ವರ್ಷಗಳ ಬಳಿಕ ಕೋಮಲ್ ಕಮ್ ಬ್ಯಾಕ್ : ತಮ್ಮನಿಗೆ ಜೈ ಎಂದ ಜಗ್ಗೇಶ್

ಹಾಸ್ಯ ನಟರು ಹೀರೋ ಆಗುವುದು ಕಮಾನ್. ಆದರೆ, ಆ ರೀತಿ ಹೀರೋ ಆದ ಮೇಲೆ ಹೆಚ್ಚು ಉಳಿದುಕೊಂಡ ನಟರು ತೀರ ಕಡಿಮೆ. ಕನ್ನಡದಲ್ಲಿಯೂ ಅನೇಕ ಹಾಸ್ಯ ನಟರು ನಾಯಕ ನಟನಾಗಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ.

ಕಾಮಿಡಿ ನಟರಾಗಿದ್ದ ಕೋಮಲ್ ಹೀರೋ ಆದರು. ನಾಯಕನಾಗಿ ಕಾಣಿಸಿಕೊಂಡ ಕೆಲ ಸಿನಿಮಾಗಳು ಹಿಟ್ ಆದರೆ, ಅನೇಕ ಸಿನಿಮಾಗಳು ಫ್ಲಾಪ್ ಆದವು. ಇತ್ತೀಚೆಗೆ ಕೋಮಲ್ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ.

ಹೀಗಿರುವಾಗ, ಕೋಮಲ್ ಎಲ್ಲಿ ಎಂದು ಹುಡುಕುತ್ತಿದ್ದವರಿಗೆ ಈಗ ಕೋಮಲ್ ಕಮ್ ಬ್ಯಾಕ್ ಮಾಡಿದ್ದಾರೆ. ವಾಪಸ್ ಬಂದಿರುವ ತಮ್ಮನಿಗೆ ಅಣ್ಣ ಜಗ್ಗೇಶ್ ಆಶೀರ್ವಾದ ಸಿಕ್ಕಿದೆ.

'ಕೆಂಪೇಗೌಡ 2' ಸಿನಿಮಾ ಅಪ್ ಡೇಟ್ಸ್

'ಕೆಂಪೇಗೌಡ 2' ಸಿನಿಮಾ ಅಪ್ ಡೇಟ್ಸ್

ಕೋಮಲ್ 'ಕೆಂಪೇಗೌಡ 2' ಹೆಸರಿನ ಸಿನಿಮಾ ಮಾಡುತ್ತಿದ್ದರು. ಅದೇ ರೀತಿ ಸಿನಿಮಾದ‌ ಒಂದು ಟೀಸರ್ ಕೂಡ ಬಂದಿತ್ತು. ಆದರೆ, ವರ್ಷಗಳು ಕಳೆದರು ಆ ಸಿನಿಮಾ‌ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ.‌ ಹೀಗಿರುವಾಗ, 'ಕೆಂಪೇಗೌಡ 2' ಚಿತ್ರದ ಅಪ್ ಡೇಟ್ಸ್ ಈಗ ಬಂದಿದೆ.

ನಾಳೆ 'ಕೆಂಪೇಗೌಡ 2' ಟ್ರೇಲರ್

ನಾಳೆ 'ಕೆಂಪೇಗೌಡ 2' ಟ್ರೇಲರ್

ಕೋಮಲ್ ಅಭಿನಯದ 'ಕೆಂಪೇಗೌಡ 2' ಸಿನಿಮಾದ ಟ್ರೇಲರ್ ನಾಳೆ ಬಿಡುಗಡೆಯಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ಯೂ ಟ್ಯೂಬ್ ನಲ್ಲಿ ಟ್ರೇಲರ್ ರಿಲೀಸ್ ಆಗುತ್ತಿದೆ. ಈ ಮೂಲಕ ಮತ್ತೆ ಕೋಮಲ್ ತಮ್ಮ‌ ಇರುವಿಕೆಯನ್ನು ಸಾಭೀತು ಮಾಡುತ್ತಿದ್ದಾರೆ.

ಅಣ್ಣನ ಆರ್ಶೀವಾದ

ತಮ್ಮನ ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ''ಕೆಂಪೇಗೌಡ 2' ಸ್ವಮೇಕ್ ಚಿತ್ರ. ಕೋಮಲ್ 2 ವರ್ಷದ ಶ್ರಮ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಅನಾವರಣ.

ಒಬ್ಬ ಅಣ್ಣನಾಗಿ ಈ ಚಿತ್ರ ನೋಡಿ ಹೃದಯ ಉಬ್ಬಿತು. ಹರಸಿ ಹಾರೈಸಿದರೆ ಸ್ವಾಭಿಮಾನದಿಂದ ಕನ್ನಡಿಗರು ಇಂದಿನ ಯುವ ಪೀಳಿಗೆಯನ್ನ ರಾಷ್ಟ್ರ ತಿರುಗಿ ನೋಡುವ ಕೃತಿ ನೀಡುತ್ತಾರೆ..ಶುಭಮಸ್ತು" ಎಂದು ಶುಭ ಹಾರೈಸಿದ್ದಾರೆ.

ಶಂಕರ್ ಗೌಡ ನಿರ್ದೇಶನ

ಶಂಕರ್ ಗೌಡ ನಿರ್ದೇಶನ

'ಕೆಂಪೇಗೌಡ' ‌ಸಿನಿಮಾದಲ್ಲಿ ನಟ ಸುದೀಪ್ ಕಾಣಿಸಿಕೊಂಡಿದ್ದರು. ಈ ಸಿನಿಮಾವನ್ನು ಶಂಕರ್ ಗೌಡ ನಿರ್ಮಾಣ ಮಾಡಿದ್ದರು. ಆದರೆ, ಈಗ ಶಂಕರ್ ಗೌಡ 'ಕೆಂಪೇಗೌಡ 2' ಚಿತ್ರವನ್ನು ತಾವೇ ನಿರ್ದೇಶನ ಮಾಡುತ್ತಿದ್ದಾರೆ. ವಿನೋದ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಕೋಮಲ್ ಪೊಲೀಸ್ ‌ಪಾತ್ರ ಮಾಡುತ್ತಿದ್ದಾರೆ.

More from Filmibeat

English summary
Actor Komal's 'Kempegowda 2' kannada movie trailer will be releasing tomorrow (April 13th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X