KG Chapter 2 Censor : ಸೆನ್ಸಾರ್ ಪಾಸ್ ಆಯ್ತು 'ಕೆಜಿಎಫ್ 2', 6000 ಸ್ಕ್ರೀನ್‌ಗಳಲ್ಲಿ ಅಬ್ಬರ! ಸಿನಿಮಾದ ಅವಧಿ ಎಷ್ಟು?
ನಟ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಚಿತ್ರದ ಟ್ರೈಲರ್ ಕೂಡ ಇತ್ತಿಚೆಗೆ ರಿಲೀಸ್ ಆಗಿದ್ದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಮೇಲೆ ನಿರೀಕ್ಷೆಯನ್ನು ಹೆಚ್ಚು ಮಾಡಿದೆ ಟ್ರೈಲರ್. ಈಗ ಚಿತ್ರತಂಡ ಸೆನ್ಸಾರ್ ಕೂಡ ಪಾಸ್ ಮಾಡಿದೆ. ಚಿತ್ರಕ್ಕೆ ಸೆನ್ಸಾರ್ ಬೋರ್ಡ್‌ನಿಂದ ಪ್ರಮಾಣ ಪತ್ರ ಸಿಕ್ಕಿದೆ.
ಸದ್ಯ ಕನ್ನಡದಲ್ಲಿ ಹೆಚ್ಚು ನಿರೀಕ್ಷೆ ಇರುವ ಸಿನಿಮಾ ಅಂದರೆ ಅದು 'ಕೆಜಿಎಫ್ 2'. ಈ ಚಿತ್ರದ ಬಳಿಕ ಯಾವ ಸಿನಿಮಾ ಈ ಮಟ್ಟಿನ ಕ್ರೇಜ್ ಜೊತೆ ರಿಲೀಸ್ ಆಗುತ್ತೆ ಎನ್ನುವುದನ್ನು ನೋಡಬೇಕಿದೆ. ಇನ್ನು ಈ ಚಿತ್ರ ಕರ್ನಾಟಕದಲ್ಲಿ ಮಾತ್ರ ಅಲ್ಲ, ದೇಶಾದ್ಯಂತ ಸಂಚಲನ ಮೂಡಿಸಿದೆ.
'ಕೆಜಿಎಫ್ 2' ಚಿತ್ರಕ್ಕೆ ಹಿಂದಿಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಚಿತ್ರದ ಟ್ರೈಲರ್ ಕೂಡ ಹೆಚ್ಚಿನ ವೀವ್ಸ್ ಪಡೆದು ದಾಖಲೆ ಬರೆದಿದ್ದು ಹಿಂದಿಯಲ್ಲಿಯೇ. ಕನ್ನಡ, ತೆಲುಗುಗಿಂತಲು ಹಿಂದಿಯಲ್ಲಿ ರಿಲೀಸ್ ಅದ ಚಿತ್ರದ ಟ್ರೈಲರ್ ಹೆಚ್ಚು ವೈರಲ್ ಆಗಿದೆ. ಉತ್ತರ ಭಾರತದ ಸಿನಿ ಪ್ರೇಕ್ಷಕರು 'ಕೆಜಿಎಫ್ 2' ಚಿತ್ರ ನೋಡಲು ಕಾತರರಾಗಿದ್ದಾರೆ.

'ಕೆಜಿಎಫ್ 2'ಗೆ ಸಿಕ್ಕಿತು U/A ಸೆನ್ಸಾರ್ ಪ್ರಮಾಣ ಪತ್ರ!
'ಕೆಜಿಎಫ್ 2' ಚಿತ್ರದ ರಿಲೀಸ್ ಹತ್ತಿರ ಆಗುತ್ತಿದೆ. ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನ ಚಿತ್ರ ಸೆನ್ಸಾರ್ ಪಾಸ್ ಆಗಬೇಕು. ಸದ್ಯ ಕೆಜಿಎಫ್ 2 ಚಿತ್ರ ಸೆನ್ಸಾರ್ ಮುಗಿಸಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇನ್ನು ಚಿತ್ರದ ಪ್ರದರ್ಶನ ಸಮಯ 2 ಗಂಟೆ 48 ನಿಮಿಷ ಇದೆ. ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಎಲ್ಲೆಡೆ ವೈರಲ್ ಆಗಿದೆ. ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಯಶ್ ಅಭಿಮಾನಿಗಳು ಈ ಪತ್ರವನ್ನು ಹಂಚಿಕೊಂಡು ಸಂಭ್ರಮಿಸುತ್ತಾ ಇದ್ದಾರೆ.

