ಕೆನಡಾದಲ್ಲೂ 'ಕೆಜಿಎಫ್‌ 2' ಸಿನಿಮಾದ್ದೇ ಹವಾ: ದಾಖಲೆ ಕಲೆಕ್ಷನ್!

ರಾಕಿಂಗ್ ಸ್ಟಾರ್ ಯಶ್‌ ಅಭಿನಯದ 'ಕೆಜಿಎಫ್‌ 2' ಚಿತ್ರ ವಿಶ್ವದಾದ್ಯಂತ ಭಾರೀ ಅಲೆ ಸೃಷ್ಟಿ ಮಾಡಿತ್ತು. ಐದು ಭಾಷೆಗಳಲ್ಲಿ ರಿಲೀಸ್‌ ಆಗಿದ್ದ ಸಿನಿಮಾ ನಿರೀಕ್ಷೆಗೂ ಮೀರಿ ಪ್ರೇಕ್ಷಕರನ್ನು ತಲುಪಿತ್ತು. ಅಷ್ಟೇ ಮಟ್ಟದಲ್ಲಿ ಕಲೆಕ್ಷನ್ ಕೂಡ ಮಾಡಿ ಮುನ್ನುಗುತ್ತಿದೆ.

ಸದ್ಯ 'ಕೆಜಿಎಫ್‌ ಚಾಪ್ಟರ್ 2' ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದಿವೆ. ಈಗಲೂ ಕೂಡ ರಾಕಿ ಭಾಯ್ ಹವಾ ಕಡಿಮೆಯಾಗಿಲ್ಲ. ಈಗಲೂ ಹಲವು ಕಡೆ ಸಿನಿಮಾ ಪ್ರದರ್ಶನವಾಗುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ದಕ್ಷಿಣ ಭಾರತದ ಸಿನಿಮಾ ಈಗ ವಿಶ್ವದಾದ್ಯಂತ ರಾರಾಜಿಸಿದ್ದು, ಯಶಸ್ಸಿನ ಉತ್ತುಂಗದಲ್ಲಿದೆ. 'ಕೆಜಿಎಫ್‌ 2' ಸಿನಿಮಾ ಅಬ್ಬರಕ್ಕೆ ಬಾಲಿವುಡ್‌ನ ಬಿಗ್ ಸ್ಟಾರ್ ಸಿನಿಮಾಗಳೇ ಮೂಲೆಗುಂಪಾಗಿದ್ದವು. ಸದ್ಯ ರಾಷ್ಟ್ರ ಮಟ್ಟದಲ್ಲಿ ದಾಖಲೆ ಕಲೆಕ್ಷನ್ ಮಾಡಿದ್ದ 'ಕೆಜಿಎಫ್‌ 2' ಈಗ ವಿದೇಶದಲ್ಲೂ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಕನ್ನಡದ ಸಿನಿಮಾ ಆಗಸದ ಎತ್ತರಕ್ಕೆ ಏರಿದೆ.

 ಕೆನಡಾದಲ್ಲಿ 'ಕೆಜಿಎಫ್ 2' ಸಾಧನೆ

ಕೆನಡಾದಲ್ಲಿ 'ಕೆಜಿಎಫ್ 2' ಸಾಧನೆ

ಏಪ್ರಿಲ್ 14 ರಂದು ವಿಶ್ವದಾದ್ಯಂತ ರಿಲೀಸ್ ಆದ 'ಕೆಜಿಎಫ್‌ 2' ಗೆ ಎಲ್ಲೆಡೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಅದರಂತೆ ವಿದೇಶಗಳಲ್ಲೂ ಕೂಡ 'ಕೆಜಿಎಫ್‌ 2' ಹವಾ ಜೋರಾಗಿತ್ತು. ವಿಶೇಷವಾಗಿ ಉತ್ತರ ಅಮೆರಿಕದ ಕೆನಡಾದಲ್ಲಿ 'ಕೆಜಿಎಫ್ 2' ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಕೆನಡಾದಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ 2 ವಾರಗಳ ಕಾಲ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ಬರೆದಿದೆ. ಇದಿಷ್ಟೇ ಅಲ್ಲದೆ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, 'ಕೆಜಿಎಫ್‌ 2' ಹೊಸ ದಾಖಲೆ ಸೃಷ್ಟಿಸಿದೆ.

