For Quick Alerts
  ALLOW NOTIFICATIONS  
  For Daily Alerts

  'ಕೆಂಡಸಂಪಿಗೆ' ಮಾನ್ವಿತಾ ಈಗ 'ನೀಲಿ ಕಣ್ಣುಗಳ' ಸುಂದರಿ.!

  By Naveen
  |

  'ಕೆಂಡಸಂಪಿಗೆ' ಸಿನಿಮಾದ ಮುದ್ದು ಸಂಪಿಗೆ ಮಾನ್ವಿತಾ ಈಗ ನೀಲಿ ಕಣ್ಣುಗಳ ಸುಂದರಿ ಆಗಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಒಂದು ಪಾತ್ರಕ್ಕಾಗಿ ಹೊಸ ಲುಕ್ ಟ್ರೈ ಮಾಡ್ತಿದ್ದು, ಅದರ ಫಸ್ಟ್ ಲುಕ್ ಈಗ ರಿವಿಲ್ ಆಗಿದೆ.

  ಮಾನ್ವಿತಾ ಹರೀಶ್ ಇಲ್ಲಿ ಮಾಯಾ ಎಂಬ ಹುಡುಗಿಯ ಪಾತ್ರವನ್ನು ಮಾಡಲಿದ್ದಾರೆ. ಆ ಪಾತ್ರದಲ್ಲಿ ಅವರು ನೀಲಿ ಕಣ್ಣುಗಳ ಚಲುವೆಯಾಗಿ ಮಿಂಚುತ್ತಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಅವರು ಏಂಜೆಲ್ ಆಗಿ ಸಹ ಕಾಣಿಸಿಕೊಳ್ಳಲಿದ್ದಾರಂತೆ.

  'ಬ್ಲೂ ಐಸ್' ಎಂದಾಕ್ಷಣ ಬಾಲಿವುಡ್ ನಟಿ ಐಶ್ವರ್ಯ ರೈ ನೆನಪಾಗ್ತಾರೆ. ಇದೀಗ, ಸ್ಯಾಂಡಲ್ ವುಡ್ ನಲ್ಲಿ ಮಾನ್ವಿತಾ ಬ್ಲೂ ಐಸ್ ಬೆಡಗಿಯಾಗಿದ್ದಾರೆ. ಜೊತೆಗೆ ಹೇರ್ ಸ್ಟೈಲ್ ಕೂಡ ಬದಲಾಯಿಸಿಕೊಳ್ಳುತ್ತಿದ್ದು, ಗುಂಗುರು ಕೂದಲಿನೊಂದಿಗೆ ಸಖತ್ ಸ್ಟೈಲಿಶ್ ಆಗಿ ಎಂಟ್ರಿ ಕೊಡ್ತಿದ್ದಾರೆ.

  ಅಂದ್ಹಾಗೆ, 'ರಿಲ್ಯಾಕ್ಸ್ ಸತ್ಯ' ಸಿನಿಮಾ ಕಾಮಿಡಿ ಕಮ್ ಕ್ರೈಂ ಕಥೆಯಾಗಿದೆಯಂತೆ. ಈ ಹಿಂದೆ 'ಅಕಿರ' ಸಿನಿಮಾ ಮಾಡಿದ್ದ ನಿರ್ದೇಶಕ ನವೀನ್ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಬಹುಪಾಲು ಚಿತ್ರೀಕರಣ ಮುಗಿದಿದ್ದು ಹಾಡಿನ ಭಾಗದ ಶೂಟಿಂಗ್ ಬಾಕಿ ಇದೆಯಂತೆ.

  English summary
  Kannada Actress Manvitha Harish has been given a different get-up for her upcoming film Relax Sathya and she says ‘Chubby cheeks, dimple chin, curly hair, very fair, eyes are blue, lovely too’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X