KGF 2 First Day First Show Timing: ಬೆಂಗಳೂರಲ್ಲಿ 12 ಶೋ, ಮುಂಬೈ, ದೆಹಲಿಯಲ್ಲಿ ಮುಂಜಾನೆ ಶೋ ಫಿಕ್ಸ್!
'ಕೆಜಿಎಫ್ 2' ಚಿತ್ರ ಈ ವಾರ ಏಪ್ರಿಲ್ 14ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಸಿನಿಮಾ ಪ್ರಿಯರು ವರ್ಷಗಳಿಂದ ಕಾಯುತ್ತಿದ್ದ ದಿನ ಹತ್ತಿರ ಬಂದು ಬಿಟ್ಟಿದೆ. ಇನ್ನೇನಿದ್ದರು ಚಿತ್ರ ರಿಲೀಸ್ ಆದ ಬಳಿಕ ಯಾವ ಮಟ್ಟಿಗೆ ಧೂಳೆಬ್ಬಿಸುತ್ತದೆ ಎನ್ನುವುದನ್ನು ನೋಡುವುದಷ್ಟೇ ಬಾಕಿ. ಹೆಚ್ಚಿನ ನಿರೀಕ್ಷೆ ಜೊತೆಗೆ ಬರುತ್ತಾ ಇರುವು ಈ ಚಿತ್ರ ಮತ್ತೊಂದು ದಾಖಲೆ ಮಾಡುದರಲ್ಲಿ ಅನುಮಾನ ಇಲ್ಲ.
'ಕೆಜಿಎಫ್ 2' ಈಗ ಕನ್ನಡದ ಅಥವಾ ಭಾರತೀಯ ಚಿತ್ರವಾಗಿ ಮಾತ್ರ ಉಳಿದಿಲ್ಲ. ಈ ಚಿತ್ರವನ್ನು ವರ್ಲ್ಡ್ ಸಿನಿಮಾ ಎಂದು ಕರೆದರೆ ಅದು ಅತಿಶಯೋಕ್ತಿ ಆಗಲಾರದು. ಯಾಕೆಂದರೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಾ ಇದೆ. ಹಾಗೆಂದ ಮೇಲೆ ದೊಡ್ಡ ಮಟ್ಟದಲ್ಲೇ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದು ಪಕ್ಕಾ.
ಎಲ್ಲಾ ವಿಚಾರದಲ್ಲೂ ದಾಖಲೆ ಬರೆಯುತ್ತಾ ಇರುವ 'ಕೆಜಿಎಫ್ 2' ಚಿತ್ರ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ ಈ ಚಿತ್ರ ದೇಶಾದ್ಯಂತ ಮುಂಜಾನೆ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿ 12ಕ್ಕೆ ಶೋ ಶುರುವಾದರೆ. ಬೇರೆ ಕಡೆಗಳಲ್ಲಿ ಬೆಳಗ್ಗೆ 4, 6, 7 ಗಂಟೆಗೆ ಶೋಗಳು ಆರಂಭ ಆಗಲಿವೆ.
Recommended Video


ದೇಶಾದ್ಯಂತ ಮುಂಜಾನೆಯೇ ಶೋಗಳು ಆರಂಭ!
'ಕೆಜಿಎಫ್ 2' ಚಿತ್ರದ ಹವಾ ಯಾವ ಮಟ್ಟಿಗೆ ಇದೆ ಎಂದರೆ, ಚಿತ್ರ ಬೆಳ್ಳಂಬೆಳಗ್ಗೆಯೇ ಸೂರ್ಯ ಹುಟ್ಟೋಕು ಮುನ್ನವೇ ತೆರೆಗೆ ಅಪ್ಪಳಿಸಲಿದೆ. ಚಿತ್ರದ ಬಗ್ಗೆ ಇರುವ ಕ್ರೇಜ್ ನೋಡಿ ಮೊದಲ ದಿನ ಹೆಚ್ಚುವರಿ ಶೋಗಳನ್ನು ಆಯೋಜಿಸಲು ಚಿತ್ರತಂಡ, ಪ್ರದರ್ಶಕರು ಯೋಜನೆ ರೂಪಿಸಿದ್ದಾರೆ. ಹಾಗಾಂತ ಬೆಂಗಳೂರು ಅಥವಾ ಕರ್ನಾಟಕದಲ್ಲಿ ಮಾತ್ರ 'ಕೆಜಿಎಫ್ 2' ಮುಂಜಾನೆ ರಿಲೀಸ್ ಆಗುತ್ತಿಲ್ಲ. ಇಡೀ ದೇಶಾದ್ಯಂತ ಚಿತ್ರ ಬೆಳಗ್ಗೆಯೇ ರಿಲೀಸ್ ಆಗುತ್ತಿದೆ.