 150ಕ್ಕೂ ಹೆಚ್ಚು ಪ್ರದರ್ಶನ ಕಂಡ 'ಕೆಜಿಎಫ್‌ 2' ಚಿತ್ರ

150ಕ್ಕೂ ಹೆಚ್ಚು ಪ್ರದರ್ಶನ ಕಂಡ 'ಕೆಜಿಎಫ್‌ 2' ಚಿತ್ರ

ಕೆನಡಾದಲ್ಲಿ 'ಕೆಜಿಎಫ್‌ ಚಾಪ್ಟರ್‌ 2' ಸಿನಿಮಾದ ಹೊಸ ದಾಖಲೆ ಸೃಷ್ಟಿಸಿರುವುದು ಭಾರತೀಯ ಸಿನಿಮಾ ರಂಗಕ್ಕೆ ಹೊಸ ಮೈಲಿಗಲ್ಲಾಗಿದೆ. ಈವರೆಗೂ 'ಕೆಜಿಎಫ್‌ 2' ಚಿತ್ರದ ಒಟ್ಟು 30,000 ಟಿಕೆಟ್‌ಗಳು ಮಾರಾಟವಾಗಿದ್ದು, ಇಡೀ ಕೆನಡಾದಲ್ಲಿ 'ಕೆಜಿಎಫ್‌ 2' ಚಿತ್ರ 150ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಈ ಮೂಲಕ ಕೆನಡಾ ಸಿನಿ ಪ್ರೇಕ್ಷಕರನ್ನು ಸೆಳಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಕನ್ನಡದ ಸಿನಿಮಾ ಬೇರೆ ದೇಶದಲ್ಲಿ ಅಬ್ಬರಿಸಿ ದಾಖಲೆ ಸೃಷ್ಟಿಸಿರುವುದು ವಿಶೇಷವಾಗಿದ್ದು, ಒಟ್ಟಾರೆ ಕೆನಡಾದಲ್ಲಿ 2 ಲಕ್ಷ ಡಾಲರ್‌ಗಿಂತಲೂ ಅಧಿಕ ಕಲೆಕ್ಷನ್ ಮಾಡಿಕೊಳ್ಳುವಲ್ಲಿ 'ಕೆಜಿಎಫ್ 2' ಸಿನಿಮಾ ಯಶಸ್ವಿಯಾಗಿದೆ.

 ಎಲ್ಲಾ ದಾಖಲೆಗಳನ್ನು ಮುರಿದ 'ಕೆಜಿಎಫ್ 2'

ಎಲ್ಲಾ ದಾಖಲೆಗಳನ್ನು ಮುರಿದ 'ಕೆಜಿಎಫ್ 2'

'ಕೆಜಿಎಫ್‌ 2' ರಿಲೀಸ್‌ ಆದ ದಿನದಿಂದ ಇಲ್ಲಿಯವರೆಗೂ ಭರ್ಜರಿಯಾಗಿ ಪ್ರದರ್ಶನ ಕಂಡಿದೆ. ಎಲ್ಲಾ ಭಾಷೆಗಳಲ್ಲೂ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಾಲಿವುಡ್‌ನಲ್ಲಿ ಹಿಂದಿ ಸಿನಿಮಾಗಳನ್ನೇ ಹಿಂದಿಕ್ಕಿ ಬಾಲಿವುಡ್ ಬಾಕ್ಸಾಫೀಸ್‌ ಅನ್ನು ಧೂಳೀಪಟ ಮಾಡಿದೆ. ಒಟ್ಟಾರೆ ಈವರೆಗೆ 1221 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತದಲ್ಲಿ ಹೆಚ್ಚು ಕಲೆಕ್ಷನ್ ಮಾಡಿಕೊಂಡ ಎರಡನೇ ಸಿನಿಮಾ ಎನಿಸಿಕೊಂಡಿದೆ 'ಕೆಜಿಎಫ್‌ 2'.

 ಪ್ರಶಾಂತ್ ನೀಲ್‌ಗೆ ಸ್ಟಾರ್ ಪಟ್ಟ ಕೊಟ್ಟ 'ಕೆಜಿಎಫ್ 2'

ಪ್ರಶಾಂತ್ ನೀಲ್‌ಗೆ ಸ್ಟಾರ್ ಪಟ್ಟ ಕೊಟ್ಟ 'ಕೆಜಿಎಫ್ 2'

'ಕೆಜಿಎಫ್‌ 2' ಸಕ್ಸಸ್‌ನಿಂದಾಗಿ ಯಶ್ ಜಾಗತಿಕ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಆ ಮಟ್ಟಿಗೆ ಈ ಸಿನಿಮಾ ಸಕ್ಸಸ್‌ ತಂದು ಕೊಟ್ಟಿದೆ. 'ಕೆಜಿಎಫ್ 1' ಗಿಂತ ಚಾಪ್ಟರ್‌ 2 ಸಿನಿಮಾ ಯಶ್‌ಗೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದು, ಸ್ಟಾರ್‌ ನಟರಾಗಿದ್ದಾರೆ. ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಸ್ಟಾರ್ ನಿರ್ದೇಶಕರಾಗಿದ್ದು, ಅವರ ಜೊತೆ ಕೆಲಸ ಮಾಡಲು ಬಾಲಿವುಡ್‌ ಸ್ಟಾರ್‌ಗಳು ಸೇರಿದಂತೆ ಹಲವು ನಟ ನಟಿಯರು ಕಾದು ಕುಳಿತಿದ್ದಾರೆ. ಆ ರೇಂಜ್‌ನಲ್ಲಿ 'ಕೆಜಿಎಫ್‌ 2' ಸಿನಿಮಾ ಹೈಪ್ ಕ್ರಿಯೇಟ್ ಮಾಡಿಕೊಟ್ಟಿದೆ. ಸದ್ಯ ಈಗ ಯಶ್ ಹಾಗೂ ಪ್ರಶಾಂತ್ ನೀಲ್ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
KGF 2 Breaks Existing Records of Kannada Film In Canada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X