'RRR' ಮಾತ್ರವಲ್ಲ 'ಬಾಹುಬಲಿ- 2' ದಾಖಲೆ ಕೂಡ ಉಡೀಸ್: ಬಾಕ್ಸಾಫೀಸ್ ಕಿಂಗ್ ರಾಕಿಭಾಯ್

ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳು ಮೇಲುಗೈ ಸಾಧಿಸಿವೆ. ಅದರಲ್ಲೂ ಯಶ್ ನಟನೆಯ 'KGF- 2' ನಂಬರ್‌ ವನ್ ಸ್ಥಾನ ಅಲಂಕರಿಸಿದೆ. ರಾಜಮೌಳಿ ಸಿನಿಮಾಗಳನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

2018ರಲ್ಲಿ ಬಂದ 'KGF' ಸಿನಿಮಾ ಸೀಕ್ವೆಲ್ ಈ ವರ್ಷ ತೆರೆಗಪ್ಪಳಿಸಿತ್ತು. ಏಪ್ರಿಲ್ 14ರಂದು ರಿಲೀಸ್ ಆಗಿದ್ದ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಪ್ರೇಕ್ಷಕರು ಸಾಗರೋಪಾದಿಯಲ್ಲಿ ಬಂದು ಸಿನಿಮಾ ವೀಕ್ಷಿಸಿದ್ದರು. ಹಾಲಿವುಡ್ ಸಿನಿಮಾಗಳ ಫೀಲ್ ಕೊಟ್ಟಿದ್ದ ಸಿನಿಮಾ ದೊಡ್ಡದಾಗಿ ಸದ್ದು ಮಾಡಿತ್ತು. ಎಲಿವೇಷನ್ ಸೀನ್ಸ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಪದೇ ಪದೇ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದರು. ಪರಿಣಾಮ ಸಿನಿಮಾ ಕಲೆಕ್ಷನ್ 1000 ಕೋಟಿ ದಾಟಿತ್ತು.

ಮೊದಲೆಲ್ಲಾ ಸಿನಿಮಾ ಟಿಕೆಟ್ ಖರೀದಿಸಲು ಥಿಯೇಟರ್‌ಗೆ ಹೋಗಬೇಕಿತ್ತು. ಆದರೆ ಈಗ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಅದರಲ್ಲೂ ಬಹುತೇಕರು ಬುಕ್‌ ಮೈ ಶೋನಲ್ಲಿ ಟಿಕೆಟ್‌ ಬುಕ್ ಮಾಡುತ್ತಾರೆ. ಈ ವರ್ಷ ಬುಕ್‌ ಮೈ ಶೋನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರಗಳ ಲಿಸ್ಟ್ ಬಿಡುಗಡೆಯಾಗಿದೆ.

'ಬಾಹುಬಲಿ- 2' ಮೀರಿಸಿದ 'KGF-2'

'ಬಾಹುಬಲಿ- 2' ಮೀರಿಸಿದ 'KGF-2'

ಪಾರ್ಟ್ 1 ಸೂಪರ್ ಹಿಟ್ ಆದರೆ ಪಾರ್ಟ್‌-2 ಬಗ್ಗೆ ನಿರೀಕ್ಷೆ ಸಹಜ. 5 ವರ್ಷಗಳ ಹಿಂದೆ 'ಬಾಹುಬಲಿ'-2 ಸಿನಿಮಾ ಬಗ್ಗೆ ಭಾರೀ ಕ್ರೇಜ್ ಇತ್ತು. ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ? ಎನ್ನುವ ಪ್ರಶ್ನೆಗೆ ಉತ್ತರ ತಿಳಿಯಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಅದಕ್ಕೆ ತಕ್ಕಂತೆ ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ನಡೆದಿತ್ತು. ಬಹಳ ಜನ ಟಿಕೆಟ್ ಬುಕ್ ಮಾಡಿಕೊಂಡು ಫ್ಯಾಮಿಲಿ ಸಮೇತ ಸಿನಿಮಾ ವೀಕ್ಷಿಸಿದ್ದರು. ಇದೀಗ 'ಬಾಹುಬಲಿ-2' ದಾಖಲೆಯನ್ನು 'KGF-2' ಅಳಿಸಿದೆ.

