For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿದೆ: ಕುತೂಹಲ ಪ್ರಕಟಿಸಿರುವ ರಾಜ್ಯಗಳ ಪಟ್ಟಿ

  |

  ಕೆಜಿಎಫ್ 2 ಸಿನಿಮಾ ರಾಜ್ಯದ ಅತ್ಯಂತ ನಿರೀಕ್ಷೆಯ ಚಿತ್ರ. ಆದರೆ ಕನ್ನಡದ ಚಿತ್ರವಾದ ಕೆಜಿಎಫ್ 2 ಬಗ್ಗೆ ಕನ್ನಡಿಗರಿಗಿಂತಲೂ ಬೇರೆ ರಾಜ್ಯದವರಿಗೇ ಕುತೂಹಲ ಹೆಚ್ಚಿದೆ!

  ಇವರೆಲ್ಲಾ ಕನ್ನಡ ಸಿನಿಮಾಗಳ ಮೂಲಕವೇ ಸೂಪರ್ ಸ್ಟಾರ್ ಆದವರು | Super Star Hailed From Sandalwood

  ಹೌದು, ಪ್ರಶಾಂತ್ ನೀಲ್ ನಿರ್ದೇಶಿಸಿ, ಯಶ್ ನಾಯಕರಾಗಿ ನಟಿಸಿರುವ ಸೂಪರ್ ಡೂಪರ್ ಹಿಟ್ ಚಿತ್ರ ಕೆಜಿಎಫ್‌ ನ ಎರಡನೇ ಭಾಗವಾದ ಕೆಜಿಎಫ್ 2 ಚಿತ್ರೀಕರಣ ಸಾಗಿದ್ದು, ಈ ಚಿತ್ರದ ಬಗ್ಗೆ ಬೇರೆ ರಾಜ್ಯದವರಿಗೆ ಕುತೂಹಲ ಹೆಚ್ಚಿದೆ.

  'KGF-2' ರಿಲೀಸ್ ಮುಂದಕ್ಕೆ ಸಾಧ್ಯತೆ: ಯಾವಾಗ ಬಿಡುಗಡೆಯಾಗುತ್ತೆ ಸಿನಿಮಾ?'KGF-2' ರಿಲೀಸ್ ಮುಂದಕ್ಕೆ ಸಾಧ್ಯತೆ: ಯಾವಾಗ ಬಿಡುಗಡೆಯಾಗುತ್ತೆ ಸಿನಿಮಾ?

  ಕೆಜಿಎಫ್ 2 ಸಿನಿಮಾದ ಬಗ್ಗೆ ಹುಡುಕಾಟ ನಡೆಸಿದವರಲ್ಲಿ ಬೇರೆ ರಾಜ್ಯದವರೇ ಮೊದಲಿಗಿದ್ದಾರೆ. ಕರ್ನಾಟಕ 11 ನೇ ಸ್ಥಾನದಲ್ಲಿದೆ. ಅಲ್ಲಿಗೆ, ಕರ್ನಾಟಕದವರಿಗಿಂತಲೂ ಕೆಜಿಎಫ್ 2 ಬಗ್ಗೆ ಬೇರೆ ರಾಜ್ಯದವರಿಗೆ ಹೆಚ್ಚು ಒಲವಿದ್ದಂತೆ ತೋರುತ್ತಿದ್ದೆ.

  ಕೆಜಿಎಫ್ 2 ಬಗ್ಗೆ ಅತಿಯಾಗಿ ಹುಡುಕಿದ ರಾಜ್ಯ ಯಾವುದು?

  ಕೆಜಿಎಫ್ 2 ಬಗ್ಗೆ ಅತಿಯಾಗಿ ಹುಡುಕಿದ ರಾಜ್ಯ ಯಾವುದು?

  ಕೆಜಿಎಫ್ 2 ಸಿನಿಮಾದ ಬಗ್ಗೆ ಕೇರಳ ರಾಜ್ಯದ ಜನ ಅಂತರ್ಜಾಲದಲ್ಲಿ ಅತಿಯಾಗಿ ಮಾಹಿತಿ ಹುಡುಕಾಟ ನಡೆಸಿದ್ದಾರೆ. ಕೆಜಿಎಫ್ ಮೊದಲ ಸಿನಿಮಾ ಸಹ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿ ಭಾರಿ ಹಿಟ್ ಆಗಿತ್ತು. ಹಾಗಾಗಿಯೇ ಕೇರಳದ ಜನರಿಗೆ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ.

  ಕೇರಳದ ನಂತರದ ಸ್ಥಾನ ಯಾವ ರಾಜ್ಯಕ್ಕೆ?

  ಕೇರಳದ ನಂತರದ ಸ್ಥಾನ ಯಾವ ರಾಜ್ಯಕ್ಕೆ?

