೆ. ಈ ಟೈಮ್ ನಲ್ಲಿ ನನಗೆ ಏನ್ನನ್ನೂ ಮಾತನಾಡಲು ಇಷ್ಟ ಇಲ್ಲ. ನನ್ನ ಪತಿ ಸೇಫ್ ಆಗಿ ವಾಪಸ್ ಬರಲಿ'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ

ಮದುವೆ ಆಗಿ ಮೂರು ವರ್ಷ ಆಗಿದೆ
''ಮೂರು ವರ್ಷ ಆಗಿದೆ ಮದುವೆ ಆಗಿ. ಅನೈತಿಕ ಸಂಬಂಧ ಅಂತ ಹೇಳ್ತಿದ್ದಾರೆ... ಹೇಳಲಿ ಪರವಾಗಿಲ್ಲ. ಏನೇನು ಹೇಳಿದ್ದಾರೆ, ಅದು ಹಾಗೇ ಇರಲಿ. ಇದರ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ'' - ಕೀರ್ತಿ ಗೌಡ, ದುನಿಯಾ ವಿಜಯ್ ಎರಡನೇ ಪತ್ನಿ


Click it and Unblock the Notifications











