For Quick Alerts
  ALLOW NOTIFICATIONS  
  For Daily Alerts

  KFCCಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

  By Suneetha
  |

  ಇತ್ತೀಚೆಗೆ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಗಣ್ಯರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಏಪ್ರಿಲ್ 6ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರು ಮಿಲ್ಲರ್ಸ್ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದೆ.

  ಡಾ. ರಾಜ್‌ಕುಮಾರ್ ಅವರ ಸಮಗ್ರ ಚರಿತ್ರೆ ಗ್ರಂಥಕ್ಕೆ "ಸ್ವರ್ಣ ಕಮಲ" ಪ್ರಶಸ್ತಿ ಪಡೆದ ದೊಡ್ಡ ಹುಲ್ಲೂರು ರುಕ್ಕೋಜಿ, ಶ್ರೇಷ್ಠ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ "ತಿಥಿ" [ಕನ್ನಡ ಸಿನಿಮಾ 'ತಿಥಿ' ಗೆ ಸ್ವಿಟ್ಜರ್ಲೆಂಡಿನಲ್ಲಿ ಆದರಾತಿಥ್ಯ] ಚಿತ್ರದ ನಿರ್ದೇಶಕ ರಾಮ್ ರೆಡ್ಡಿ, ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಕುರಿತ ವ್ಯಕ್ತಿ ಚಿತ್ರಕ್ಕಾಗಿ "ರಜತ ಕಮಲ" ಪ್ರಶಸ್ತಿ ಪಡೆದ ನಿರ್ದೇಶಕ ಒ.ಪಿ. ಶ್ರೀವಾತ್ಸವ.[ಕನ್ನಡ ಚಲನಚಿತ್ರ ಸಿಂಹಾವಲೋಕನ: ಸಾಧಕರಿಗೆ ಸನ್ಮಾನ]

  'ಡ್ರಿಬಲ್ಲಿಂಗ್ ವಿತ್ ದೇರ್ ಫ್ಯೂಚರ್' ಚಿತ್ರಕ್ಕಾಗಿ "ರಜತ ಕಮಲ" ಪ್ರಶಸ್ತಿ ಪಡೆದ ನಿರ್ದೇಶಕ ಚಾಕೋಬ್ ವರ್ಗೀಸ್ ಮತ್ತು ನಿರ್ಮಾಪಕರಾದ ಎನ್. ದಿನೇಶ್ ರಾಜಕುಮಾರ್ ಮತ್ತು ಮ್ಯಾಥ್ಯೂ ವರ್ಗೀಸ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಗುತ್ತದೆ.

  ಸಮಾರಂಭದಲ್ಲಿ ಹಿರಿಯ ಚಲನಚಿತ್ರ ಕಲಾವಿದೆ ನಟಿ ಜಯಮಾಲಾ, ನಟಿ ತಾರಾ ಅನೂರಾಧಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು.[ಅಮಿತಾಬ್ ಬಚ್ಚನ್, ಕಂಗನಾಗೆ ರಾಷ್ಟ್ರ ಪ್ರಶಸ್ತಿ]

  ಹಿರಿಯ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಹಾಗೂ ಟಿ.ಎಸ್. ನಾಗಭರಣ ಅವರು ಪಾಲ್ಗೊಳ್ಳಲಿದ್ದಾರೆ.
  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

  English summary
  Karnataka Chalanachitra Academy felicitated National Award for winners in Chamundeshwari Theater, Millers Road, Bengaluru April 6th, Wednesday at 10.30 Morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X