ದೇಶಾದ್ಯಂತ 6 ಸಾವಿರ ಸ್ಕ್ರೀನ್‌ಗಳಲ್ಲಿ 'ಕೆಜಿಎಫ್ 2' ಅಬ್ಬರ!
ಇನ್ನು 'ಕೆಜಿಎಫ್ 2' ಚಿತ್ರದ ಹವಾ ಹೇಗಿದೆ ಎಂದರೆ. ಚಿತ್ರ ದೇಶದಾದ್ಯಂತ 6 ಸಾವಿರ ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ. ಪ್ಯಾನ್ ಇಂಡಿಯಾ ಒಟ್ಟಿಗೆ ರಿಲೀಸ್ ಆಗುತ್ತಿರುವ ಕಾರಣ, ಚಿತ್ರ ಅಧಿಕ ಪರದೆಗಳಲ್ಲಿ ತೆರೆಕಾಣಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ 'ಕೆಜಿಎಫ್ 2' ಒಟ್ಟಿಗೆ ತೆರೆಗೆ ಬರುತ್ತಿದೆ. ಇನ್ನು ಇಂಡಿಯಾ ಬಿಟ್ಟರೆ ಹೊರ ದೇಶಗಳಲ್ಲಿ ಕೂಡ ಸಿನಿಮಾಗೆ ಹೆಚ್ಚಿ ಬೇಡಿಕೆ ಇದೆ.

ರಿಲೀಸ್‌ಗೂ ಮುನ್ನವೇ 'ಕೆಜಿಎಫ್ 2' ರೆಕಾರ್ಡ್!
ಇನ್ನು 'ಕೆಜಿಎಫ್ 2' ಚಿತ್ರ ರಿಲೀಸ್‌ಗೂ ಮುನ್ನವೇ ಹಲವು ದಾಖಲೆಗಳನ್ನು ಬರೆಯುತ್ತಾ ಇದೆ. ಹಾಗಾಗಿ ಚಿತ್ರ ರಿಲೀಸ್ ಬಳಿಕ ಯಾವ ಮಟ್ಟದ ದಾಖಲೆ ಮಾಡಬಹುದು ಎನ್ನುವ ಲೆಕ್ಕಾಚಾರಗಳು ಅದಾಗಲೇ ಶುರುವಾಗಿ ಬಿಟ್ಟಿವೆ. ಈ ಸಿನಿಮಾ ದಾಖಲೆ ಮಾಡುತ್ತೆ ಎನ್ನುವುದಕ್ಕೆ ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಾಕ್ಷಿ ಆಗಿದೆ. 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆದ 24 ಗಂಟೆಗಳಲ್ಲಿ ಬರೋಬ್ಬರಿ 10 ಕೋಟಿಗೂ ಹೆಚ್ಚು ವೀವ್ಸ್‌ಗಳನ್ನು ಟ್ರೈಲರ್ ಗಳಿಸಿಕೊಂಡು ದಾಖಲೆ ಮಾಡಿದೆ.

ಟಿವಿ ರೈಟ್ಸ್‌ನಲ್ಲೂ 'ಕೆಜಿಎಫ್ 2' ದಾಖಲೆ!
ತೆಲುಗಿನ ಸೂಪರ್ ಸ್ಟಾರ್‌ಗಳ ಸಿನಿಮಾದ ಟಿವಿ ರೈಟ್ಸ್ ಕೂಡ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗುವುದು ಅಪರೂಪ. ಅದರಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾದ ತೆಲುಗು ಟಿವಿ ರೈಟ್ಸ್ ಇಷ್ಟರ ಮಟ್ಟಿಗೆ ಸೇಲ್ ಆಗಿರೋದು ಅಚ್ಚರಿಯ ವಿಚಾರವೇ ಸರಿ. ಇನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು 'ಕೆಜಿಎಫ್ 2' ನ ತೆಲುಗು ಚಿತ್ರದ ಹಕ್ಕನ್ನು 66 ಕೋಟಿಗೆ ಪಡೆದುಕೊಂಡಿದ್ದಾರಂತೆ.


Click it and Unblock the Notifications