  ಕೇರಳದ ನಂತರದ ಸ್ಥಾನ, ಕ್ರಮವಾಗಿ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಸಲ್ಲಿಕೆಯಾಗುತ್ತಿದೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೆಜಿಎಫ್‌ 2 ಬಗ್ಗೆ ಅತಿಯಾದ ಹುಡುಕಾಟ ನಡೆದಿದೆಯಂತೆ. ತೆಲುಗು-ತಮಿಳು ಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಆಗಿತ್ತು.

  ಕೆಜಿಎಫ್ ಚಾಪ್ಟರ್ 2 ಡಿಜಿಟಲ್ ಹಕ್ಕಿಗೆ ಭಾರಿ ಮೊತ್ತದ ಆಫರ್ ಕೊಟ್ಟ ಅಮೆಜಾನ್?ಕೆಜಿಎಫ್ ಚಾಪ್ಟರ್ 2 ಡಿಜಿಟಲ್ ಹಕ್ಕಿಗೆ ಭಾರಿ ಮೊತ್ತದ ಆಫರ್ ಕೊಟ್ಟ ಅಮೆಜಾನ್?

  ನೆರೆ ಅಲ್ಲದ ರಾಜ್ಯಗಳಲ್ಲೂ ಕೆಜಿಎಫ್ ಹವಾ

  ನೆರೆ ಅಲ್ಲದ ರಾಜ್ಯಗಳಲ್ಲೂ ಕೆಜಿಎಫ್ ಹವಾ

  ಕರ್ನಾಟಕ ನೆರೆಯ ರಾಜ್ಯಗಳಲ್ಲದ ರಾಜ್ಯಗಳಲ್ಲೂ ಕೆಜಿಎಫ್ ಹವಾ ಜೋರಾಗಿದೆ. ಪಂಜಾಬ್, ಒರಿಸ್ಸಾ, ಗುಜರಾತ್, ತೆಲಂಗಾಣ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಸಹ ಕೆಜಿಎಫ್‌ 2 ಗಾಗಿ ಜನ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದಾರೆ.

  ಹಿಂದಿ ಪ್ರಾಬಲ್ಯದ ರಾಜ್ಯಗಳಲ್ಲಿ ಕೆಜಿಎಫ್‌ 2 ಬಗ್ಗೆ ಆಸಕ್ತಿ

  ಹಿಂದಿ ಪ್ರಾಬಲ್ಯದ ರಾಜ್ಯಗಳಲ್ಲಿ ಕೆಜಿಎಫ್‌ 2 ಬಗ್ಗೆ ಆಸಕ್ತಿ

  ಹಿಂದಿ ಪ್ರಾಬಲ್ಯದ ಮಹಾರಾಷ್ಟ್ರ, ದೆಹಲಿ, ಪಂಜಾಬ್ ರಾಜ್ಯಗಳಲ್ಲೂ ಸಹ ಕೆಜಿಎಫ್‌ ಅಭಿಮಾನಿಗಳಿದ್ದು, ಆ ರಾಜ್ಯಗಳಲ್ಲೂ ಸಹ ಕೆಜಿಎಫ್ ಸಿನಿಮಾ ಮಾಹಿತಿಗಾಗಿ ಹುಡುಕಾಡಿದ್ದಾರೆ.

  ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

  ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

  ಕೆಜಿಎಫ್ 2 ಸಿನಿಮಾದ ಮಾಹಿತಿಗಾಗಿ ಅತಿಯಾಗಿ ಹುಡುಕಾಟ ನಡೆಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 11 ನೇ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಕೆಜಿಎಫ್ 2 ಬಗ್ಗೆ ಆಸಕ್ತಿ ಕಡಿಮೆಯೇ ಅಥವಾ ಇತರೆ ರಾಜ್ಯಗಳಿಗೆ ಅತಿಯಾದ ಆಸಕ್ತಿಯೇ ಎಂಬ ಅನುಮಾನ ಈ ಪಟ್ಟಿ ಮೂಡಿಸುತ್ತಿದೆ.

  ದೇಶವೇ ಕಾಯುತ್ತಿದೆ ಕನ್ನಡ ಸಿನಿಮಾಕ್ಕೆ

  ದೇಶವೇ ಕಾಯುತ್ತಿದೆ ಕನ್ನಡ ಸಿನಿಮಾಕ್ಕೆ

  ಆದರೆ ಕನ್ನಡದ ಸಿನಿಮಾ ಒಂದು ದೇಶದ ಬೇರೆ-ಬೇರೆ ರಾಜ್ಯಗಳಲ್ಲಿ ಈ ಮಟ್ಟದ ಕ್ರೇಜ್ ಹುಟ್ಟಿಸಿರುವುದು ಬಹುಶಃ ಇದೇ ಮೊದಲು. ಕನ್ನಡದ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿರುವುದು ಹೆಮ್ಮೆಯ ಅನುಭವ.

  English summary
  Kerala searched the internet for KGF 2 movie updates more than any other state. Karnataka is in 11th place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X