For Quick Alerts
  ALLOW NOTIFICATIONS  
  For Daily Alerts

  ಮನೆ ಮುಂದೆ ನೆರೆದಿದ್ದ ಕೇರಳ ಅಭಿಮಾನಿಗಳನ್ನು ನೋಡಿ ರಾಕಿ ಭಾಯ್ ಮಾಡಿದ್ದೇನು?

  |

  ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷಲ್ ಸ್ಟಾರ್ ಆದ್ಮೇಲೆ ಅಭಿಮಾನಿಗಳ ಬಳಗ ದುಪ್ಪಟ್ಟಾಗಿದೆ. ಸೂಪರ್ ಹಿಟ್ ಕೆಜಿಎಫ್ ಚಿತ್ರದ ನಂತರ ರಾಕಿ ಭಾಯ್ ಹವಾ ಹೆಚ್ಚಾಗಿದೆ. ಕೇವಲ ಕನ್ನಡಾಭಿಮಾನಿಗಳು ಮಾತ್ರವಲ್ಲದೆ ದೇಶದಾದ್ಯಂತ ಅಭಿಮಾನಿಗಳ ಸಂಖ್ಯೆ ವಿಸ್ತರಣೆಯಾಗಿದೆ.

  ಅದರಲ್ಲೂ ದಕ್ಷಿಣ ಭಾರತೀಯ ಚಿತ್ರಾಭಿಮಾನಿಗಳು ರಾಕಿ ಭಾಯ್ ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಇತ್ತೀಚಿಗಷ್ಟೆ ತಮಿಳು ಮತ್ತು ತೆಲುಗಿನ ಯಶ್ ಅಭಿಮಾನಿಗಳು ಯಶ್ ನಿವಾಸದ ಮುಂದೆ ಜಮಾಯಿಸಿದ್ದರು. ಕನ್ನಡ ಮಾತ್ರವಲ್ಲದೆ ಬೇರೆಯ ಭಾಷೆಯ ಅಭಿಮಾನಿಗಳ ಅಭಿಮಾನ ಕಂಡು ಬೆರಗಾದ ರಾಕಿ ಭಾಯ್ ಅವರನ್ನೆಲ್ಲ ಭೇಟಿಯಾಗಿ ಮಾತುಕತೆ ನಡೆಸಿ, ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

  ಸಂಗೀತಾ ಭಟ್ ಪತಿ ವಿವಾದ: ಯಶ್ ಅಭಿಮಾನಿಗಳಿಂದ ಬಹಿರಂಗ ಪತ್ರಸಂಗೀತಾ ಭಟ್ ಪತಿ ವಿವಾದ: ಯಶ್ ಅಭಿಮಾನಿಗಳಿಂದ ಬಹಿರಂಗ ಪತ್ರ

  ಇದರ ಬೆನ್ನಲ್ಲೆ ಈಗ ಕೇರಳದ ರಾಕಿ ಭಾಯ್ ಅಭಿಮಾನಿಗಳು ಯಶ್ ಮನೆ ಮುಂದೆ ಜಮಾಯಿಸಿದ್ದಾರೆ. ಕೇರಳ ಅಭಿಮಾನಿಗಳನ್ನು ಕಂಡು ಯಶ್ ಸಂತಸಪಟ್ಟಿದ್ದಾರೆ. ನಿವಾಸದ ಮುಂದೆ ನೆರೆದಿದ್ದ ಅಭಿಮಾನಿಗಳನ್ನು ನೋಡಿದ ಯಶ್ ಮನೆಯಿಂದ ಹೊರಬಂದು ಅವರ ಜೊತೆ ಕೆಲ ಸಮಯ ಕಳೆದಿದ್ದಾರೆ.

  ಅಭಿಮಾನಿಗಳು ಪ್ರೀತಿಯಾಂದ ತಂದಿದ್ದ ರಾಕಿ ಭಾಯ್ ಫೋಟೋ, ಯಶ್ ಹೆಸರಿರುವ ಟಿ ಶರ್ಟ್ ಗಳನ್ನು ಯಶ್ ನೀಡಿ ಸಂತಸಪಟ್ಟಿದ್ದಾರೆ. ಕೆಜಿಎಫ್ ಚಿತ್ರದ "ಪವರ್ ಪುಲ್ ಪೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸ್" ಡೈಲಾಗ್ ಹೊಡೆದು ಖುಷಿ ಪಟ್ಟಿದ್ದಾರೆ. ಕೇರಳ ಅಭಿಮಾನಿಗಳು ಯಶ್ ಭೇಟಿಯಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  English summary
  Kerala Yash Fans Association to meet Yash in his residence in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X