2022ರಲ್ಲಿ ಅತಿಹೆಚ್ಚು ಗೂಗಲ್ ಸರ್ಚ್ ಆದ 10 ಚಿತ್ರಗಳ ಪಟ್ಟಿ ಪ್ರಕಟ: KGF - 2 ಚಿತ್ರಕ್ಕೆ ಯಾವ ಸ್ಥಾನ?

ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಕನ್ನಡ ಸಿನಿಮಾಗಳ ಆರ್ಭಟ ಜೋರಾಗಿತ್ತು. ಕಲೆಕ್ಷನ್, ಕ್ರೇಜ್, ಗುಣಮಟ್ಟ ಯಾವುದೇ ವಿಭಾಗ ತೆಗೆದುಕೊಂಡರೂ ಕನ್ನಡ ಸಿನಿಮಾಗಳ ಸಾಧನೆ ಹೆಚ್ಚು. ವಿಶ್ವದಾದ್ಯಂತ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ KGF - 2 ಚಿತ್ರ ಕೂಡ ಸ್ಥಾನ ಪಡೆದುಕೊಂಡಿದೆ.

KGF ಚಾಪ್ಟರ್ 2 ಕ್ರೇಜ್ ಎಂಥದ್ದು ಎನ್ನುವುದನ್ನು ಇದೀಗ ಗೂಗಲ್ ಕೂಡ ಸಾರಿ ಸಾರಿ ಹೇಳಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೈವೋಲ್ಟೇಜ್ ಪರ್ಫಾರ್ಮೆನ್ಸ್‌ನ ಈ ಸೀಕ್ವೆಲ್ ಸಿನಿಮಾ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಕನ್ನಡ ಸಿನಿಮಾಗಳ ತಾಕತ್ತು ಏನು ಎನ್ನುವುದನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗುವಂತಾಗಿತ್ತು. ಇದೀಗ ಗೂಗಲ್ ಸರ್ಚ್ ವಿಚಾರದಲ್ಲಿ ಹಾಲಿವುಡ್ ಸಿನಿಮಾಗಳ ಸಾಲಿನಲ್ಲಿ ಕನ್ನಡದ KGF - 2 ನಿಂತಿದೆ.

3 ವರ್ಷಗಳ ಹಿಂದೆ KGF ಚಾಪ್ಟರ್ 1 ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಂದಿನಿಂದಲೇ ಚಾಪ್ಟರ್ 2 ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಪ್ರಶಾಂತ್‌ ನೀಲ್ ಅಂಡ್ ಟೀಂ ಸೀಕ್ವೆಲ್ ಕಟ್ಟಿಕೊಟ್ಟಿದ್ದರು. ಪ್ರೇಕ್ಷಕರು ಸಾಗರೋಪಾದಿಯಲ್ಲಿ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬಂದಿದ್ದರು. ಪರಿಣಾಮ ಸಿನಿಮಾ ಕಲೆಕ್ಷನ್ 1000 ಕೋಟಿ ದಾಟಿತ್ತು.

RRR ಹಿಂದಿಕ್ಕಿದ KGF - 2

RRR ಹಿಂದಿಕ್ಕಿದ KGF - 2

ರಾಜಮೌಳಿ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್, ರಾಮ್‌ಚರಣ್ ತೇಜಾ ನಟನೆಯ RRR ಕೂಡ ಸಕ್ಸಸ್ ಕಂಡಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಆದರೆ ಕಲೆಕ್ಷನ್ ಲೆಕ್ಕಾಚಾರದಲ್ಲಿ KGF - 2 ಮುಂದೆ ಮೌಳಿ ಸಿನಿಮಾ ಮಂಕಾಗಿತ್ತು. ಇದೀಗ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲೂ RRR ಚಿತ್ರಕ್ಕೆ ಜಾಗ ಸಿಕ್ಕಿಲ್ಲ.

