'ಕೆಜಿಎಫ್ 2' 50 ದಿನ: ಖುಷಿಯಲ್ಲಿ ಧನ್ಯವಾದ ಹೇಳಿದ ವಿಜಯ್ ಕಿರಗಂದೂರು!
ಕನ್ನಡದ ಹೆಮ್ಮೆಯ ಸಿನಿಮಾ 'ಕೆಜಿಎಫ್ 2' ರಿಲೀಸ್ ಆಗಿ 50 ದಿನ ಕಳೆದಿದೆ. ತಿಂಗಳ ಬಳಿಕವೂ ಚಿತ್ರದ ಕ್ರೇಜ್ ಮಾತ್ರ ಕಡಿಮೆ ಆಗಿರಲಿಲ್ಲ. 'ಕೆಜಿಎಫ್ 2' ಓಟಿಟಿಯಲ್ಲಿ ರಿಲೀಸ್ ಆದರೂ ಕೂಡ ಚಿತ್ರಮಂದಿರದಲ್ಲಿ ಸಿನಿಮಾದ ಗಳಿಕೆ ಕುಗ್ಗಿರಲಿಲ್ಲ.
ಇದೀಗ 'ಕೆಜಿಎಫ್ 2' ಸಿನಿಮಾ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಕನ್ನಡದ ಈ ಬ್ಲಾಕ್ ಬ್ಲಸ್ಟರ್ ಸಿನಿಮಾ ಮಹತ್ತರ ಸಾಧನೆಯನ್ನು ಮಾಡಿದೆ. ಈ ಸಾಧನೆ ಕನ್ನಡಿಗರ ಹೆಮ್ಮೆ ಆಗಿದೆ. ಈ ಯಶಸ್ಸಿಗೆ ಸಿನಿಮಾ ತಂಡ ಮಾತ್ರ ಅಲ್ಲ, ಸಿನಿಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗೆಲ್ಲಿಸಿದ ಜನರ ಕೊಡುಗೆ ಅಪಾರ.
50 ದಿನಗಳ ಬಳಿಕವೇ ಈ ಸಿನಿಮಾ ಓಟಿಟಿಯಲ್ಲಿ ಉಚಿತವಾಗಿ ನೋಡಲು ಲಭ್ಯವಿದೆ. ಹಾಗಾಗಿ ಈ ಸಿನಿಮಾದ ಬಗ್ಗೆ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಹಂಚಿಕೊಳ್ಳುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ವಿಜಯ್ ಕಿರಗಂದೂರು ಧನ್ಯವಾದ!
'ಕೆಜಿಎಫ್ 2' ಸಿನಿಮಾ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮೂಲಕ ಪೋಸ್ಟ್ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. "ಈ ಹೊಸ ಯುಗದ ಮಾನ್‌ಸ್ಟರ್ ಸೃಷ್ಟಿಗೆ ನಮ್ಮ ಜೊತೆಗೆ ನೀವೆಲ್ಲ ಇದ್ದೀರಿ ಧನ್ಯವಾದಗಳು. ನಿಮ್ಮ ಎಲ್ಲಾ ಬೇಷರತ್ತು ಪ್ರೀತಿ ಮತ್ತು ಅಚಲವಾದ ಬೆಂಬಲವಿಲ್ಲದೆ, ಇದು ಸಾಧ್ಯವಾಗುತ್ತಿರಲಿಲ್ಲ. ಈ 50 ದಿನವನ್ನು ಹೆಚ್ಚಿನ ಘರ್ಜನೆಯೊಂದಿಗೆ ಆಚರಿಸೋಣ." ಎಂದು ಬರೆದುಕೊಂಡಿದ್ದಾರೆ.

390 ಸೆಂಟರ್ ಭಾರತ, 10 ಸೆಂಟರ್ ವಿದೇಶ 50 ದಿನ!
ಕೆಜಿಎಫ್ 2, ಸಿನಿಮಾದ 50 ದಿನದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ಎಷ್ಟು ಸೆಂಟರ್‌ನಲ್ಲಿ ಸಿನಿಮಾ 50 ದಿನಗಳನ್ನು ಪೂರೈಸಿದೆ ಎನ್ನವ ಬಗ್ಗೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಭಾರತದಾದ್ಯಂತ 390ಕ್ಕೂ ಅಧಿಕ ಸೆಂಟರ್‌ಗಳು, ವಿದೇಶದಲ್ಲಿ 10ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

1239.97 ಗಳಿಕೆ ಕಂಡ ಕೆಜಿಎಫ್ 2!
'ಕೆಜಿಎಫ್ 2' 50ನೇ ದಿನ ₹85 ಲಕ್ಷ ಕಲೆಕ್ಷನ್ ಮಾಡಿದೆ. ಒಟ್ಟಾರೆ 50 ದಿನಗಳಲ್ಲಿ ಸುಮಾರು ₹1239.97 ಕೋಟಿ ಗಳಿಸಿದೆ. ಈ ಮೂಲಕ 'ಕೆಜಿಎಫ್ 2', ಮಹತ್ತರ ದಾಖಲೆ ಮಾಡಿದ ಕನ್ನಡದ ಸಿನಿಮಾ ಆಗಿದೆ. ಜೊತಗೆ ಭಾರತೀಯ ಸಿನಿಮಾರಂಗದಲ್ಲೇ ಅಗ್ರಸ್ಥಾನದಲ್ಲಿ ಕುಳಿತಿದೆ. ಸಿನಿಮಾದ ಈ ಯಶಸ್ಸು ಹೊಂಬಾಳೆಗೆ ಮತ್ತೊಂದು ಮೆಟ್ಟಿಲು ಏರಲು ಅವಕಾಶ ಮಾಡಿಕೊಟ್ಟಿದೆ.

ಹೊಂಬಾಳೆ ದೊಡ್ಡ ಯೋಜನೆಗಳು!
'ಕೆಜಿಎಫ್ 2' ಸಿನಿಮಾದ ಯಶಸ್ಸು ಹೊಂಬಳೆ ನಿರ್ಮಾಣ ಸಂಸ್ಥೆಗೆ ಮತ್ತಷ್ಟು ಸಿನಿಮಾಗಳನ್ನು ಮಾಡುವ ಹುಮ್ಮಸ್ಸು ಕೊಟ್ಟಿದೆ. ಸದ್ಯ ಇನ್ನೂ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ ಹೊಂಬಾಳೆ. ಜೊತೆಗೆ ಬಾಲಿವುಡ್‌ನಲ್ಲೂ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದೆ.


Click it and Unblock the Notifications











