'ಡೆವಿಲ್' ಚಿತ್ರಕ್ಕೆ ದರ್ಶನ್ ಲಕ್ಕಿ ಥಿಯೇಟರ್ ಸಿಕ್ತು; ಆ ಥಿಯೇಟರ್‌ಗಾಗಿ 'ಮಾರ್ಕ್', '45' ಮಧ್ಯೆ ಪೈಪೋಟಿ?

ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳ ಸಂಖ್ಯೆ ಗಣನೀಯವಾಗಿ ಕಮ್ಮಿ ಆಗಿದೆ. ಜನ ಸಿನಿಮಾ ನೋಡಲು ಈಗ ಮಲ್ಟಿಪ್ಲೆಕ್ಸ್‌ಗಳ ಕಡೆ ಹೆಚ್ಚು ಮುಖ ಮಾಡುತ್ತಾರೆ. ಆದರೂ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಮಜಾನೇ ಬೇರೆ. ಡಿಸೆಂಬರ್‌ನಲ್ಲಿ ಕನ್ನಡದ 3 ದೊಡ್ಡ ಚಿತ್ರಗಳು ತೆರೆಗೆ ಬರ್ತಿವೆ. ಕೆಜಿ ರಸ್ತೆಯಲ್ಲಿ ಯಾವ ಚಿತ್ರಕ್ಕೆ ಯಾವ ಥಿಯೇಟರ್ ಎನ್ನುವ ಚರ್ಚೆ ಶುರುವಾಗಿದೆ.

ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಡಿಸೆಂಬರ್ 11ಕ್ಕೆ ತೆರೆಗೆ ಬರಲಿದೆ. ಡಿಸೆಂಬರ್ 25ಕ್ಕೆ ಸುದೀಪ್ ನಟನೆಯ 'ಮಾರ್ಕ್' ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ '45' ತೆರೆಗಪ್ಪಳಿಸುವುದು ಪಕ್ಕಾ ಆಗಿದೆ. ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಸ್ಟಾರ್‌ ನಟರ ಸಿನಿಮಾ ಸೆಲೆಬ್ರೇಷನ್ ಜೋರಾಗಿ ಇರುತ್ತದೆ. ಇದೀಗ ಈ 3 ಚಿತ್ರಗಳು ಯಾವ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.

KG Road Battle Heats Up Devil Mark and 45 Compete for Prime Single-Screen Theaters in December

ದರ್ಶನ್ ಲಕ್ಕಿ ಥಿಯೇಟರ್ ನರ್ತಕಿ. ಅಲ್ಲಿ ಬಿಡುಗಡೆ ಆಗಿರುವ ದರ್ಶನ್ ಸಿನಿಮಾಗಳು ಸೂಪರ್ ಹಿಟ್ ಆಗಿದೆ. 'ಡೆವಿಲ್' ಚಿತ್ರಕ್ಕೆ ಅದೇ ಚಿತ್ರಮಂದಿರ ಸಿಕ್ಕಿದೆ. ಇನ್ನು ಉಳಿದಿರುವುದು ಸಂತೋಷ್, ತ್ರಿವೇಣಿ, ಅನುಪಮಾ ಹಾಗೂ ಭೂಮಿಕಾ. ಸಂತೋಷ್ ಬಹಳ ದೊಡ್ಡ ಚಿತ್ರಮಂದಿರ. ಹಾಗಾಗಿ ಅದೇ ಚಿತ್ರಮಂದಿರಕ್ಕಾಗಿ 'ಮಾರ್ಕ್' ಹಾಗೂ '45' ಚಿತ್ರಗಳ ನಡುವ ಪೈಪೋಟಿ ಏರ್ಪಡಲಿದೆ. ಒಂದು ಚಿತ್ರಕ್ಕೆ ಆ ಥಿಯೇಟರ್ ಫೈನಲ್ ಆಗಿಬಿಟ್ಟರೆ ಮತ್ತೊಂದು ಸಿನಿಮಾ ಅನುಪಮಾ ಚಿತ್ರಮಂದಿರಕ್ಕೆ ಹೋಗಬೇಕಾಗುತ್ತದೆ.