ಬೆಂಗಳೂರಿನಲ್ಲಿ 12am ಶೋಗಳು!
ಬೆಂಗಳೂರಿನಲ್ಲಿ ಈಗಲೇ 'ಕೆಜಿಎಫ್ 2' ಚಿತ್ರದ ಬಗ್ಗೆ ಇರುವ ಕ್ರೇಜ್ ಮುಗಿಲು ಮುಟ್ಟಿದೆ. ಇಲ್ಲಿ ಯಶ್ ಮತ್ತು ಕೆಜಿಎಫ್‌ಗೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ 'ಕೆಜಿಎಫ್ 2' ಅಬ್ಬರ ಶುರುವಾಗಲಿದೆ. ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12 ಗಂಟೆಯ ಶೋಗಳು ಪ್ರದರ್ಶನಗೊಳ್ಳಲಿವೆ. ಇನ್ನು ಚಿತ್ರಮಂದಿರಗಳ ಲಿಸ್ಟ್ ಬಹಿರಂಗವಾಗಬೇಕು ಅಷ್ಟೇ.

ತಮಿಳುನಾಡಿನಲ್ಲಿ ಬೆಳಗ್ಗೆ 4 ಗಂಟೆಗೆ ಪ್ರದರ್ಶನ!
ತಮಿಳುನಾಡಿನಲ್ಲೂ ಕೂಡ 'ಕೆಜಿಎಫ್ 2' ಚಿತ್ರದ ಹವಾ ಬಲು ಜೋರಾಗಿದೆ. ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ, ಮುಂಜಾನೆ ಶೋಗಳನ್ನು ಆಯೋಜಿಸಲಾಗಿದೆ. ತಮಿಳುನಾಡಿನಲ್ಲಿ ಮುಂಜಾನೆ 4 ಗಂಟೆಗೆ 'ಕೆಜಿಎಫ್ 2' ಪ್ರದರ್ಶನ ಶುರುವಾಗಲಿದೆ. ಇನ್ನು ಕೇರಳದಲ್ಲೂ ಕೂಡ ಬೆಳಗ್ಗೆ 4 ಗಂಟೆಯ ಶೋ ಶುರುವಾಗಲಿವೆ. ಅಲ್ಲಿನ ಯಶ್ ಫ್ಯಾನ್ಸ್ ಅದಾಗಲೇ ಬೆಳಗ್ಗಿನ ಶೊ ನೋಡಲು ಕಿಟೆಕ್ ಖರೀದಿ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಳ್ಳುತ್ತಾ ಇದ್ದಾರೆ.

ಮುಂಬೈ, ದೆಹಲಿ, ಕೊಲ್ಕತ್ತಾದಲ್ಲಿ ಬೆಳಗ್ಗೆಯೇ ಶೋ ಶುರು!
ಕರ್ನಾಟಕ, ತಮಿಳು ನಾಡು, ಕೇರಳ ಮಾತ್ರ ಅಲ್ಲ, ಮುಂಬೈ, ದೆಹಲಿ, ಕೊಲ್ಕತ್ತಾದಲ್ಲಿಯೂ ಮುಂಜಾನೆಯ ಶೋಗಳು ಆರಂಭ ಆಗುತ್ತಿವೆ. ಮುಂಬೈನಲ್ಲಿ ಹೇಳಿ, ಕೇಳಿ 'ಕೆಜಿಎಫ್ 2' ಚಿತ್ರಕ್ಕೆ ಭಾರಿ ಬೇಡಿಕೆ ಇದೆ. ಅಲ್ಲಿ ಬೆಳಗ್ಗೆ 6 ಗಂಟೆಯಿಂದ ಶೋ ಶುರುವಾಗಲಿದೆ. ಇನ್ನು ದೆಹಲಿಯಲ್ಲೂ ಕೂಡ ಬೆಳಗ್ಗೆ 6 ಗಂಟೆಗೆ ಶೋ ಶುರುವಾಗಲಿದೆ. ಕೊಲ್ಕತ್ತಾದಲ್ಲಿ ಬೆಳಗ್ಗೆ 7 ಗಂಟೆಯಿಂದ ಶೋ ಆರಂಭ ಆಗಲಿದೆ.


Click it and Unblock the Notifications