6ನೇ ಸ್ಥಾನದಲ್ಲಿ ಬಾಲಿವುಡ್ 'ಬ್ರಹ್ಮಾಸ್ತ್ರ'

6ನೇ ಸ್ಥಾನದಲ್ಲಿ ಬಾಲಿವುಡ್ 'ಬ್ರಹ್ಮಾಸ್ತ್ರ'

ಅತಿ ಹೆಚ್ಚು ಸರ್ಚ್ ಮಾಡಿದ ಸಿನಿಮಾ ಪಟ್ಟಿಯಲ್ಲಿ ಭಾರತದ 2 ಸಿನಿಮಾಗಳಿಗೆ ಮಾತ್ರ ಸ್ಥಾನ ಸಿಕ್ಕಿದೆ. ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಚಿತ್ರಕ್ಕೆ 6ನೇ ಸ್ಥಾನ ಸಿಕ್ಕಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆದರೆ ಇಂದಿಗೂ ಈ ಸಿನಿಮಾ ಕಲೆಕ್ಷನ್ ಬಗ್ಗೆ ಕೆಲವರಿಗೆ ಅನುಮಾನ ಇದೆ.

8ನೇ ಸ್ಥಾನದಲ್ಲಿ KGF ಚಾಪ್ಟರ್ 2

8ನೇ ಸ್ಥಾನದಲ್ಲಿ KGF ಚಾಪ್ಟರ್ 2

ಇನ್ನು ಹಾಲಿವುಡ್ ಸಿನಿಮಾಗಳ ಸಾಲಿನಲ್ಲಿ KGF ಚಾಪ್ಟರ್ 2 ಕೂಡ ಜಾಗ ಮಾಡಿಕೊಂಡಿದೆ. ಗೂಗಲ್‌ನಲ್ಲಿ ಈ ವರ್ಷ ಅತಿಹೆಚ್ಚು ಸರ್ಚ್ ಆದ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ KGF - 2 ಚಿತ್ರಕ್ಕೆ 8ನೇ ಸ್ಥಾನ ಸಿಕ್ಕಿದೆ. ಕಾಶ್ಮೀರಿ ಫೈಲ್ಸ್, RRR ರೀತಿಯ ಸಿನಿಮಾಗಳನ್ನು ಹಿಂದಿಕ್ಕಿ ದಾಖಲೆ ಬರೆದಿದೆ. ಪಟ್ಟಿಯಲ್ಲಿ ಹಾಲಿವುಡ್‌ನ ಮಾರ್ಬಿಯಸ್, ಅನ್‌ಚಾರ್ಟೆಡ್ ಸಿನಿಮಾಗಳನ್ನು ಮೀರಿಸಿದೆ.

ಟಾಪ್‌ 10 ಸಿನಿಮಾಗಳ ಪಟ್ಟಿ

ಟಾಪ್‌ 10 ಸಿನಿಮಾಗಳ ಪಟ್ಟಿ

ವಿಶ್ವದಾದ್ಯಂತ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 'ಥೋರ್: ಲವ್ ಆಂಡ್ ಥಂಡರ್' ಸಿನಿಮಾ ಮೊದಲ ಸ್ಥಾನದಲ್ಲಿದೆ. 'ಬ್ಯಾಕ್ ಆಡಮ್‌'ಗೆ 2ನೇ ಸ್ಥಾನ, 'ಟಾಪ್‌ ಗನ್' 3ನೇ ಸ್ಥಾನ, 'ದಿ ಬ್ಯಾಟ್‌ಮ್ಯಾನ್‌'ಗೆ 4ನೇ ಸ್ಥಾನ, 'ಎನ್‌ಕಾಂಟೋ' 5ನೇ ಸ್ಥಾನ ಸಿಕ್ಕಿದೆ. ಇನ್ನು 6ನೇ ಸ್ಥಾನದಲ್ಲಿ 'ಬ್ರಹ್ಮಾಸ್ತ್ರ', 7ನೇ ಸ್ಥಾನದಲ್ಲಿ ಜುರಾಸಿಕ್ ವರ್ಲ್ಡ್: ಡೊಮಿನಿಯನ್, 8ನೇ ಸ್ಥಾನದಲ್ಲಿ KGF -2 ಸಿನಿಮಾಗಳಿವೆ. 'ಅನ್‌ಚಾರ್ಟೆಡ್', 'ಮಾರ್ಬಿಯಸ್' ಕ್ರಮವಾಗಿ 9 ಹಾಗೂ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.

More from Filmibeat

English summary
KGF 2 becomes the 8th most trending movie of the year among top 10 globally in Google. Chapter 2 also emerged as the highest-grossing film of 2022. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X