ಶ್ರೀಲಂಕಾದಲ್ಲಿ ಯಶ್ ಲೋಕೇಶನ್ ಹುಡುಕಾಟ? ವರ್ಷ ಪೂರೈಸಿದ ಸಂಭ್ರಮದಲ್ಲಿ 19ನೇ ಸಿನಿಮಾ ಅನೌನ್ಸ್ ಆಗುತ್ತಾ?

By ಫಿಲ್ಮಿಬೀಟ್ ಡೆಸ್ಕ್

'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿ ಏಪ್ರಿಲ್ 14ಕ್ಕೆ ಒಂದು ವರ್ಷ. ಯಶ್ ಅಭಿಮಾನಿಗಳು 'ಕೆಜಿಎಫ್ 2' ಸಿನಿಮಾವನ್ನು ಸಂಭ್ರಮಿಸೋಕೆ ಸಜ್ಜಾಗಿದ್ದಾರೆ. ಇತ್ತ ಯಶ್ 19ನೇ ಸಿನಿಮಾದ ಕನಸು ಕಾಣುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಾದ್ರೂ ಯಶ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡುತ್ತಾರಾ? ಅಂತ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

'ಕೆಜಿಎಫ್ 2' ರಿಲೀಸ್ ಆದಲ್ಲಿಂದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಿ ಸೇರಿದ್ದಾರೆ. ಈ ಸಿನಿಮಾದಿಂದ ಸಿಕ್ಕಿರೋ ನೇಮ್ ಅಂಡ್ ಫೇಮ್ ಉಳಿಸಿಕೊಳ್ಳುವುದಕ್ಕೆ ಯಶ್ ಶತಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲೊಂದು ಸ್ಕ್ರಿಪ್ಟ್ ಅನ್ನೂ ಲಾಕ್ ಮಾಡಿದ್ದಾರೆ ಅನ್ನೋದು ಸುದ್ದಿ.

KGF 2 Anniversary: Yash searching location Sri Lanka and fans are hoping surprize

ಒಮ್ಮೆ ಎಲ್ಲವೂ ಅಂತಿಮಗೊಂಡ ಬಳಿಕ ಹೊಸ ಸಿನಿಮಾವನ್ನು ಯಶ್ ಅನೌನ್ಸ್ ಮಾಡುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಹೀಗಾಗಿ 'ಕೆಜಿಎಫ್ 2' ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ 19ನೇ ಸಿನಿಮಾ ಅನೌನ್ಸ್ ಆಗುತ್ತಾ? ಅನ್ನೋ ಪ್ರಶ್ನೆಗೆ ಒಂದು ಫೋಟೊ ಚಿಕ್ಕದೊಂದು ಹೋಪ್ ಕೊಟ್ಟಿದೆ.

ಶ್ರೀಲಂಕಾದಲ್ಲಿ ರಾಕಿಂಗ್‌ ಸ್ಟಾರ್

ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೊ ವೈರಲ್ ಆಗುತ್ತಿದೆ. ಶ್ರೀಲಂಕಾದ ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್‌ನ ಅಧ್ಯಕ್ಷರೊಂದಿಗೆ ಯಶ್ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಯಶ್ ಇತ್ತೀಚೆಗೆ ಶ್ರೀಲಂಕಾದ ಪ್ರವಾಸಕ್ಕೆ ತೆರಳಿದ್ದರು. ಆ ಬಳಿಕ ಶ್ರೀಲಂಕಾದ ಯಾಲಾದಲ್ಲಿ ಅಲ್ಲಿನ ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್‌ನ ಅಧ್ಯಕ್ಷ ದಿನೇಶ್ ವೀರಕ್ಕೋಡಿ ಅವರನ್ನು ಭೇಟಿ ಮಾಡಿದ್ದಾರೆ. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

KGF 2 Anniversary: Yash searching location Sri Lanka and fans are hoping surprize

ಶ್ರೀಲಂಕಾದಲ್ಲಿ ಲೋಕೇಶ್ ಹುಡುಕಾಟ?

ಶ್ರೀಲಂಕಾದ ಯಾಲಾದಲ್ಲಿ ಅಲ್ಲಿನ ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್‌ನ ಅಧ್ಯಕ್ಷ ದಿನೇಶ್ ವೀರಕ್ಕೋಡಿ ಜೊತೆಯಿರುವ ಯಶ್ ಫೋಟೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಕ್ಟಿವ್ ಆಗಿದ್ದರು. ಯಶ್ ತಮ್ಮ ಮುಂದಿನ ಸಿನಿಮಾಗಾಗಿ ಲೋಕೇಶನ್ ಹುಡುಕಾಟದಲ್ಲಿದ್ದಾರೆ ಅಂತ ಹರಿದಾಡುತ್ತಿದೆ.

ಅಸಲಿಗೆ ರಾಕಿಂಗ್ ಸ್ಟಾರ್ ಯಶ್ ಲೋಕೇಶನ್ ಹುಡುಕಾಟಕ್ಕೆ ಹೋಗಿದ್ದಾರಾ? ಶ್ರೀಲಂಕಾದಲ್ಲಿ ಮುಂದಿನ ಸಿನಿಮಾ ಶೂಟಿಂಗ್ ಆಗುತ್ತಾ? ಅನ್ನೋ ಪ್ರಶ್ನೆ ಈ ಫೋಟೊ ನೋಡಿದ ಬಳಿಕ ಹುಟ್ಟಿಕೊಂಡಿದೆ.

19ನೇ ಸಿನಿಮಾ ಘೋಷಣೆಯಾಗುತ್ತಾ?

ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾದೂ ಕಾದು ಸುಸ್ತಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಯಶ್ ಅಭಿನಯದ ಒಂದೇ ಒಂದು ಸಿನಿಮಾ ರಿಲೀಸ್ ಆಗಿದೆ. ಅಲ್ಲದೆ 'ಕೆಜಿಎಫ್ 2' ರಿಲೀಸ್ ಆಗಿ ಒಂದು ವರ್ಷವಾದರೂ ಹೊಸ ಸಿನಿಮಾ ಸೆಟ್ಟೇರುವುದಿರಲಿ, ಅನೌನ್ಸ್ ಕೂಡ ಆಗಿಲ್ಲ.

ನಾಳೆ (ಏಪ್ರಿಲ್ 14) 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿ ಒಂದು ವರ್ಷ ಪೂರೈಸಲಿದೆ. ಇದೇ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಬಹುದಾ? ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಆದರೆ, ಆ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಯಾವುದೇ ಸುಳಿವು ಇಲ್ಲ. ಒಂದ್ವೇಳೆ 19ನೇ ಸಿನಿಮಾ ಅನೌನ್ಸ್ ಆದ್ರೆ, ಅಭಿಮಾನಿಗಳಿಗೆ ಹಬ್ಬವೇ.

More from Filmibeat

English summary
KGF 2 Anniversary: Yash searching location Sri Lanka and fans are hoping surprize,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X