»   » ದಿನೇಶ್‌ಬಾಬು ನಿರ್ದೇಶನದ ಪಾಂಚಾಲಿ

ದಿನೇಶ್‌ಬಾಬು ನಿರ್ದೇಶನದ ಪಾಂಚಾಲಿ

By: ಎಂ. ವಿನೋದಿನಿ
Subscribe to Filmibeat Kannada

ವಿಷ್ಣು ಅವರ ಮಗಳು ಕೀರ್ತಿಗೆ ಮದುವೆ. ಈ ವಿಚಾರವನ್ನು ಬಹಿರಂಗಪಡಿಸಿದ್ದು ಸ್ವತಃ ವಿಷ್ಣು ಅವರೇ. ಕೀರ್ತಿ ಹಾಗೂ ವಿಷ್ಣು ವರ್ಧನ್‌ ನಡುವಣ ಅನ್ಯೋನ್ಯತೆಗೆ ಸಾಕ್ಷಿಯಾಗಿ ಹಲವು ಪ್ರಸಂಗಗಳನ್ನು ಉದಾಹರಿಸಬಹುದು. ಸದ್ಯಕ್ಕೆ ವಿಷ್ಣುವರ್ಧನ್‌ ಅವರ ಕಾಸ್ಟ್ಯೂಮ್‌ ಡಿಸೈನರ್‌ ಕೀರ್ತಿಯೇ. ಜೊತೆಗೆ ಹೋಗುವಾಗಲೆಲ್ಲಾ ಅವರಿಗೆ ಮಗಳು ಬೇಕೇ ಬೇಕು. ಮನೆಯಲ್ಲಿದ್ದಾಗ ಹರಟುವುದೂ ಮಗಳ ಜೊತೆಗೇ.

ಕಳೆದ ವರ್ಷ ಕೀರ್ತಿ ಹಾಡಿದ ಕ್ಯಾಸೆಟ್‌ ಒಂದು ಬಿಡುಗಡೆಯಾಗಿತ್ತು. ಅದಕ್ಕೆ ಸಂಗೀತ ನೀಡಿದ್ದು ಖೋಟಾನೋಟು ಖ್ಯಾತಿಯ ಪಂಪ. ಆ ಕ್ಯಾಸೆಟ್‌ ಬಿಡುಗಡೆ ಸಮಾರಂಭದಲ್ಲಿ ವಿಷ್ಣು ಹೇಳಿದ್ದರು. 'ಹಾಡುವುದಕ್ಕೆ ಆಸಕ್ತಿ ಇದ್ದರೆ ಸಾಲದು. ಪರಿಶ್ರಮ ಬೇಕು. ನಮ್ಮ ಮಕ್ಕಳ ಹಾಡು ನಮಗೆ ಚೆನ್ನಾಗಿ ಕೇಳಿಸುತ್ತೆ. ಆದರೆ ಜನ ವಿಷ್ಣು ಮಗಳ ಕ್ಯಾಸೆಟ್‌ ಅಂತ ಅದನ್ನು ಕೊಳ್ಳುವುದಿಲ್ಲ . ಕೊಳ್ಳಬಾರದು. ನಿಜವಾಗಿಯೂ ಸಂಗೀತ ಚೆನ್ನಾಗಿದ್ದರೆ ಕೊಳ್ಳಲಿ."

ಆಗ ವಿಷ್ಣುವರ್ಧನ್‌ ಸ್ವಜನ ಪಕ್ಷಪಾತವನ್ನು ಮೀರಿದ ವ್ಯಕ್ತಿ ಎಂದು ಎಲ್ಲರಿಗೂ ಅನಿಸಿತ್ತು . ಈಗಲೂ ಅಷ್ಟೆ . ತಮ್ಮಮಗಳ ಮದುವೆ ವಿಚಾರವನ್ನು ವಿಷ್ಣು ಎಲ್ಲರೆದುರು ಹೇಳಿಕೊಂಡಿಲ್ಲ. ಆತ್ಮೀಯರ ಜೊತೆಗಷ್ಟೇ ಹಂಚಿಕೊಂಡಿದ್ದಾರೆ. ಅದು ಸುದ್ದಿಯಾಗುವುದು ಅವರಿಗೆ ಬೇಕಿಲ್ಲ. ಅಂದ ಹಾಗೆ ಕೀರ್ತಿಗೆ ಅಮೇರಿಕಾದ ಅನೇಕ ಸಂಬಂಧಗಳು ಬಂದಿದ್ದುವಂತೆ. ಆದರೆ, ಅಮೆರಿಕಾಕ್ಕೆ ಹೋಗುವುದು ಆಕೆಗೆ ಇಷ್ಟವಿರಲಿಲ್ಲವಂತೆ. ಆಕೆ ಮೆಚ್ಚಿಕೊಂಡದ್ದು ದಿನೇಶ್‌ ಬಾಬು ನಿರ್ದೇಶನದ ಪಾಂಚಾಲಿ ಚಿತ್ರದಲ್ಲಿ ನಟಿಸುತ್ತಿರುವ ಅನಿರುದ್ಧನನ್ನು.

ಇಲ್ಲಿಗೆ- ಬಾಬು ವಿಷ್ಣು ಸಂಬಂಧಕ್ಕೆ ಮತ್ತೊಂದು ಆಯಾಮ ಸಿಕ್ಕಂತಾಗಿದೆ. ವಿಷ್ಣುವಿಗೆ ಒಳ್ಳೆಯ ಪಾತ್ರ ಕೊಡುತ್ತಿದ್ದ ದಿನೇಶ್‌ಬಾಬು, ವಿಷ್ಣು ಮಗಳಿಗೆ ವರನನ್ನು ಕರುಣಿಸಿದ್ದಾರೆ ಎನ್ನಬಹುದೇ?

English summary
Singer Keerthi rejected US alliances and elected Actor Anirudh to settle down in India

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada