twitter
    For Quick Alerts
    ALLOW NOTIFICATIONS  
    For Daily Alerts

    'ಬಿಸಿಲುಕುದುರೆ' ನಟಿ ರೇಪ್ ಪ್ರಕರಣಕ್ಕೆ ಹೊಸ ತಿರುವು

    By Harshitha
    |

    'ಬಿಸಿಲು ಕುದುರೆ' ಚಿತ್ರದ ಸಹನಟಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ನಿರ್ಮಾಪಕ ಕುಮಾರ್ ವಿರುದ್ಧ ದೂರು ದಾಖಲಿಸಿದ್ದ ಸಹನಟಿ ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.

    ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಸಭೆ ಕರೆದಿತ್ತು. 'ಬಿಸಿಲು ಕುದುರೆ' ಚಿತ್ರತಂಡ ಜೊತೆಗಿನ ಮಾತುಕತೆ ಬಳಿಕ ಆರೋಪಿ ಕುಮಾರ್ ಎಂಬಾತ ನಿರ್ಮಾಪಕನೇ ಅಲ್ಲ ಎಂಬ ಸತ್ಯ ಬಹಿರಂಗವಾಗಿದೆ.['ಬಿಸಿಲು ಕುದುರೆ' ನಿರ್ಮಾಪಕ ಕುಮಾರ್ ಮೇಲೆ ರೇಪ್ ಕೇಸ್]

    KFCC meeting details on Bisulukudure rape attempt case

    ಫಿಲ್ಮ್ ಚೇಂಬರ್ ಕಾರ್ಯದರ್ಶಿ ಬಾ.ಮಾ.ಹರೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಂಗತಿ ಬಯಲಾಗಿದ್ದು, ಕುಮಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಕ್ಕೆ ನಿರ್ಧರಿಸಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪ್ರಕರಣ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಒಂದು ಕಡೆ 'ಬಿಸಿಲುಕುದುರೆ' ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಈ ಸಹನಟಿ ಯಾರು ಅಂತ ನಮಗೆ ಗೊತ್ತೇ ಇಲ್ಲ ಅಂದ್ರೆ, ಸಹನಟಿ ಮಾತ್ರ 'ಎಲ್ಲರೂ ಸುಳ್ಳು ಹೇಳಿ ನನಗೆ ಮೋಸ ಮಾಡುತ್ತಿದ್ದಾರೆ'' ಅಂತ ಗೋಳಾಡುತ್ತಾರೆ.

    ಕೇವಲ ದೂರಿನ ಮೇಲೆ ತನಿಖೆ ಕೈಗೊಂಡಿದ್ದ ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು, ಪ್ರಕರಣದ ಗಂಭೀರತೆ ಅರಿತು ಈಗ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ, ಅವರನ್ನು ವಿಚಾರಣೆ ನಡೆಸಿ ತಕ್ಷಣ ಬಂಧಿಸಲಾಗುವುದು ಅಂತ ಎಸ್ಪಿ ರವಿ ಚಣ್ಣನ್ನನವರ್ ಹೇಳಿದ್ದಾರೆ.

    ಇನ್ಮುಂದೆ ಯಾವ ಚಿತ್ರತಂಡದಲ್ಲಿಯೂ ಇಂತಹ ಗೊಂದಲ ಆಗಬಾರದು ಅನ್ನುವ ಕಾರಣಕ್ಕೆ ಕರ್ನಾಟಕದ ಯಾವುದೇ ಭಾಗದಲ್ಲಿ ಚಿತ್ರೀಕರಣಕ್ಕೆ ಅಂತ ಯಾರೇ ತೆರಳಿದರೂ ಕಡ್ಡಾಯವಾಗಿ ಎಲ್ಲಾ ವಿವರಗಳನ್ನ ಕೆ.ಎಫ್.ಸಿ.ಸಿಗೆ ನೀಡಬೇಕು ಅಂತ ಅಧ್ಯಕ್ಷ ಥಾಮಸ್ ಡಿಸೋಜ ಸೂಚನೆ ನೀಡಿದ್ದಾರೆ.

    English summary
    KFCC met today to take action on 'Bisilukudure' film Actress rape attempt case. It is said that the accused Kumar is not a Producer of the film and an ordinary localite from Shivamogga.
    Wednesday, May 27, 2015, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X