ಏ.14ರಂದು 21 ಲಕ್ಷ ಟಿಕೆಟ್‌ ಮಾರಾಟ

ಏ.14ರಂದು 21 ಲಕ್ಷ ಟಿಕೆಟ್‌ ಮಾರಾಟ

5 ವರ್ಷಗಳ ಹಿಂದೆ 'ಬಾಹುಬಲಿ- 2' ಚಿತ್ರಕ್ಕಿದ್ದ ಕ್ರೇಜ್ ಈ ವರ್ಷ 'KGF'- 2ಗೂ ಚಿತ್ರಕ್ಕಿತ್ತು. ಪರಭಾಷಿಕರು ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎಂದು ಕಾದು ಕೂತಿದ್ದರು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿತ್ತು. ಏಪ್ರಿಲ್ 14ರಂದು 21 ಲಕ್ಷ ಟಿಕೆಟ್‌ಗಳು ಮಾರಾಟವಾಗಿತ್ತು. ಅದರಲ್ಲಿ ಸಿಂಹಪಾಲು 'KGF'- 2 ಚಿತ್ರದ್ದಾಗಿತ್ತು. ಇನ್ನು ಒಟ್ಟಾರೆಯಾಗಿ 'KGF'- 2 ಚಿತ್ರದ ಒಟ್ಟು1.77 ಕೋಟಿ ಟಿಕೆಟ್‌ಗಳನ್ನು ಪ್ರೇಕ್ಷಕರು ಬುಕ್‌ಮೈ ಶೋನಲ್ಲಿ ಖರೀದಿಸಿದ್ದರು.

ವೀಕೆಂಡ್‌ನಲ್ಲಿ 'KGF'- 2 ದಾಖಲೆ

ವೀಕೆಂಡ್‌ನಲ್ಲಿ 'KGF'- 2 ದಾಖಲೆ

ಈ ವರ್ಷ ಬಿಡುಗಡೆಯಾದ ಸಿನಿಮಾಗಳಲ್ಲಿ ರಾಜಮೌಳಿ 'RRR' ಭಾರೀ ನಿರೀಕ್ಷೆ ಮೂಡಿಸಿತ್ತು. ಮೌಳಿ ಜೊತೆಗೆ ಜ್ಯೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಕೈ ಜೋಡಿಸಿದ್ದು ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ 'KGF'- 2 ಎದುರು ಮೌಳಿ ದೃಶ್ಯಕಾವ್ಯ ಚಿಕ್ಕದಾಗಿ ಬಿಡ್ತು. ವೀಕೆಂಡ್‌ನಲ್ಲಿ 'KGF'- 2 ಚಿತ್ರದ 34% ಟಿಕೆಟ್‌ಗಳು ಬಿಕರಿಯಾಗಿ ದಾಖಲೆ ಬರೆದಿದೆ.

ಟಾಪ್‌ 10 ಸಿನಿಮಾ ಪಟ್ಟಿ

ಟಾಪ್‌ 10 ಸಿನಿಮಾ ಪಟ್ಟಿ

ಇನ್ನು ಈ ವರ್ಷ ಬುಕ್‌ಮೈ ಶೋನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಟಾಪ್‌ 10 ಸಿನಿಮಾಗಳು ಲಿಸ್ಟ್ ಇಲ್ಲಿದೆ. 'KGF'- 2, 'RRR' ನಂತರದ ಸ್ಥಾನಗಳಲ್ಲಿ ಕ್ರಮವಾಗಿ 'ಕಾಂತಾರ', 'ದಿ ಕಾಶ್ಮೀರಿ ಫೈಲ್ಸ್', 'ಪೊನ್ನಿಯಿನ್ ಸೆಲ್ವನ್', 'ಬ್ರಹ್ಮಾಸ್ತ್ರ-1', 'ವಿಕ್ರಮ್', 'ಡಾಕ್ಟರ್ ಸ್ಟ್ರೇಂಜ್: ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್​ನೆಸ್' ಸಿನಿಮಾಗಳಿವೆ.

More from Filmibeat

English summary
KGF 2 breaking a record of Baahubali 2 to become the top-selling film on Book MyShow. Book MyShow reveals their Top 10 Blockbusters 2022. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X