twitter
    For Quick Alerts
    ALLOW NOTIFICATIONS  
    For Daily Alerts

    ಭೂಮಿ ಮೇಲೆ ಬದುಕುವ ಹಕ್ಕು ಎಲ್ಲರಿಗೂ ಇದೆ: ಅನಿರುದ್ಧ್ ಆಕ್ರೋಶ

    |

    ಕೇರಳದಲ್ಲಿ ಗರ್ಭಿಣಿ ಆನೆ ಸತ್ತ ಸಂಗತಿ ಹಲವರಿಗೆ ಮರುಕ ಹುಟ್ಟಿಸಿದೆ. ಮಾನವೀಯತೆ ಉಳಿದಿರುವ ಬಗ್ಗೆ ಅನುಮಾನ ಮೂಡಿಸಿದೆ.

    Recommended Video

    ಟ್ವಿಟ್ಟರ್ ನಲ್ಲಿ ದರ್ಶನ್ ಪತ್ನಿ ಬೇಸರ ಹೊರಹಾಕಿದ್ದು ಯಾಕೆ?? | Vijay Lakshmi | Sumalatha Ambareesh

    ಬಾಲಿವುಡ್‌ ನ ಹಲವು ನಟ-ನಟಿಯರು ಈ ವಿಷಯವಾಗಿ ತಮ್ಮ ಬೇಸರ, ನೋವು, ಆಕ್ರೋಶಗಳನ್ನು ವ್ಯಕ್ತಪಡಿಸಿದ್ದಾರೆ. ಮಾನವೀಯತೆ ಸತ್ತು ಹೊಯಿತೆ ಎಂದು ಪ್ರಶ್ನಿಸಿದ್ದಾರೆ.

    ವರ್ಷದ ಬಳಿಕ ಫೇಸ್ ಬುಕ್ ನಲ್ಲಿ ರಮ್ಯಾ ಪ್ರತ್ಯಕ್ಷ: ಏನಂತ ಪೋಸ್ಟ್ ಮಾಡಿದ್ದಾರೆ ನೋಡಿವರ್ಷದ ಬಳಿಕ ಫೇಸ್ ಬುಕ್ ನಲ್ಲಿ ರಮ್ಯಾ ಪ್ರತ್ಯಕ್ಷ: ಏನಂತ ಪೋಸ್ಟ್ ಮಾಡಿದ್ದಾರೆ ನೋಡಿ

    ಕನ್ನಡದ ಹಲವು ನಟ-ನಟಿಯರೂ ಸಹ ಈ ಬಗ್ಗೆ ತಮ್ಮ್ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ್ದಕ್ಕೆ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

    'ಭೂಮಿ ಮೇಲೆ ಬದುಕುವ ಹಕ್ಕು ಎಲ್ಲರಿಗೂ ಇದೆ'

    'ಭೂಮಿ ಮೇಲೆ ಬದುಕುವ ಹಕ್ಕು ಎಲ್ಲರಿಗೂ ಇದೆ'

    ಜೊತೆ-ಜೊತೆಯಲಿ ನಟ ಅನಿರುದ್ಧ್ ಸಹ ಕೇರಳದ ಘಟನೆಗೆ ಮಿಡಿದಿದ್ದು, ಈ ಬಗ್ಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಕೇರಳದಲ್ಲಿ ನಡೆದ ಘಟನೆ ಬೇಸರ ಉಂಟುಮಾಡಿದೆ. ಈ ಭೂಮಿಯ ಮೇಲೆ ಬದುಕುವ ಹಕ್ಕು ಎಲ್ಲಾ ಜೀವಿಗಳಿಗೂ ಇದೆ' ಎಂದಿದ್ದಾರೆ.

    ರಮ್ಯಾ ಸಹ ಟ್ವೀಟ್ ಮಾಡಿದ್ದರು

    ರಮ್ಯಾ ಸಹ ಟ್ವೀಟ್ ಮಾಡಿದ್ದರು

    ನಟಿ ರಮ್ಯಾ ಸಹ ನಿನ್ನೆ ಇದೇ ವಿಷಯಕ್ಕೆ ಟ್ವೀಟ್ ಮಾಡಿದ್ದರು. 'ವನ್ಯಜೀವಿ ಸುರಕ್ಷತೆ ಕುರಿತ ಆನ್‌ಲೈನ್ ಪಿಟಿಶನ್ ಒಂದನ್ನು ಹಂಚಿಕೊಂಡು ಅದಕ್ಕೆ ಬೆಂಬಲ ನೀಡಿ' ಎಂದು ಮನವಿ ಮಾಡಿದ್ದರು. ಒಂದು ವರ್ಷದ ಬಳಿಕ ಮೊದಲ ಬಾರಿಗೆ ನಿನ್ನೆ ಟ್ವೀಟ್ ಮಾಡಿದ್ದರು ರಮ್ಯಾ.

    ಅನಾರೋಗ್ಯಕ್ಕೆ ತುತ್ತಾಗಿದ್ದ ದಾಸ ದರ್ಶನ್ ನೆಚ್ಚಿನ ಬಸವ ಇನ್ನಿಲ್ಲಅನಾರೋಗ್ಯಕ್ಕೆ ತುತ್ತಾಗಿದ್ದ ದಾಸ ದರ್ಶನ್ ನೆಚ್ಚಿನ ಬಸವ ಇನ್ನಿಲ್ಲ

    ಹಂದಿ ಭೇಟಿಗೆ ಇಟ್ಟಿದ್ದ ಹಣ್ಣು

    ಹಂದಿ ಭೇಟಿಗೆ ಇಟ್ಟಿದ್ದ ಹಣ್ಣು

    ಕೇರಳದ ಪಾಲಕ್ಕಡ್ ನಲ್ಲಿ ಆನೆಯೊಂದು ಸಿಡಿಮದ್ದು ಹುದುಗಿಸಿ ಇಟ್ಟಿದ್ದ ಹಣ್ಣನ್ನು ತಿಂದಿತ್ತು. ಇದರಿಂದ ಅದರ ಬಾಯಿ, ಸೊಂಡಿಲಿಗೆ ತೀವ್ರ ಪೆಟ್ಟಾಗಿತ್ತು. ನೋವಿನಿಂದ ಪಾರಾಗಲು ಆನೆ ಹತ್ತಿರದ ನದಿಯಲ್ಲಿ ಹೋಗಿ ನಿಂತಿತ್ತು. ಕೊನೆಗೆ ಅಲ್ಲಿಯೇ ಪ್ರಾಣ ಬಿಟ್ಟಿತು. ಮೊದಲಿಗೆ ಸಿಡಿಮದ್ದು ತುಂಬಿದ್ದ ಹಣ್ಣನ್ನು ಆನೆಗೆ ತಿನ್ನಲು ಕೆಲವು ಕಿಡಿಗೇಡಿಗಳು ನೀಡಿದ್ದರು ಎನ್ನಲಾಗಿತ್ತು. ಆದರೆ ಅದು ಕಾಡುಹಂದಿ ಹಿಡಿಯಲು ಹಿಟ್ಟಿದ್ದ ಹಣ್ಣು ಅದನ್ನು ಆನೆ ತಿಂದಿದೆ ಎನ್ನಲಾಗುತ್ತಿದೆ.

    English summary
    Kerala elephant death case: Many stars, TV stars reacts to the incident.
    Tuesday, June 9, 2020, 23:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X