For Quick Alerts
  ALLOW NOTIFICATIONS  
  For Daily Alerts

  ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್

  |

  ಆನ್ ಲೈನ್ ರಮ್ಮಿ ಗೇಮ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ. ಆನ್ ಲೈನ್ ರಮ್ಮಿ ಗೇಮ್ ನ ಪ್ರಚಾರ ರಾಯಭಾರಿಯಾಗಿರುವ ತಮನ್ನಾ, ವಿರಾಟ್ ಮತ್ತು ಅಜು ವರ್ಗೀಸ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

  ವಿರಾಟ್ ಕೊಹ್ಲಿ ತಮನ್ನಾ ಇಬ್ಬರನ್ನು ಬಂಧಿಸಿ | Filmibeat Kannada

  ಆನ್ ಲೈನ್ ರಮ್ಮಿ ಗೇಮ್ ಬ್ಯಾನ್ ಮಾಡಬೇಕೆಂದು ಮನವಿಯೊಂದಕ್ಕೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಆನ್ ಲೈನ್ ಬೆಟ್ಟಿಂಗ್ ಗಂಭೀರ ಸಮಸ್ಯೆ ಎಂದು ಪರಿಗಣಿಸಿರುವ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡುವಂತೆ ಕೇಳಿದೆ. ಕೊಚ್ಚಿ ಮೂಲದ ಪೌಲಿ ವದಕ್ಕನ್, ಆನ್ ಲೈನ್ ರಮ್ಮಿ ಗೇಮ್ ವಿರುದ್ಧ ಪಿಟಿಷನ್ ಸಲ್ಲಿಸಿದ್ದರು.

  ವಿಡಿಯೋ ವೈರಲ್; ಬಸ್ ಚಲಾಯಿಸಿದ ಮಿಲ್ಕಿ ಬ್ಯೂಟಿ ತಮನ್ನಾ

  ಕೆಲವು ಸ್ಟಾರ್ ಗಳು ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳಿಗೆ ರಾಯಭಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ. ಇದು ಯುವಜನರನ್ನು ಸುಲಭವಾಗಿ ಆಕರ್ಷಿಸುತ್ತಿದೆ. ರಾಜ್ಯದಲ್ಲಿ ಆನ್ ಲೈನ್ ಜೂಜಾಟವು ಹೆಚ್ಚುತ್ತಿರುವ ಭೀತಿಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

  ಇತ್ತೀಚಿಗೆ ತಿರುವನಂತಪುರಂನ ಯುವಕನ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ರಮ್ಮಿ ಬೆಟ್ಟಿಂಗ್ ಆಟದ ಬಲೆಗೆ ಬಿದ್ದು, 21 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ, ಸಾಲ ಮರುಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

  ಆನ್ ಲೈನ್ ಜೂಜಿನಿಂದ ಮುಗ್ದ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂಥವುಗಳನ್ನು ಪ್ರಚೋದಿಸುವ ವಿರಾಟ್, ತಮನ್ನಾ ಅವರ್ನನು ಬಂಧಿಸಬೇಕು ಎಂದು ಮಾಡಿ ವಕೀಲ ಸೂರ್ಯಪ್ರಕಾಶಂ ಎಂಬುವವರು 2020 ಆಗಸ್ಟ್ ನಲ್ಲಿ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

  English summary
  Kerala High Court issues notice to Tamannaah and Virat Kohli on plea seeking ban online gambling.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X