ಕಡೆಯದಾಗಿ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಅನುಪಮಾ ಚಿತ್ರಮಂದಿರದಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಪ್ಪಿತಪ್ಪಿ ತ್ರಿವೇಣಿ ಚಿತ್ರಮಂದಿರದಲ್ಲಿ ಎರಡರಲ್ಲಿ ಒಂದು ಸಿನಿಮಾ ಬಿಡುಗಡೆ ಆದರೂ ಅಚ್ಚರಿ ಪಡಬೇಕಿಲ್ಲ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಟ್ರೈಲರ್ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ.

KG Road Battle Heats Up Devil Mark and 45 Compete for Prime Single-Screen Theaters in December

ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರು ಪ್ರಚಾರ ಮಾಡುತ್ತಿಲ್ಲ. ಅಭಿಮಾನಿಗಳೇ ಸಿನಿಮಾ ಪ್ರಚಾರದ ಬಂಡಿ ಎಳೆಯುತ್ತಿದ್ದಾರೆ. ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ನರ್ತಕಿ ಚಿತ್ರಮಂದಿರದ ಆವರಣದಲ್ಲಿ ಸಂಭ್ರಮಾಚರಣೆ ಕೊಂಚ ಜೋರಾಗಿಯೇ ಇರಲಿದೆ. ಶೀಘ್ರದಲ್ಲೇ 'ಮಾರ್ಕ್' ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಸುದೀಪ್ ಹೇಳಿದ್ದಾರೆ.

'45' ಸಿನಿಮಾ ಟ್ರೈಲರ್‌ ಲಾಂಚ್‌ಗೆ ಸಿದ್ಧತೆ ನಡೀತಿದೆ. ಅದಕ್ಕೂ ಮುನ್ನ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ. ಶಿವರಾಜ್‌ಕುಮಾರ್, ಉಪೇಂದ್ರ, ರಾಜ್‌. ಬಿ ಶೆಟ್ಟಿ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಅರ್ಜುನ್ ಜನ್ಯಾ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಸ್ವತಃ ತಾವೇ ಸಂಗೀತ ಸಂಯೋಜನೆ ಮಾಡಿದ್ದಾರೆ. 'Afro ಟಾಪಾಂಗ್' ಪ್ರಮೋಷನಲ್ ಸಾಂಗ್ ಸೂಪರ್ ಹಿಟ್ ಆಗಿದೆ.

ರಮೇಶ್ ರೆಡ್ಡಿ ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ '45' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ಹಿಟ್ ಆಗಿದೆ. ಟ್ರೈಲರ್ ಬಂದ್ಮೇಲೆ ಸಿನಿಮಾ ಖದರ್ ಹೆಚ್ಚಾಗುವ ಸುಳಿವು ಸಿಕ್ತಿದೆ. ಶಿವಣ್ಣ, ಉಪ್ಪಿ ಮುಖಾಮುಖಿ ಅಭಿಮಾನಿಗಳಿಗೆ ಬಹಳ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.

'ಮ್ಯಾಕ್ಸ್' ಕಾಂಬಿನೇಷನ್ ಸಿನಿಮಾ 'ಮಾರ್ಕ್' ಕೂಡ ಹೈಪ್ ಕ್ರಿಯೇಟ್ ಮಾಡಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಮತ್ತೊಮ್ಮೆ ಸುದೀಪ್ ಅಬ್ಬರಿಸಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಜೊತೆ ಸೇರಿ ಸುದೀಪ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಲಿದೆ. ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು 'ಮಾರ್ಕ್' ಚಿತ್ರದಲ್ಲಿ ನಟಿಸಿದ್ದಾರೆ.

More from Filmibeat

Read more about: theater devil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X