twitter
    For Quick Alerts
    ALLOW NOTIFICATIONS  
    For Daily Alerts

    ಕೆಎಫ್ ಸಿಸಿಗೆ ನೂತನ ಸಾರಥಿ ಥಾಮಸ್ ಡಿಸೋಜ

    By Mahesh
    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂರು ವಲಯಗಳಿಗೆ ಅಂತೂ ಇಂತೂ ಗೊಂದಲದ ನಡುವೆ ವಾರ್ಷಿಕ ಚುನಾವಣೆ ಮುಕ್ತಾಯವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ 58 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಚುನಾವಣೆ ಗದ್ದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿ ಅವ್ಯವಸ್ಥೆಗೆ ಕಾರಣವಾಗಿತ್ತು. ಕೊನೆಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದು, ಥಾಮಸ್ ಡಿಸೋಜ ಅವರು ಹೊಸ ಸಾರಥಿಯಾಗಿದ್ದಾರೆ.

    2014-15ನೇ ಸಾಲಿಗೆ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರ ಮೂರು ವಲಯಗಳಿಗೆ ಚುನಾವಣೆ ನಡೆಸಲಾಗಿತ್ತು.ಈ ನಡುವೆ ಪ್ರದರ್ಶಕ ವಲಯಕ್ಕೆ ಅವಿರೋಧವಾಗಿ ಥಾಮಸ್ ಡಿಸೋಜ ಅವರು ಆಯ್ಕೆಯಾದರೆ, ನಿರ್ಮಾಪಕರ ವಲಯದ ಉಪಾಧ್ಯಕ್ಷರಾಗಿ ಎ ಗಣೇಶ್, ಪ್ರದರ್ಶನ ವಲಯದ ಉಪಾಧ್ಯಕ್ಷರಾಗಿ ಅನಂತಮೂರ್ತಿ, ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಂದರ್‌ರಾಜ್, ಸ್ಟುಡಿಯೋ ಮತ್ತು ಲಾಬರೋಟರಿ ಘಟಕಕ್ಕೆ ರಾಕ್‌ಲೈನ್ ವೆಂಕಟೇಶ್, ಹೊರಾಂಗಣ ಘಟಕಕ್ಕೆ ಜೆಜೆ ಕೃಷ್ಣ ಆಯ್ಕೆಯಾಗಿದ್ದಾರೆ.

    KFCC gets new president Thomas D'Souza

    ಇನ್ನುಳಿದ ನಿರ್ಮಾಪಕ, ವಿತರಕರ ವಲಯಗಳ ಅಧ್ಯಕ್ಷರ ಆಯ್ಕೆಯಲ್ಲಿ ಭಾರೀ ಪೈಪೋಟಿ ಎದುರಾಗಿತ್ತು. ನಿರ್ಮಾಪಕ, ವಿತರಕರ ವಲಯದಿಂದ ಕೃಷ್ಣಗೌಡ, ಟೇಶಿ ವೆಂಕಟೇಶ್, ನಂದಿಹಾಳ್ ಹಾಗೂ ಜಯಸಿಂಹ ಮುಸುರಿ ಪಾರದರ್ಶಕ ಚುನಾವಣೆ ನಡೆಸುವಂತೆ ಕೋರ್ಟ್ ಮೊರೆ ಹೋಗಿದ್ದನ್ನು ಇಲ್ಲಿ ಸ್ಮರಿಸಲೇಬೇಕು.

    ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿನ ಗೊಂದಲ ಪರಿಹಾರಕ್ಕೆ ಆಗ್ರಹಿಸಿದ್ದರು. ಈ ನಡುವೆ ಕೋರ್ಟ್ ಆದೇಶದಂತೆ ಪಾರದರ್ಶಕವಾಗಿ ಚುನಾವಣೆಯಾದರೆ ಮಾತ್ರ ಆಯ್ಕೆಯಾದವರು ಅಧಿಕಾರ ನಡೆಸಬಹುದಾಗಿದೆ. ಕೆ.ಸಿ.ಎನ್.ಚಂದ್ರಶೇಖರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

    ನೂತನ ಅಧ್ಯಕ್ಷರು ಪದಾಧಿಕಾರಿಗಳ ಪಟ್ಟಿ ಹೀಗಿದೆ:

    * ಅಧ್ಯಕ್ಷ: ಥಾಮಸ್ ಡಿಸೋಜ (ಪ್ರದರ್ಶನ ವಲಯ)

    ಉಪಾಧ್ಯಕ್ಷರುಗಳು
    * ಎ ಗಣೇಶ್(ನಿರ್ಮಾಪಕರ ವಲಯ)
    * ಜಿ ವೆಂಕಟೇಶ್ (ವಿತಕರರ ವಲಯ)
    * ಅನಂತಮೂರ್ತಿ (ಪ್ರದರ್ಶನ ವಲಯ)

    ಕಾರ್ಯದರ್ಶಿಗಳು
    * ಬಾ.ಮಾ ಹರೀಶ್ (ನಿರ್ಮಾಪಕರ ವಲಯ)
    * ಬಿ.ಆರ್ ಕೇಶವ್ (ವಿತರಕರ ವಲಯ)
    * ಸುಂದರ್ ರಾಜ್ ( ಪ್ರದರ್ಶನ ವಲಯ)

    ಖಜಾಂಚಿ: ಸಫೈರ್ ವೆಂಕಟೇಶ್

    ಕಾರ್ಯಕಾರಿ ಸಮಿತಿ ಸದಸ್ಯರು (ನಿರ್ಮಾಪಕರ ವಲಯ)
    * ಉಮೇಶ್ ಬಣಕರ್
    * ಸಾರಾ ಗೋವಿಂದು
    * ಕೆಎಂ ವೀರೇಶ್
    * ಪ್ರಮೀಳಾ ಜೋಶಿ
    * ಬಾಮಾ ಗಿರೀಶ್
    * ದಿನೇಶ್ ಗಾಂಧಿ
    * ಸಿಆರ್ ಮನೋಹರ್
    * ಟಿಕೆ ಜಯಸಿಂಹ ಮುಸುರಿ
    * ಆನಂದ್ ಪಿ ರಾಜು
    * ಕೃಷ್ಣೇಗೌಡ

    English summary
    Karnataka Film Chamber of Commerce(KFCC) gets new president Thomas D'Souza from Film Exhibitor Sector. The elections for the KFCC was conducted upon strict instruction from High Court. KM Veeresh of Chitraloka.com fame also elected as Executive Committee Member.
    Sunday, December 14, 2014, 12:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X