twitter
    For Quick Alerts
    ALLOW NOTIFICATIONS  
    For Daily Alerts

    ಕೆಜಿಎಫ್ to ಕಾಂತಾರ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 100 ಕೋಟಿ ಕ್ಲಬ್ ಸೇರಿರುವ 7 ಚಿತ್ರಗಳಿವು!

    By ಫಿಲ್ಮಿಬೀಟ್ ಡೆಸ್ಕ್
    |

    ಎಪ್ಪತ್ತು, ಎಂಬತ್ತು, ತೊಂಬತ್ತರ ದಶಕಗಳಲ್ಲಿ ದೊಡ್ಡ ಹೆಸರನ್ನು ಹೊಂದಿದ್ದ ಕನ್ನಡ ಚಿತ್ರರಂಗದ ಬಗ್ಗೆ ಬೇರೆ ಭಾಷೆಯ ಸಿನಿ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಕನ್ನಡ ಚಿತ್ರಗಳು ಪರ ರಾಜ್ಯಗಳಲ್ಲಿಯೂ ತಮ್ಮ ಕಂಟೆಂಟ್‌ಗಳಿಂದ ಸದ್ದು ಮಾಡುತ್ತಿದ್ದವು. ಆದರೆ ನಂತರದ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಮಂಕಾಗಿದ್ದು ಸುಳ್ಳಲ್ಲ. ಹಾಗೊಂದು ಹೀಗೊಂದು ಚಿತ್ರಗಳು ಸದ್ದು ಮಾಡಿದ್ದು ಬಿಟ್ಟರೆ ಇಡೀ ಭಾರತ ಚಿತ್ರರಂಗ ಕನ್ನಡ ಚಲನಚಿತ್ರರಂಗದತ್ತ ತಿರುಗಿ ನೋಡುವಂತಹ ಚಿತ್ರಗಳು ಬಂದ ಉದಾಹರಣೆಗಳು ಇರಲಿಲ್ಲ.

    ಹಲವು ಚಿತ್ರಗಳು ರಾಜ್ಯದಲ್ಲಿ ಭರ್ಜರಿ ಸದ್ದು ಮಾಡಿ ಪರಭಾಷೆಗಳಿಗೆ ರಿಮೇಕ್ ಆದರೂ ಸಹ ದೇಶವ್ಯಾಪಿ ಹೆಸರು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಲನಚಿತ್ರಗಳು ರಾಜ್ಯದ ಬೇಲಿಯನ್ನು ದಾಟಿ ಪರರಾಜ್ಯಗಳಲ್ಲಿಯೂ ಸದ್ದು ಮಾಡ್ತಿವೆ. ಅದರಲ್ಲಿಯೂ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟಿಕೊಂಡ ನಂತರ ಕನ್ನಡ ಚಿತ್ರಗಳು ಅನ್ಯ ಭಾಷೆಗಳಿಗೆ ಡಬ್ ಆಗಿ ಅಲ್ಲಿಯೂ ಯಶಸ್ವಿಯಾದವು.

    ಹೀಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರಗಳು ಸದ್ದು ಮಾಡಲಿವೆ ಎಂಬ ದಾರಿಯನ್ನು ತೋರಿಸಿಕೊಟ್ಟದ್ದು ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 1 ಚಿತ್ರ. ಇನ್ನು ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರಗಳೂ ಸಹ ಸದ್ದು ಮಾಡಲಿವೆ ಎನ್ನುವುದನ್ನು ಮಾತ್ರವಲ್ಲದೇ ಕನ್ನಡ ಚಿತ್ರವೊಂದು ನೂರು ಕೋಟಿ ಕ್ಲಬ್ ಸೇರುವ ಸಾಮರ್ಥ್ಯ ಹೊಂದಿದೆ ಎಂಬುದನ್ನೂ ಸಹ ಸಾಬೀತುಪಡಿಸಿತು. ಈ ಚಿತ್ರ ಯಶಸ್ವಿಯಾಗಿ ನೂರು ಕೋಟಿ ಕ್ಲಬ್ ಸೇರಿದ ಬಳಿಕ ಕನ್ನಡ ಆರು ಚಿತ್ರಗಳು ನೂರು ಕೋಟಿ ಕ್ಲಬ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಹಾಗಿದ್ದರೆ, ಇಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಲ್ಲಿ ನೂರು ಕೋಟಿ ಕ್ಲಬ್ ಸೇರಿರುವ ಏಳು ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

