For Quick Alerts
  ALLOW NOTIFICATIONS  
  For Daily Alerts

  'ಮಹಾನಟಿ' ಕೀರ್ತಿ ಸುರೇಶ್‌ ಗೆ ಕನ್ನಡ ಈ ನಟರೊಂದಿಗೆ ನಟಿಸುವ ಆಸೆ

  |

  ತಮ್ಮ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಸ್ತಿ ಪಡೆದಿರುವ ಖ್ಯಾತ ನಟಿ ಕೀರ್ತಿ ಸುರೇಶ್‌ ಈಗ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  Recommended Video

  ಮಹಾನಟಿ ಕೀರ್ತಿ ಸುರೇಶ್ ಆಸೆ ಕೇಳಿ ಕನ್ನಡಾಭಿಮಾನಿಗಳು ಫುಲ್ ಹ್ಯಾಪಿ | Filmibeat Kannada

  ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ವಿಜಯ್, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್, ಮೋಹನ್‌ಲಾಲ್ ಅಂಥಹಾ ಸ್ಟಾರ್ ನಟರೊಂದಿಗೆ ನಟಿಸಿರುವ ಕೀರ್ತಿ ಸುರೇಶ್, ಪ್ರಸ್ತುತ ಬ್ಯುಸಿ ನಟಿಯರಲ್ಲಿ ಒಬ್ಬರು. ಇಂತಿಪ್ಪ ಕೀರ್ತಿ ಸುರೇಶ್‌ಗೆ ಕನ್ನಡದ ಇಬ್ಬರು ಸ್ಟಾರ್ ನಟರೊಂದಿಗೆ ನಟಿಸುವ ಆಸೆಯಿದೆಯಂತೆ!

  ಅಣ್ಣಾವ್ರ ಮನೆ ಹುಡುಕಿಕೊಂಡು ಬಂದ ಖ್ಯಾತ ನಟಿ ಕೀರ್ತಿ ಸುರೇಶ್ಅಣ್ಣಾವ್ರ ಮನೆ ಹುಡುಕಿಕೊಂಡು ಬಂದ ಖ್ಯಾತ ನಟಿ ಕೀರ್ತಿ ಸುರೇಶ್

  ಹೌದು, ಕನ್ನಡದ ಇಬ್ಬರು ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಲು ಆಸೆಯಿದೆ ಎಂಬ ವಿಷಯವನ್ನು ಕೀರ್ತಿ ಸುರೇಶ್ ಅವರು, ಅಭಿಮಾನಿಗಳೊಟ್ಟಿಗೆ ನಡೆಸಿದ ಟ್ವಿಟ್ಟರ್‌ ಸಂವಾದದಲ್ಲಿ ಬಹಿರಂಗಗೊಳಿಸಿದ್ದಾರೆ. ಯಾರು ಆ ನಟರು?

  ಕನ್ನಡದ ಯಾವ ನಟರೊಂದಿಗೆ ನಟಿಸಲು ಇಷ್ಟ?

  ಕನ್ನಡದ ಯಾವ ನಟರೊಂದಿಗೆ ನಟಿಸಲು ಇಷ್ಟ?

  ಅಭಿಮಾನಿಗಳೊಂದಿಗೆ ಟ್ವಿಟ್ಟರ್‌ನಲ್ಲಿ ಪ್ರಶ್ನೋತ್ತರ ಸಂವಾದ ನಡೆಸಿದ ಕೀರ್ತಿ ಸುರೇಶ್‌ಗೆ, ಟೀನಿ ಸರಾ ಅನಿನ್ ಎಂಬುವರು, 'ತಮಿಳು, ತೆಲುಗು, ಮಲಯಾಳಂ ಸಿನಿಮಾರಂಗದಲ್ಲಿ ಹೆಸರು ಮಾಡಿದ್ದೀರಿ. ಕನ್ನಡ ಸಿನಿಮಾದಲ್ಲಿ ಯಾವಾಗ ನಟಿಸಲಿದ್ದೀರಿ? ಒಂದು ವೇಳೆ ನಟಿಸುವುದಾದರೆ, ಯಾವ ನಟ, ನಿರ್ದೇಶಕರೊಟ್ಟಿಗೆ ಕೆಲಸ ಮಾಡಲು ನಿಮಗೆ ಇಷ್ಟ? ಎಂದು ಪ್ರಶ್ನಿಸಿದ್ದಾರೆ.

  ಕೀರ್ತಿಗೆ, ಪುನೀತ್, ಯಶ್ ಜೊತೆಗೆ ನಟಿಸುವ ಆಸೆ

  ಕೀರ್ತಿಗೆ, ಪುನೀತ್, ಯಶ್ ಜೊತೆಗೆ ನಟಿಸುವ ಆಸೆ

  ಇದಕ್ಕೆ ಪ್ರತಿಕ್ರಿಯಿಸಿರುವ ಕೀರ್ತಿ ಸುರೇಶ್, 'ಪುನೀತ್ ರಾಜ್‌ಕುಮಾರ್ ಹಾಗೂ ಯಶ್ ಅವರೊಟ್ಟಿಗೆ ಸಿನಿಮಾ ಮಾಡಲು ಇಷ್ಟ' ಎಂದು ಉತ್ತರಿಸಿದ್ದಾರೆ. ಕೀರ್ತಿ ಸುರೇಶ್ ಅವರ ಈ ಟ್ವಿಟ್ಟರ್ ಸಂದೇಶದ ಸ್ಕ್ರೀನ್ ಶಾಟ್‌ ಅನ್ನು, ಪುನೀತ್, ಯಶ್ ಅಭಿಮಾನಿಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

  ರಾಜ್‌ಕುಮಾರ್ ಕುಟುಂಬದೊಂದಿಗೆ ಬಾಂಧವ್ಯ

  ರಾಜ್‌ಕುಮಾರ್ ಕುಟುಂಬದೊಂದಿಗೆ ಬಾಂಧವ್ಯ

  ನಟಿ ಕೀರ್ತಿ ಸುರೇಶ್ ಕುಟುಂಬಕ್ಕೆ ಡಾ.ರಾಜ್‌ಕುಮಾರ್ ಅವರ ಕುಟುಂಬದೊಂದಿಗೆ ಆತ್ಮೀಯತೆ ಇದೆ. ಕೆಲವು ಸಮಯದ ಹಿಂದೆ, ಕೀರ್ತಿ ಸುರೇಶ್ ಅವರು ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬಕ್ಕೆ ಭೇಟಿ ನೀಡಿದ್ದರು. ಆ ಚಿತ್ರ ಸಖತ್ ವೈರಲ್ ಆಗಿತ್ತು. ಕೀರ್ತಿ ಸುರೇಶ್ ತಾಯಿ ಮೇನಕಾ ರಾಜ್‌ಕುಮಾರ್ ಅವರ ಸಮಯದ ಗೊಂಬೆ ಸಿನಿಮಾದಲ್ಲಿ ನಟಿಸಿದ್ದಾರೆ.

  ಹಲವು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಬ್ಯುಸಿ

  ಕೀರ್ತಿ ಸುರೇಶ್ ಅವರು ಮಲಯಾಳಂ ನ ಬಿಗ್ ಬಜೆಟ್ ಸಿನಿಮಾ ಮರಕ್ಕರ್ ನಲ್ಲಿ ನಟಿಸಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ. ತೆಲುಗಿನಲ್ಲಿ ರಂಗ್‌ದೇ ಸಿನಿಮಾ ಮುಗಿಸಿದ್ದಾರೆ. ರಜನೀಕಾಂತ್ ನಟನೆಯ ಅನ್ನಾತೆ, ಗುಡ್ ಲಕ್ ಸಸಿ, ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಠ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress Keerthy Suresh said she wants to act with Puneeth Rajkumar and Yash in Kannada movies.
  Thursday, November 5, 2020, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X