    ನೂರು ಕೋಟಿ ಕ್ಲಬ್ ಸೇರಿವೆ ಈ ಏಳು ಸಿನಿಮಾಗಳು

    ನೂರು ಕೋಟಿ ಕ್ಲಬ್ ಸೇರಿವೆ ಈ ಏಳು ಸಿನಿಮಾಗಳು

    ಬಾಕ್ಸ್ ಆಫೀಸ್‌ನಲ್ಲಿ ನೂರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ಗಳಿಸಿ ಯಶಸ್ವಿಯಾಗಿ ನೂರು ಕೋಟಿ ಕ್ಲಬ್ ಸೇರಿರುವ ಕನ್ನಡದ ಏಳು ಚಿತ್ರಗಳು ಇಲ್ಲಿವೆ.

    1. ಕೆಜಿಎಫ್ ಚಾಪ್ಟರ್ 1 - 250 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

    2. ರಾಬರ್ಟ್ - 102 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

    3. ಜೇಮ್ಸ್ - 151 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

    4. ಕೆಜಿಎಫ್ ಚಾಪ್ಟರ್ 2 - 1250 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

    5. 777 ಚಾರ್ಲಿ - 105 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

    6. ವಿಕ್ರಾಂತ್ ರೋಣ - 185 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

    7. ಕಾಂತಾರ - 404 ಕೋಟಿ ರೂಪಾಯಿ ಕೋಟಿ ವರ್ಲ್ಡ್‌ವೈಡ್ ಕಲೆಕ್ಷನ್

    200 ಕೋಟಿ ಕ್ಲಬ್ ಸೇರಿರುವುದು ಮೂರೇ ಸಿನಿಮಾ

    200 ಕೋಟಿ ಕ್ಲಬ್ ಸೇರಿರುವುದು ಮೂರೇ ಸಿನಿಮಾ

    ಇನ್ನು ಇನ್ನೂರು ಕೋಟಿ ಕ್ಲಬ್ ವಿಷಯಕ್ಕೆ ಬಂದರೆ ಕನ್ನಡದಲ್ಲಿ ಯಶಸ್ವಿಯಾಗಿ ಈ ಕ್ಲಬ್ ಸೇರಿರುವುದು ಕೇವಲ ಮೂರು ಚಿತ್ರಗಳು ಮಾತ್ರವೇ. ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಹಾಗೂ 2 ಮತ್ತು ಕಾಂತಾರ ಚಿತ್ರಗಳು ಮಾತ್ರ ಇನ್ನೂರು ಕೋಟಿ ಕ್ಲಬ್ ಸೇರಿವೆ. ಮುನ್ನೂರು ಹಾಗೂ ನಾಲ್ಕು ನೂರು ಕೋಟಿ ಕ್ಲಬ್‌ನ್ನು ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಹಂಚಿಕೊಂಡಿವೆ. ಇನ್ನುಳಿದಂತೆ ಕನ್ನಡದ ಪೈಕಿ 500ರಿಂದ 1200 ಕೋಟಿವರೆಗಿನ ಎಲ್ಲಾ ಕ್ಲಬ್‌ಗಳನ್ನು ಸೇರಿದ ಕನ್ನಡದ ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿದೆ.

    ಇನ್ನುಮುಂದೆ ಹೆಚ್ಚಲಿದೆ ನೂರು ಕೋಟಿ ಚಿತ್ರಗಳು

    ಇನ್ನುಮುಂದೆ ಹೆಚ್ಚಲಿದೆ ನೂರು ಕೋಟಿ ಚಿತ್ರಗಳು

    ಇನ್ನು ಕಳೆದ ವರ್ಷ ಬಿಡುಗಡೆಗೊಂಡ ಒಟ್ಟು ಐದು ಕನ್ನಡ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು, ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರಗಳು ನೂರು ಕೋಟಿ ಕ್ಲಬ್ ಸೇರುವ ನಿರೀಕ್ಷೆಯನ್ನು ಹೆಚ್ಚಿಸಿವೆ. ಅದರಲ್ಲಿಯೂ ದೊಡ್ಡ ಬಜೆಟ್‌ನ ಹಾಗೂ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳು ಹೆಚ್ಚಿದ್ದು, ಅಂತಹ ಕನ್ನಡ ಚಿತ್ರಗಳು ನೂರು ಕೋಟಿ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

    English summary
    KGF 1 to Kantara: List of 100 crore club films in the history of Kannada Film Industry. Take a look.
    Tuesday, January 31, 2023, 8:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X